aglasem.com
Schools Admission Mock Test Playground
ClassChoose class
StateSelect state

Kerala Plus Two Model Question Paper Kannada

Download Kerala Plus Two Model Question Paper Kannada PDF. Here at aglasem.com get latest 12th class Sample Papers. Kerala Plus Two Kannada Model Question Paper is given below. More Detail
Kerala Plus Two Model Question Paper Kannada - Page 1 of 4

Finished viewing? Save it for later —

Download Kerala Plus Two Model Question Paper Kannada (PDF · 4 pages)
Downloaded 39 times

About Kerala Plus Two Model Question Paper Kannada

Kerala Plus Two Model Question Paper Kannada is available here for free download. Published by Kerala Board for Class 12, this sample paper can be viewed online or downloaded as a PDF (4 pages). Candidates preparing for Class 12 can use Kerala Plus Two Model Question Paper Kannada to understand the exam pattern, the type of questions asked, and the overall difficulty level.

Frequently Asked Questions

How can I download Kerala Plus Two Model Question Paper Kannada?

Open this page and click the Download button to save Kerala Plus Two Model Question Paper Kannada as a PDF. It is completely free on AglaSem Docs.

Is Kerala Plus Two Model Question Paper Kannada free to download?

Yes. Kerala Plus Two Model Question Paper Kannada can be viewed online and downloaded as a PDF free of cost on AglaSem Docs.

How many pages does Kerala Plus Two Model Question Paper Kannada have?

Kerala Plus Two Model Question Paper Kannada contains 4 pages, which you can read online or download together as a single PDF.

Where can I find more Class 12 study material?

You can find more Class 12 question papers, sample papers, syllabus, and answer keys on AglaSem Docs.

Kerala Plus Two Model Question Paper Kannada – Text

Read the full text of this sample paper below — useful to quickly search, copy and reference the content online without downloading the PDF.

📄 View text version (5 pages)

Page 1

SAMPLE
PAPER

Page 2

HIGHER SECONDARY SAMPLE QUESTION PAPER
PLUS TWO
PART II KANNADA
Score: 80 Marks Time: 21/2 Hours

ವಿದ್ಯಾರ್ಥಿಗಳಿಗೆ ಸೂಚನೆಗಳು:
➢ ಮೊದಲ 15 ನಿಮಿಷ ಕೂಲ್ ಓಫ್ ಸಮಯವಾಗಿದೆ. ಪ್ರಶ್ನೆಗಳನ್ನು ಓದಿ
ಅರ್ಥೈಸಿಕೊಳ್ಳುವುದಕ್ಕೂ ಉತ್ತರಗಳ ಬಗ್ಗೆ ಯೋಚಿಸುವುದಕ್ಕೂ ಈ ಸಮಯವನ್ನು
ಬಳಸಿಕೊಳ್ಳಬಹುದು.
➢ ಪ್ರಶ್ನೆಗಳನ್ನು ಮತ್ತು ಸೂಚನೆಗಳನ್ನು ಸರಿಯಾಗಿ ಓದಿ ಅರ್ಥೈಸಿಕೊಂಡ ಮೇಲೆ ಉತ್ತರ
➢ ಉತ್ತರ ಬರೆಯುವಾಗ ಅಂಕ ಸಮಯ ಮೊದಲಾದವುಗಳನ್ನು ಪರಿಗಣಿಸಬೇಕು.
➢ ಕೊಟ್ಟಿರುವ ಸೂಚನೆಗಳನ್ನು ಗಮನವಿಟ್ಟು ಓದಿರಿ.

1 ರಿಂದ 4 ರವರೆಗಿನ ಪ್ರಶ್ನೆಗಳಿಗೆ ಸರಿಯಾದ ಉತ್ತರವನ್ನು ಆವರಣದಿಂದ ಆರಿಸಿ
ಬರೆಯಿರಿ. (4×1=4)
1. 'ಊರ್ಮಿಳಾ' ಕವನವನ್ನು ಬರೆದ ಕವಿ ಯಾರು?
(ಕಯ್ಯಾರ ಕಿಞಣ್ಣ ರೈ, ಚಂದ್ರಶೇಖರ ಕಂಬಾರ, ಗೋಪಾಲಕೃಷ್ಣ ಅಡಿಗ, ಡಾ. ಶಿವರಾಮ
ಕಾರಂತ)
2. ಸತತ ಪ್ರಯತ್ನದ ಮೂಲಕ ರೇಡಿಯಂ ಇರುವಿಕೆಯನ್ನು ಪತ್ತೆಹಚ್ಚಿದವರು ಯಾರು?
(ಸರ್ ಐಸಾಕ್ ನ್ಯೂಟನ್, ರಾಮಾನುಜನ್, ಮೇರಿ ಕ್ಯೂರಿ, ಸಿ. ವಿ. ರಾಮನ್)
3. "ಕೈ ಕೆಸರಾದರೆ ಬಾಯಿ ಮೊಸರೆಂಬ ಹಿರಿಯರ ಅನುಭವ ಸತ್ಯ" ಈ ಸಾಲು ಬರುವ ಕವನ
ಯಾವುದು?
(ಸಾವಿರಾರು ನದಿಗಳು, ಆಗದು ಎಂದು, ನಡೆವುದೊಂದೇ ಭೂಮಿ, ನಾಡಸಿರಿ)
4. 'ಭೂಮಿ' ಪದದ ಪರ್ಯಾಯ ಪದ ಯಾವುದು?
(ಧರಣಿ, ನದಿ, ಚಂದ್ರ, ಭರಣಿ)
5 ರಿಂದ 10 ರವರೆಗಿನ ಪ್ರಶ್ನೆಗಳಲ್ಲಿ ಯಾವುದಾದರೂ ನಾಲ್ಕು ಪ್ರಶ್ನೆಗಳಿಗೆ ಸೂಚನೆಯಂತೆ
ಉತ್ತರಿಸಿರಿ. (4×1=4)
5. ಆಶ್ಚರ್ಯ - ಈ ಪದದ ತದ್ಭವರೂಪ ಬರೆಯಿರಿ.
6. 'ಅವನು ಮನೆ ಬಿಟ್ಟು ಎಲ್ಲಿಗೂ ಹೋಗನು' - ಈ ವಾಕ್ಯದಲ್ಲಿ ಬಂದಿರುವ ನಿಷೇಧಾರ್ಥಕ
ಪದವನ್ನು ಗುರುತಿಸಿರಿ.
7. ಪೇಪರ್ - ಈ ಅನ್ಯದೇಶಿಯ ಪದಕ್ಕೆ ಕನ್ನಡದಲ್ಲಿ ಉಪಯೋಗಿಸುವ ಸಂವಾದಿ ಪದ
ಯಾವುದು?

Page 3

8. ಮಲ್ಲಿಗೆಯಾಗು - ಈ ಪದವನ್ನು ವಿಂಗಡಿಸಿ ಬರೆಯಿರಿ.
9. ಹರಿಶ್ಚಂದ್ರನನ್ನು ಪರೀಕ್ಷಿಸಲು ಕೃತಕಾಗ್ನಿಯನ್ನು ಸೃಷ್ಟಿಸಿದವರು ಯಾರು?
10. ಕರ್ಬೊಗೆ - ಈ ಪದದ ಸಮಾಸ ಬರೆಯಿರಿ.
11 ರಿಂದ 17 ರವರೆಗಿನ ಪ್ರಶ್ನೆಗಳಲ್ಲಿ ಯಾವುದಾದರೂ ಐದು ಪ್ರಶ್ನೆಗಳಿಗೆ
ಉತ್ತರಿಸಿರಿ. (5×2=10)
11. ಈ ಕೆಳಗಿನ ಮಿಶ್ರವಾಕ್ಯವನ್ನು ಸರಳ ವಾಕ್ಯವಾಗಿ ಪರಿವರ್ತಿಸಿರಿ.
ನಾಯಿಗಳು ಅತ್ತ ಹೋದೊಡನೆ ಹಂದಿ ನಿರಾತಂಕವಾಗಿ ಓಡಿ ಕಾಡು ಸೇರಿತು.
12. ಪ್ಲಾಸ್ಟಿಕ್ ಪರಿಸರಕ್ಕೆ ಹಾನಿ ಎಂಬ ವಿಷಯಕ್ಕೆ ಸಂಬಂಧಿಸಿದ ಎರಡು ಘೋಷಣಾ ವಾಕ್ಯ ಗಳನ್ನು
ರಚಿಸಿರಿ.
13. ಕೆಳಗಿನ ವಾಕ್ಯದಲ್ಲಿರುವ ಭಾಷಿಕ ತಪ್ಪುಗಳನ್ನು ಸರಿಪಡಿಸಿ ಪುನಃ ಬರೆಯಿರಿ.
ಎಲಿ ಹೂಗುತ್ತ ಯವ ಹುಳಿಯ ಬಾಯಿಗೆ ತುತ್ತಾದನೋ? ಯಾವ ಕಲ್ಲಕಾಕರ ಕೈಗೆ ಸಿಕನೋ?
14. ಈ ಕೆಳಗಿನ ಪದಪುಂಜಗಳ ಅರ್ಥ ಬರೆಯಿರಿ.
ಆಬಾಲವೃದ್ಧ , ಆಮೂಲಾಗ್ರ
15. 1924 ರಲ್ಲಿ ತೆರೆಕಂಡ ಕನ್ನಡದ ಮೊದಲ ಟಾಕೀ ಚಿತ್ರ ಯಾವುದು?
16. 'ಕೈ ಕೆಸರಾದರೆ ಬಾಯಿ ಮೊಸರು' ಎಂಬ ಗಾದೆ ಮಾತಿನ ಅರ್ಥವನ್ನು ಎರಡು ವಾಕ್ಯ ಗಳಲ್ಲಿ
17. ಲಂಚಕ್ಕೆ , ತಂಗಿಯ - ಈ ಪದಗಳಲ್ಲಿ ಇರುವ ವಿಭಕ್ತಿ ಪ್ರತ್ಯಯಗಳನ್ನು ಬರೆಯಿರಿ.
18 ರಿಂದ 22 ರವರೆಗಿನ ಪ್ರಶ್ನೆಗಳಲ್ಲಿ ಯಾವುದಾದರೂ ನಾಲ್ಕು ಪ್ರಶ್ನೆಗಳಿಗೆ
ಉತ್ತರಿಸಿರಿ. (4×4=16)
18. ಹೊಂದಿಸಿ ಬರೆಯಿರಿ.
ಅವರವರ ದಾರಿ - ಪುರಂದರ ದಾಸರು
ಸಾವಿರಾರು ನದಿಗಳು - ಆರ್. ಎನ್. ಜಯಗೋಪಾಲ್
ಜಾಲಿಯ ಮರದಂತೆ - ಜಿ. ಎಸ್. ಶಿವರುದ್ರಪ್ಪ
ಆಗದು ಎಂದು - ಡಾ. ಸಿದ್ದಲಿಂಗಯ್ಯ
19. 'ಸಕ್ಕರೆಗೆ ಉಪ್ಪಂ ಸರಿಮಾಳ್ಪರೆ' ಪದ್ಯಭಾಗದಲ್ಲಿ ಬರುವ "ಕಾಲಾನುಕಾಲಕ್ಕೆ ಬಡವಂ
ಬಲ್ಲಿದನಾಗನೇ" ಎಂಬುದನ್ನು ಕವಿ ಯಾವೆಲ್ಲ ಉದಾಹರಣೆಗಳ ಮೂಲಕ ಸಮರ್ಥಿಸಿದ್ದಾರೆ?
20. ಕೆಳಗಿನ ವಚನದ ಸ್ವಾರಸ್ಯವನ್ನು ಬರೆಯಿರಿ.
ನಡೆಯುವುದೊಂದೆ ಭೂಮಿ ಕುಡಿವುದೊಂದೇ ನೀರು,
ಸುಡುವಗ್ನಿ ಒಂದೇ ಇರುತಿರಲು ಕುಲಗೋತ್ರ
ನಡುವೆ ಎತ್ತಣದು? ಸರ್ವಜ್ಞ

Page 4

21. ಶ್ರೀಮಂತರ ಶೋಷಣೆಯ ವಿರುದ್ಧ ಬಡವರ ಪ್ರತಿಭಟನೆಯ ಕೂಗು 'ಸಾವಿರಾರು ನದಿಗಳು'
ಕವನದಲ್ಲಿ ಹೇಗೆ ಚಿತ್ರಿತವಾಗಿದೆ? ಬರೆಯಿರಿ.
22. ಊರ್ಮಿಳೆಯಲ್ಲಿ ಕವಿ ಕಯ್ಯಾರರು ಕಂಡುಕೊಂಡ ಹಿರಿಮೆಯನ್ನು 'ಊರ್ಮಿಳಾ' ಕವನದ
ಆಧಾರದಲ್ಲಿ ಬರೆಯಿರಿ.
23 ರಿಂದ 28 ರವರೆಗಿನ ಪ್ರಶ್ನೆಗಳಲ್ಲಿ ಯಾವುದಾದರೂ ಐದು ಪ್ರಶ್ನೆಗಳಿಗೆ ಒಂದು ಪುಟಕ್ಕೆ
ಕಡಿಮೆಯಾಗದಂತೆ ಉತ್ತರಿಸಿರಿ. (5×6=30)
23. ವಿದೇಶದಲ್ಲಿ ನೆಲೆಸಿರುವ ಮಗನ ಕುರಿತು ಅಪ್ಪನು ಸಿಡಿಮಿಡಿಗೊಳ್ಳುವುದೇಕೆ ಎಂಬುದನ್ನು
'ಅವರವರ ದಾರಿ' ಕವನದ ಹಿನ್ನೆಲೆಯಲ್ಲಿ ಬರೆಯಿರಿ.
24. ಪುರಂದರದಾಸರು ದುರ್ಜನರನ್ನು ಜಾಲಿಯ ಮರಕ್ಕೆ ಹೋಲಿಸಿರುವುದರ ಔಚಿತ್ಯವೇನು?
25. ಡಾ. ಮಾಸ್ತಿ ವೆಂಕಟೇಶ ಅಯ್ಯಂಗಾರ್ ಅವರು ಬರೆದ 'ಸುಬ್ಬಣ'್ಣ ಕಥೆಯಲ್ಲಿ ವೆಂಕಟರಮಣನು
ಸುಬ್ಬಣ್ಣನನ್ನು ಪ್ರಾಪಂಚಿಕ ಜೀವನಕ್ಕೆ ಎಳೆದು ತಂದ ಬಗೆಯನ್ನು ನಿಮ್ಮ ಮಾತುಗಳಲ್ಲಿ
ವಿವರಿಸಿರಿ.
26. ಹಾಡುಗಳು ಸಿನಿಮಾದ ಜೀವಾಳ ಎಂಬುದನ್ನು ನೀವು ನೋಡಿದ ಸಿನಿಮಾದ ಆಧಾರದಲ್ಲಿ
27. ಪ್ರಕೃತಿ ಸಂರಕ್ಷಣೆಯ ಬಗ್ಗೆ ಜನಜಾಗೃತಿ ಉಂಟು ಮಾಡಲು ಕರಪತ್ರವೊಂದನ್ನು ತಯಾರಿಸಿರಿ.
28. 'ತರುಣ ಸೂರ್ಯಂ ಕತ್ತಲೆಯನೆ ಪೊಕ್ಕಂತಾಯ್ತು' ಕಾವ್ಯ ಭಾಗದಲ್ಲಿ ಬರುವ ಚಂದ್ರಮತಿಯ
ಪಾತ್ರ ಚಿತ್ರಣವನ್ನು ಮಾಡಿರಿ.
29 ರಿಂದ 31 ರವರೆಗಿನ ಪ್ರಶ್ನೆಗಳಲ್ಲಿ ಯಾವುದಾದರೂ ಎರಡು ಪ್ರಶ್ನೆಗಳಿಗೆ ಒಂದೂವರೆ ಪುಟಕ್ಕೆ
ಕಡಿಮೆಯಾಗದಂತೆ ಉತ್ತರಿಸಿರಿ. (2×8=16)
29. 'ನೆರೆ' ಕತೆಯಲ್ಲಿ ಬರುವ ನಾಯಿಯ ಸ್ವಾಮಿನಿಷ್ಠೆ ಹಾಗೂ ಪ್ರಾಮಾಣಿಕತೆಯ ಕುರಿತು
ಲೇಖನವನ್ನು ಬರೆಯಿರಿ.
30. 'ಬಣ್ಣದ ಲೋಕ' ಪಾಠದ ಆಧಾರದಲ್ಲಿ ಚಲನಚಿತ್ರದ ಯಶಸ್ವಿಗೆ ಕಾರಣವಾದ ಅಂಶಗಳನ್ನು
ನೀವು ನೋಡಿದ ಚಲನಚಿತ್ರದ ಉದಾಹರಣೆಯ ಮೂಲಕ ವಿಶದಪಡಿಸಿರಿ.
31. 'ಗುರುವಚನಮಲಂಘನೀಯಂ' ಕಾವ್ಯ ಭಾಗದಲ್ಲಿ ದುರ್ಯೋಧನನು ಯುದ್ಧದ ಕೊನೆಯ
ಹಂತದಲ್ಲಿ ಅನುಭವಿಸುವ ಮಾನಸಿಕ ತುಮುಲಗಳನ್ನು ಕವಿ ರನ್ನನು ವಿವರಿಸಿದ ಬಗೆ ಹೇಗೆ?
ತಿಳಿಸಿರಿ.

***********

Page 5

Question Paper Prepared by:

1. Saraswathi Prasanna. P. N - SSHSS Katukkukke (14024)
2. Baby. S - GHSS Paivalike (14081)
3. Prakasha. M - GHSS Bangramanjeshwar (14038)
4. Lalitha. N. R - NHSS Perdala (14098)
5. Asha Naik. A - GHSS Edneer (14044)
6. Dinesha. K - GHSS Padre (14013)
7. Gayathri. A - MS College HSS Perdala Nirchal (14107)
8. Asha Kumari R Rai - Udaya EMHSS Manjeshwar (14036)
9. Lavanya B K - GHSS Mangalpady (14069)

Document Details

Board / OrgKerala Board
ExamClass 12
TypeSample Paper
Pages4
Updated30 Apr 2026