Page 1
SUMMATIVE ASSESSMENT – TERM I
ಕಾಲುವಾರ್ಷಿಕ ಸಂಕಲನಾತ್ಮಕ ಮೌಲ್ಯಮಾಪನ
ಮಾದರಿ ಪ್ರಶ್ನೆ ಪತ್ರಿಕೆ
ಕನ್ನಡ ಮುಂದುವರಿದ ಪಠ್ಯ (KANNADA AT)
ತರಗತಿ: 5 ಸಮಯ: 2 ಗಂಟೆಗಳು
ಸೂಚನೆಗಳು
1. ಮೌಲ್ಯ ಮಾಪನ ಚಟುವಟಿಕೆಗಳು ಪ್ರಾರಂಭವಾಗುವ ಮೊದಲ ಹದಿನೈದು ನಿಮಿಷಗಳು ಕೂಲ್ ಆಪ್ ಟೈಮ್ ಆಗಿದೆ.
ಪ್ರ ಶ್ನೆ ಗಳನ್ನು ಓದಿ ಅರ್ಥೈಸಲು ಮತ್ತು ಉತ್ತರಗಳನ್ನು ಕಂಡುಕೊಳ್ಳಲು ಈ ಸಮಯವನ್ನು ಉಪಯೋಗಿಸಬಹುದು.
2. ಒಟ್ಟು ಆರು ಚಟುವಟಿಕೆಗಳಿವೆ. ಅವುಗಳಲ್ಲಿ ಎರಡು ಚಟುವಟಿಕೆಗಳಿಗೆ ಆಯ್ಕೆಗಳು ಇರುವುದು. ಅವುಗಳಲ್ಲಿ A
ಅಥವಾ B ಯಾವುದಾದರೂ ಒಂದು ಚಟುವಟಿಕೆಗೆ ಉತ್ತರಿಸಿದರೆ ಸಾಕು.
3. ಉತ್ತರಿಸಲು ಆಯ್ಕೆ ಮಾಡಿದ ಚಟುವಟಿಕೆಗಳ ಎಲ್ಲಾ ಉಪಪ್ರ ಶ್ನೆ ಗಳಿಗೂ ಉತ್ತರ ಬರೆಯಬೇಕು.
ಚಟುವಟಿಕೆ - 1 ಓದುವ ಬರೆಯುವ
ಕೆಳಗಿನ ಗದ್ಯವನ್ನು ಓದಿ ನೀಡಿರುವ ಪ್ರಶ್ನೆಗಳಿಗೆ ಉತ್ತರಿಸಿರಿ.
ದುಷ್ಟರಿಂದ ದೂರವಿರಬೇಕು
ಸೀನಣ್ಣನೂ ರಾಮಣ್ಣನೂ ಸುತ್ತಾಡುತ್ತ ಒಂದು ಹಣ್ಣಿನ ತೋಟಕ್ಕೆ ಬಂದರು. ಅಲ್ಲಿ ಒಂದು ದೊಡ್ಡ ಸೀಬೆಯ ಮರದಲ್ಲಿ
ಚೆನ್ನಾಗಿ ಬೆಳೆದ ದೋರೆಗಾಯಿಗಳೂ ಹಣ್ಣುಗಳೂ ಕಂಡು ಬಂದವು. ಸೀನಣ್ಣನು ಮರವೇರಿ "ಅವನ್ನು ಕಿತ್ತು ತಿನ್ನಬೇಕು ಹೋಗೋಣ
ನಡೆ''ಯೆಂದು ರಾಮನಿಗೆ ತಿಳಿಸಿದನು. ಆದರೆ ರಾಮನು "ಇದು ಬೇರೆಯವರ ತೋಟ. ಇದರಲ್ಲಿ ಹಣ್ಣು ಕಿತ್ತರೆ ಕಾವಲುಗಾರನ
ದೊಣ್ಣೆಯ ಪೆಟ್ಟಿಗೆ ಗುರಿಯಾಗಬೇಕಾಗುತ್ತದೆ, ಬೇಡ'' ಎಂದು ವಾದಿಸಿದನು. ಆದರೆ ಸೀನನು ಗೆಳೆಯನ ಮಾತನ್ನು ಲೆಕ್ಕಿಸದೆ
ಮರವೇರಿ ಹಣ್ಣು ಕೀಳತೊಡಗಿದನು. ರಾಮನು ಕೆಳಗಿನಿಂದಲೇ "ಬೇಡ ಇಳಿಯೋ ಸೀನಣ್ಣ, ಕಾವಲುಗಾರ ನೋಡಿಯಾನು"
ಎಂದು ಆತಂಕದಿಂದ ಎಚ್ಚರಿಸುತ್ತಿದ್ದನು. ಸೀನನು ಲಕ್ಷಿಸದೆ ಹತ್ತಾರು ಹಣ್ಣುಗಳನ್ನು ಕೊಯ್ದುಕೊಂಡು ಕೆಳಗಿಳಿಯುವ ವೇಳೆಗೆ
ಸರಿಯಾಗಿ ಕಾವಲುಗಾರನು ಅಲ್ಲಿಗೆ ಬಂದುಬಿಟ್ಟನು. “ಏಕಯ್ಯ, ನಮ್ಮ ತೋಟದ ಹಣ್ಣುಗಳನ್ನು ಕಿತ್ತಿದ್ದೀಯ?'' ಎಂದು ಗದರಿಸಿ,
ಹಿಡಿಯುವ ವೇಳೆಗೆ ಸೀನನು ಹಣ್ಣುಗಳನ್ನು ರಾಮನ ಮಡಿಲಿಗೆ ಹಾಕಿ, "ನಾನಲ್ಲ ಇವನು ಕಿತ್ತದ್ದು, ಇವನೇ ಕಿತ್ತು ನನ್ನ ಕೈಗೆ ಕೊಟ್ಟನು"
ಎಂದು ಹಿತವಚನ ಹೇಳಿದ ರಾಮನ ಮೇಲೆಯೇ ತಪ್ಪು ಹೊರಿಸಿ ಓಡಿಬಿಟ್ಟನು.
ಕಾವಲುಗಾರನು ರಾಮನನ್ನೇ ಹಿಡಿದು "ಏನಯ್ಯಾ, ಕಂಡವರ ತೋಟದ ಹಣ್ಣನ್ನು ಕದ್ದು ತಿನ್ನುತ್ತೀಯೇ?'' ಎಂದು ದೂಷಿಸಿ,
ಎರಡೇಟು ಕೊಟ್ಟು ಓಡಿಸಿದನು. 'ದುಷ್ಟರಿಗೆ ನ್ಯಾಯ ಹೇಳಿದರೆ ಸಾಕೆ, ಅವರಿಂದ ದೂರವಾಗಿಯೂ ಇರಬೇಕು' ಎಂದುಕೊಳ್ಳುತ್ತ
ರಾಮನು ಆ ಗೆಳೆಯನ ಸಹವಾಸವನ್ನೇ ಬಿಟ್ಟನು.
1) 'ಆತಂಕ' - ಇದರ ಸಮಾನಾರ್ಥ ಪದ ಯಾವುದು?
ಅ ) ಭಯ ಆ ) ಕರುಣೆ ಇ ) ಸ್ವಾರ್ಥ ಈ ) ದುಃಖ
K 502 Page 1 of 4
Page 2
2) 'ಎರಡೇಟು' ಎಂಬ ಪದವನ್ನು ವಿಂಗಡಿಸಿ ಬರೆದಾಗ
ಅ ) ಎರಡೇ+ ಏಟು ಆ ) ಎರ +ಡೇಟು
ಇ ) ಎರಡು+ ಏಟು ಈ ) ಎರಡು+ ಎಟು
3) ಕಾವಲುಗಾರನು ರಾಮನಿಗೆ ಏಟು ಕೊಡಲು ಕಾರಣವೇನು?
4) ಈ ಕಥೆಯಲ್ಲಿರುವ ನೀತಿಯನ್ನು ಬರೆಯಿರಿ.
ಚಟುವಟಿಕೆ - 2 ಆಶಯ ಬರೆಯುವ
ಪಾಠ ಭಾಗದಲ್ಲಿ ಅನ್ನದಾತ ಎಂಬ ಪದ್ಯಭಾಗವನ್ನು ಓದಿರುವಿರಿ. ಅದೇ ಆಶಯದ ಒಂದು ಪದ್ಯವನ್ನು ಈ ಕೆಳಗೆ
ಕೊಡಲಾಗಿದೆ.
ಗದ್ದೆ ಕೆಸರನು ಕುಡಿದು, ಕಾಡುಮುಳ್ಳನು ಕಡಿದು,
ಮುಂಜಾನೆಯಿಂದ ಸಂಜೆಯ ವರೆಗೆ ದುಡಿದುಡಿದು,
ಚಳಿಯೊ ಮಳೆಯೋ ಬಿಸಿಲೊ ಬೇಗೆಯೆಲ್ಲವ ಸಹಿಸಿ,
ಬೆವರು ಕಂಬನಿ ರಕುತ ಸುರಿಸಿ ನೆಲವನು ತಣಿಸಿ,
ಕೆಸರಿನಿಂದಮೃತಕಲಶವನೆತ್ತಿ ಕೊಡುತಿರುವೆ;
ಹಸಿದ ಬಾಯಾರಿದ ಜಗತ್ತಿಗನ್ನವನೆರೆವೆ!
ಸಸ್ಯಶ್ಯಾಮಲೆ ಸುಜಲೆ ಸುಫಲೆ ಮಾತೆಯ ಪುಣ್ಯ-
ಪುತ್ರ ರೈತ ನಮಸ್ತೆ! ನೀನೆ ಪರಮ ಪವಿತ್ರ.
1) ಕೊಟ್ಟಿರುವ ಪದ್ಯದ ಆಶಯವನ್ನು ಬರೆಯಿರಿ.
2) ಈ ಕವಿತೆಗೆ ಸೂಕ್ತವಾದ ಶೀರ್ಷಿಕೆ ನೀಡಿರಿ.
3) 'ಕಂಬನಿ' - ಎಂಬ ಪದದ ಅರ್ಥ ಬರೆಯಿರಿ.
ಅ ) ಕಂಬ ಆ ) ಕಣ್ಣೀರು
ಇ ) ಕಂಬ ಮತ್ತು ನೀರು ಈ ) ಬೆವರು
ಚಟುವಟಿಕೆ - 3 ಸಂಭಾಷಣೆ ಬರೆಯುವ
1) 'ಸಮಯದ ಮಹತ್ವ' ಪಾಠ ಭಾಗವನ್ನು ಓದಿರುವಿರಲ್ಲವೇ? ಅಕ್ಬರ್ ಬಾದಷಹನು ತನ್ನ ಸಾಮ್ರಾಜ್ಯದಲ್ಲಿರುವ ನಾಲ್ಕು ಜನ
ಮೂರ್ಖರನ್ನು ಹುಡುಕಿ ತರಲು ಬೀರಬಲ್ಲನಿಗೆ ಹೇಳುತ್ತಾನೆ. ಆಗ ಬೀರಬಲ್ಲನು ಊರೂರು ಸುತ್ತುತ್ತ ನಾಲ್ಕು ಜನ
ಮೂರ್ಖರನ್ನು ಕಂಡುಹಿಡಿಯುತ್ತಾನೆ. ಬೀರಬಲ್ಲ ಮತ್ತು ನಾಲ್ಕನೆಯ ಮೂರ್ಖನ ನಡುವೆ ನಡೆದ ಮಾತುಕತೆಯನ್ನು
ಸಂಭಾಷಣೆಯ ರೂಪದಲ್ಲಿ ಬರೆಯಿರಿ.
2) 'ಕಷ್ಟ' - ಈ ಪದದ ವಿರೋಧಾರ್ಥ ಪದ ಯಾವುದು?
ಅ ) ಸುಖ ಆ ) ಸುಲಭ
ಇ ) ದುಃಖ ಈ ) ಕಾಳಜಿ
K 502 Page 2 of 4
Page 3
ಚಟುವಟಿಕೆ - 4 ಸಂದರ್ಶನ ಪ್ರಶ್ನಾವಳಿ ತಯಾರಿಸುವ
1) 'ಜೇನು ಕೃಷಿ' ಪಾಠದಲ್ಲಿ ಜೇನು ಕೃಷಿಯ ಕುರಿತಾದ ಹೆಚ್ಚಿನ ಮಾಹಿತಿಯನ್ನು ತಿಳಿದುಕೊಂಡಿರುವಿರಿ. ನಮ್ಮ ಊರಿನ
ವಾಣಿಜ್ಯ ಬೆಳೆಯಾದ ಅಡಿಕೆ ಕೃಷಿಯ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಸಂಗ್ರಹಿಸಬೇಕಾಗಿದೆ. ಅದಕ್ಕಾಗಿ ನಿಮ್ಮ ಊರಿನ
ನುರಿತ ಅಡಿಕೆ ಬೆಳೆಯನ್ನು ಬೆಳೆಯುವ ಕೃಷಿಕರೊಬ್ಬರನ್ನು ಸಂದರ್ಶಿಸಲು ಬೇಕಾದ 'ಸಂದರ್ಶನ ಪ್ರಶ್ನಾವಳಿ'ಯನ್ನು
ತಯಾರಿಸಿರಿ.
2) ನಿಮ್ಮ ಊರಿನಲ್ಲಿ ಬೆಳೆಯುವ ಯಾವುದಾದರೂ ಎರಡು ಬೆಳೆಗಳನ್ನು ಹೆಸರಿಸಿರಿ?
3) ಈ ಕೆಳಗೆ ನೀಡಿರುವ ವಾಕ್ಯಗಳಲ್ಲಿರುವ ಸರ್ವನಾಮಪದವನ್ನು ಗುರುತಿಸಿರಿ.
ನಿಶಾ ಮತ್ತು ಖದೀಜಾ ಗೆಳತಿಯರು. ಅವರು ಯಾವಾಗಲೂ ಅನ್ಯೋನ್ಯತೆಯಿಂದ ಇರುತ್ತಿದ್ದರು.
ಅ ) ಅನ್ಯೋನ್ಯ ತೆ ಆ ) ಮತ್ತು
ಇ ) ಅವರು ಈ ) ಯಾವಾಗಲೂ
ಚಟುವಟಿಕೆ - 5 ಅಭಿನಂದನಾ ಪತ್ರ ಬರೆಯುವ ಅಥವಾ ಪತ್ರಿಕಾ ವರದಿ ಬರೆಯುವ
A) ನಮ್ಮ ರಾಜ್ಯದಲ್ಲಿ ಕೃಷಿಯಲ್ಲಿ ಸಾಧನೆ ಮಾಡಿದ ರೈತರಿಗಿರುವ 'ಕರ್ಷಕಶ್ರೀ' ಪ್ರಶಸ್ತಿಯು 2024 ನೇ ಸಾಲಿನಲ್ಲಿ ಕಣ್ಣೂರಿನ
ಅನಿಷ್ ಪಿ.ಬಿ ಎಂಬವರಿಗೆ ಲಭಿಸಿತು. ಪ್ರಶಸ್ತಿಯು 3 ಲಕ್ಷ ರೂಪಾಯಿ, ಚಿನ್ನದ ಪದಕ ಮತ್ತು ಪ್ರಶಸ್ತಿ ಪತ್ರವನ್ನು
ಒಳಗೊಂಡಿದೆ. ಅವರು ತಮ್ಮ 3 ಎಕರೆ ಪ್ರದೇಶದಲ್ಲಿ ಮಾತ್ರವಲ್ಲದೆ 30 ಎಕರೆಯಷ್ಟು ಗುತ್ತಿಗೆಯಾಧಾರದಲ್ಲಿ ಪಡೆದ
ಭೂಮಿಯಲ್ಲಿ ವಿವಿಧ ರೀತಿಯ ಕೃಷಿ ಬೆಳೆಗಳನ್ನು ಬೆಳೆಯುತ್ತಾರೆ. ಕರಿಮೆಣಸು, ಬಾಳೆ, ಗೆಡ್ಡೆ ಗೆಣಸು, ಮೀನಿನ ಕೃಷಿ,
ಹೈನುಗಾರಿಕೆ ಇತ್ಯಾದಿ ಹಲವು ಕೃಷಿಗಳನ್ನು ಮಾಡುತ್ತಾರೆ. ಅವರ ಸಾಧನೆಯನ್ನು ಮೆಚ್ಚಿ ಒಂದು 'ಅಭಿನಂದನಾ ಪತ್ರ' ವನ್ನು
ಬರೆಯಿರಿ.
ಅಥವಾ
B) ಈ ಕೆಳಗಿನ ಭಿತ್ತಿ ಪತ್ರ ವನ್ನು ಓದಿರಿ. ಇದರ ಆಧಾರದಲ್ಲಿ 'ಮಾದಕ ವಸ್ತು ವಿರೋಧಿ ದಿನಾಚರಣೆ'ಯ ಕುರಿತು ಪತ್ರಿಕಾ
ವರದಿ ಬರೆಯಿರಿ.
ಜಿಯುಪಿ ಶಾಲೆ ಕರಮನ
ಮಾದಕ ವಸ್ತು ವಿರೋಧಿ ದಿನಾಚರಣೆ
ತಾರೀಕು 26.6.2025
ಸ್ಥಳ ಶಾಲಾ ಸಭಾಂಗಣ
ಅಧ್ಯ ಕ್ಷರು : ಶ್ರೀಮತಿ ಫಾತಿಮಾ, ವಾರ್ಡು ಸದಸ್ಯರು
ಉದ್ಘಾಟನೆ : ಶ್ರೀ ಕರುಣಾಕರ, ಪಂಚಾಯತ್ ಅಧ್ಯ ಕ್ಷರು
ತರಗತಿ ನಡೆಸುವವರು : ಶ್ರೀಮತಿ ಜಲಜಾಕ್ಷಿ , ಅಧ್ಯಾಪಕಿ
ಎಲ್ಲರಿಗೂ ಆದರದ ಸ್ವಾಗತ
K 502 Page 3 of 4
Page 4
ಚಟುವಟಿಕೆ - 6 ಪಾತ್ರಚಿತ್ರಣ ಬರೆಯುವ ಅಥವಾ ಟಿಪ್ಪಣಿ ಬರೆಯುವ
ಎ
1) 'ಕಾಯಕ ನಿಷ್ಠೆ' ಎಂಬ ಪಾಠ ಭಾಗದಲ್ಲಿ ರಾಜ, ರಾಜನ ಹೆಂಡತಿ, ರೈತ ಮತ್ತು ರೈತನ ಹೆಂಡತಿ ಮುಂತಾದ
ಪಾತ್ರವರ್ಗವನ್ನು ನೀವು ತಿಳಿದಿರುವಿರಿ. ಇವರಲ್ಲಿ ನಿಮಗೆ ಇಷ್ಟವಾದ ಒಬ್ಬ ವ್ಯಕ್ತಿಯ ಪಾತ್ರಚಿತ್ರಣವನ್ನು ಬರೆಯಿರಿ.
2) 'ಟೋಪಿ ಹಾಕು' - ಈ ನುಡಿಗಟ್ಟಿನ ವಿಶೇಷಾರ್ಥವೇನು?
ಅ ) ತಲೆಗೆ ಟೋಪಿ ಹಾಕು ಆ ) ಅಭಿನಂದನೆ ಸಲ್ಲಿಸು
ಇ ) ಮೋಸ ಮಾಡು ಈ ) ಮೆಚ್ಚುಗೆ ವ್ಯಕಪ
್ತ ಡಿಸು
ಅಥವಾ ಬಿ
1) ನಿಮಗೆ ಹಲವು ಕೃ ಷಿಗಳು, ಅವುಗಳನ್ನು ಬೆಳೆಸುವ ವಿಧಾನಗಳು ತಿಳಿದಿವೆ. ತೆಂಗು ಕೃ ಷಿಯ ಕುರಿತಾಗಿ ನಿಮಗೆ
ತಿಳಿದಿರುವ ಮಾಹಿತಿಗಳನ್ನು ಒಟ್ಟುಗೂಡಿಸಿ ಟಿಪ್ಪಣಿ ಬರೆಯಿರಿ
2) ಸರಿಯಾಗಿ ಬರೆದ ಪದ ಯಾವುದು?
ಅ ) ಉತ್ಪಾದನೆ ಆ ) ಉತ್ಪಾಧನೆ
ಇ ) ಉತ್ಪಾದಣೆ ಈ ) ಉತ್ಪದಾನೆ
********************************
K 502 Page 4 of 4
Page 5
SUMMATIVE ASSESSMENT – TERM I
ಕಾಲುವಾರ್ಷಿಕ ಸಂಕಲನಾತ್ಮಕ ಮೌಲ್ಯಮಾಪನ
ಮಾದರಿ ಪ್ರಶ್ನೆ ಪತ್ರಿಕೆ
ಕನ್ನಡ ಮೂಲಪಠ್ಯ (KANNADA BT)
ತರಗತಿ: 5 ಸಮಯ: 2 ಗಂಟೆಗಳು
ಸೂಚನೆಗಳು
1. ಮೌಲ್ಯ ಮಾಪನ ಚಟುವಟಿಕೆಗಳು ಪ್ರಾರಂಭವಾಗುವ ಮೊದಲ ಹದಿನೈದು ನಿಮಿಷಗಳು ಕೂಲ್ ಆಪ್ ಟೈಮ್ ಆಗಿದೆ.
ಪ್ರ ಶ್ನೆ ಗಳನ್ನು ಓದಿ ಅರ್ಥೈಸಲು ಮತ್ತು ಉತ್ತರಗಳನ್ನು ಕಂಡುಕೊಳ್ಳಲು ಈ ಸಮಯವನ್ನು ಉಪಯೋಗಿಸಬಹುದು.
2. ಒಟ್ಟು ಆರು ಚಟುವಟಿಕೆಗಳಿವೆ. ಅವುಗಳಲ್ಲಿ ಎರಡು ಚಟುವಟಿಕೆಗಳಿಗೆ ಆಯ್ಕೆಗಳು ಇರುವುದು. ಅವುಗಳಲ್ಲಿ A
ಅಥವಾ B ಯಾವುದಾದರೂ ಒಂದು ಚಟುವಟಿಕೆಗೆ ಉತ್ತರಿಸಿದರೆ ಸಾಕು.
3. ಉತ್ತರಿಸಲು ಆಯ್ಕೆ ಮಾಡಿದ ಚಟುವಟಿಕೆಗಳ ಎಲ್ಲಾ ಉಪಪ್ರ ಶ್ನೆ ಗಳಿಗೂ ಉತ್ತರ ಬರೆಯಬೇಕು.
ಚಟುವಟಿಕೆ - 1 ಓದುವ ಬರೆಯುವ
ಕೆಳಗಿನ ಗದ್ಯವನ್ನು ಓದಿ ನೀಡಿರುವ ಪ್ರಶ್ನೆಗಳಿಗೆ ಉತ್ತರಿಸಿರಿ.
ಹುಲಿ ವೇಷ
ಹುಲಿ ವೇಷ ಕರ್ನಾಟಕದ ಕರಾವಳಿ ಪ್ರದೇಶದಲ್ಲಿ, ವಿಶೇಷವಾಗಿ ಮಂಗಳೂರು, ಉಡುಪಿ ಮತ್ತು ಕಾಸರಗೋಡು
ಜಿಲ್ಲೆಗಳಲ್ಲಿ ಪ್ರಚಲಿತದಲ್ಲಿರುವ ಒಂದು ವಿಶಿಷ್ಟ ಜಾನಪದ ಕಲೆ. ಇದು ನವರಾತ್ರಿ ಮತ್ತು ಕೃಷ್ಣ ಜನ್ಮಾಷ್ಟಮಿಯಂತಹ ಹಬ್ಬಗಳ
ಸಂದರ್ಭದಲ್ಲಿ ಪ್ರದರ್ಶಿಸಲ್ಪಡುವ ಒಂದು ಮನಮೋಹಕ ನೃತ್ಯ ಪ್ರಕಾರವಾಗಿದೆ.
ಹುಲಿ ವೇಷಧಾರಿಗಳು ತಮ್ಮ ದೇಹದ ಮೇಲೆ ಹುಲಿಯ ಬಣ್ಣಗಳನ್ನು, ಅಂದರೆ ಹಳದಿ ಮತ್ತು ಕಪ್ಪು ಪಟ್ಟಿಗಳನ್ನು
ಚಿತ್ರಿಸಿಕೊಳ್ಳುತ್ತಾರೆ. ಇದು ಸಂಪೂರ್ಣವಾಗಿ ಕೈಯಿಂದಲೇ ಮಾಡುವ ಒಂದು ಕಲಾತ್ಮಕ ಚಿತ್ರಣ. ಮುಖಕ್ಕೆ ಹುಲಿಯ ಮುಖವಾಡ
ಅಥವಾ ಬಣ್ಣ ಹಚ್ಚಿ, ನೈಜ ಹುಲಿಯ ಹಾಗೆ ಮಾಡಲಾಗುತ್ತದೆ. ಕೆಲವೊಮ್ಮೆ ಹುಲಿಯ ಕಿವಿಗಳು ಮತ್ತು ಬಾಲವನ್ನು ಸಹ
ಜೋಡಿಸುತ್ತಾರೆ. ವೇಷದಲ್ಲಿರುವ ಕಲಾವಿದರು ಹುಲಿಯ ಚಲನವಲನಗಳನ್ನು ಅನುಕರಿಸುತ್ತಾ ನೃತ್ಯ ಮಾಡುತ್ತಾರೆ. ಇದು ಶಕ್ತಿಯುತ
ಮತ್ತು ಲವಲವಿಕೆಯ ನೃತ್ಯವಾಗಿದ್ದು, ಹುಲಿಯ ಬೇಟೆ, ನೆಗೆತ, ಮತ್ತು ಘರ್ಜನೆಯನ್ನು ನೆನಪಿಸುವಂತಹ ಭಂಗಿಗಳನ್ನು
ಒಳಗೊಂಡಿರುತ್ತದೆ. ಹುಲಿ ಕುಣಿತಕ್ಕೆ ಡೋಲು, ತಾಸೆ, ನಾಗಸ್ವರ ಮತ್ತು ಬ್ಯಾಂಡ್‌ಗಳಂತಹ ವಾದ್ಯಗಳು ಸಾಥ್ ನೀಡುತ್ತವೆ. ಈ
ವಾದ್ಯಗಳ ಶಬ್ದವು ನೃತ್ಯಕ್ಕೆ ಮತ್ತಷ್ಟು ಹುರುಪು ನೀಡುತ್ತದೆ. ಹುಲಿ ವೇಷಧಾರಿಗಳು ಗುಂಪುಗೂಡಿ ಮನೆ ಮನೆಗೆ ತೆರಳಿ,
ದೇವಾಲಯಗಳ ಮುಂದೆ, ಸಾರ್ವಜನಿಕ ಸ್ಥಳಗಳಲ್ಲಿ ಮತ್ತು ಮೆರವಣಿಗೆಗಳಲ್ಲಿ ನೃತ್ಯ ಪ್ರದರ್ಶಿಸುತ್ತಾರೆ. ಜನರು ಅವರಿಗೆ ಹಣ ಮತ್ತು
ಆಹಾರ ವಸ್ತುಗಳನ್ನು ನೀಡಿ ಗೌರವಿಸುತ್ತಾರೆ.
ಹುಲಿ ವೇಷ ಕೇವಲ ಮನೋರಂಜನೆಯಲ್ಲದೆ, ಅದೊಂದು ಸಾಂಸ್ಕೃತಿಕ ಆಚರಣೆಯ ಭಾಗವಾಗಿದೆ. ದುಷ್ಟ ಶಕ್ತಿಗಳನ್ನು
ದೂರವಿಡಲು ಮತ್ತು ಶುಭವನ್ನು ತರಲು ಇದನ್ನು ಪ್ರದರ್ಶಿಸಲಾಗುತ್ತದೆ ಎಂಬ ನಂಬಿಕೆ ಇದೆ.
K 512 Page 1 of 5
Page 6
1) ಹುಲಿವೇಷ ಕುಣಿತದಲ್ಲಿ ಬಳಸದ ಸಂಗೀತ ಉಪಕರಣ ಯಾವುದು?
ಅ ) ಡೋಲು ಆ ) ತಾಸೆ
ಇ ) ಡಮರುಗ ಈ ) ಬ್ಯಾಂಡ್
2) ಕೆಳಗೆ ನೀಡಿರುವ ಯಾವ ಹಬ್ಬದಲ್ಲಿ ಹುಲಿವೇಷ ಕುಣಿತ ಇರುವುದಿಲ್ಲ?
ಅ ) ಓಣಂ ಆ ) ಶ್ರೀ ಕೃ ಷ್ಣ ಜನ್ಮಾಷ್ಟ ಮಿ
ಇ ) ನವರಾತ್ರಿ ಈ ) ತೆನೆಹಬ್ಬ
3) ಹುಲಿ ವೇಷ ಕುಣಿತದ ವೇಷ ಭೂಷಣ ಹೇಗಿರುತ್ತದೆ? ವಿವರಿಸಿರಿ.
4) ಹುಲಿ ವೇಷ ಕುಣಿತದ ಬಗೆಗೆ ಇರುವ ನಂಬಿಕೆಯೇನು?
ಚಟುವಟಿಕೆ - 2 ಭಿತ್ತಿಪತ್ರ ಬರೆಯುವ
1) 'ಭೂತಾಳ ಪಾಂಡ್ಯ' ಕತೆಯನ್ನು ನಾಟಕ ರೂಪಕ್ಕೆ ಬದಲಾಯಿಸಿ, ಶಾಲೆಯ ಸಾಹಿತ್ಯ ಸಭೆಯಲ್ಲಿ ಪ್ರದರ್ಶಿಸಲು
ತೀರ್ಮಾನಿಸಲಾಯಿತು. ಈ ಪ್ರದರ್ಶನದ ಪ್ರಚಾರದ ಭಾಗವಾಗಿ ಶಾಲಾ ನೋಟೀಸು ಬೋರ್ಡಿನಲ್ಲಿ ಹಾಕಲು ಒಂದು
'ಭಿತ್ತಿ ಪತ್ರ' ವನ್ನು ತಯಾರಿಸಿರಿ.
2) ಕೆಳಗಿನವುಗಳಲ್ಲಿ ದ್ವಿರುಕ್ತಿ ಪದ ಯಾವುದು?
ಅ ) ಬಾಚಿ ಬಾಚಿ ಆ ) ಆಗೀಗ
ಇ ) ಆಚೆ ಈಚೆ ಈ ) ಹಣ್ಣು ಹಂಪಲು
ಚಟುವಟಿಕೆ - 3 ವಿವರಣೆ ಬರೆಯುವ
1) ನಿಮಗೆ ಹಲವಾರು ಗ್ರಾಮೀಣ ಕ್ರೀಡೆಗಳ ಬಗ್ಗೆ ಪರಿಚಯವಿರಬಹುದು. ಲಗೋರಿ, ಕುಟ್ಟಿದೊಣ್ಣೆ , ತಲೆಮಾ, ಕುಂಟೆಬಿಲ್ಲೆ
....ಇತ್ಯಾದಿ. ಯಾವುದಾದರೂ ಒಂದು ಗ್ರಾಮೀಣ ಕ್ರೀಡೆಯ ಕುರಿತು ವಿವರಣೆ ಬರೆಯಿರಿ.
2) 'ಮನೆಯವರೆಲ್ಲರು' - ಈ ಪದವನ್ನು ವಿಂಗಡಿಸಿ ಬರೆಯಿರಿ.
ಅ ) ಮನೆ +ಅವರೆಲ್ಲರು ಆ ) ಮನೆಯವ+ ಅವರೆಲ್ಲರು
ಇ ) ಮನೆಯವರು+ ಎಲ್ಲರು ಈ ) ಮನೆಯ+ ಅವರೆಲ್ಲರು
ಚಟುವಟಿಕೆ - 4 ಪಾತ್ರ ಚಿತ್ರಣ ಬರೆಯುವ
1) 'ಭೂತಾಳ ಪಾಂಡ್ಯ ' ಎಂಬ ಕಥನ ಕವನವನ್ನು ನೀವು ಹಾಡಿ ಆಸ್ವಾದಿಸಿರುವಿರಲ್ಲವೇ? ಈ ಕಥೆಯಲ್ಲಿ ಬರುವ ಪಾತ್ರಗಳ
ಗುಣ, ಸ್ವಭಾವಗಳು ನಿಮಗೆ ತಿಳಿದಿವೆ. ಈ ಕಥೆಯಲ್ಲಿ ಬರುವ ಪ್ರಮುಖ ಪಾತ್ರವಾದ ಸತ್ಯವತಿಯ 'ಪಾತ್ರ ಚಿತ್ರಣ'
ಮಾಡಿರಿ.
2) ಗಾದೆ ಮಾತಿನ ಮುಂದಿನ ಭಾಗ ಬರೆಯಿರಿ.
ಮಾತು ಬಲ್ಲವನಿಗೆ ಜಗಳವಿಲ್ಲ ಊಟ ಬಲ್ಲವನಿಗೆ .……………………………………….
ಅ ) ಆಹಾರವಿಲ್ಲ ಆ ) ಬಟ್ಟಲಿಲ್ಲ
K 512 Page 2 of 5
Page 7
ಇ ) ರೋಗವಿಲ್ಲ ಈ ) ಹಸಿವೆ ಇಲ್ಲ
ಚಟುವಟಿಕೆ - 5 ಪತ್ರ ಬರೆಯುವ ಅಥವಾ ಅಭಿಪ್ರಾಯ ಟಿಪ್ಪಣಿ ಬರೆಯುವ
ಎ
1) ಆಚರಣೆಗಳು ನಮ್ಮ ಸಂಸ್ಕೃತಿಯನ್ನು ಉಳಿಸಿ ಬೆಳೆಸಲು ಸಹಕಾರಿಯಾಗಿವೆ. ಮನೆ ತುಂಬಿಸುವುದು ಎಂಬ ಆಚರಣೆಯ
ಕುರಿತು ಪಾಠ ಭಾಗದಲ್ಲಿ ಕಲಿತಿರುವಿರಿ. ನಿಮ್ಮ ದೂರದ ಗೆಳೆಯ ಅಥವಾ ಗೆಳತಿಗೆ ಈ ಆಚರಣೆಯ ಕುರಿತು ಮಾಹಿತಿ
ನೀಡುತ್ತಾ ಪತ್ರ ಬರೆಯಿರಿ.
2) ಸರಿಯಾದ ಪದ ಬರೆಯಿರಿ
ಅ ) ವಿಧ್ಯಾರ್ಥಿ ಆ ) ವಿರ್ದ್ಯಾಥಿ
ಇ ) ವಿಧ್ಯಾ ರ್ತಿ ಈ ) ವಿದ್ಯಾರ್ಥಿ
ಅಥವಾ ಬಿ
1) 'ಜಟ್ಟಿಯ ಫಜೀತಿ' ಪಾಠದಲ್ಲಿ ಬಾಚನ ಸಾಮರ್ಥ್ಯದ ಬಗ್ಗೆ ತಿಳಿದಿದ್ದೀರಿ. ಬಾಚನ ಶಕ್ತಿ ಸಾಮರ್ಥ್ಯಗಳನ್ನು ಕಂಡ ಕೊಚ್ಚಿಯ
ಜಟ್ಟಿಯು ಹೆದರಿ ಪಲಾಯನಗೈಯುತ್ತಾನೆ. ಕೊಚ್ಚಿಯ ಜಟ್ಟಿಯು ಅಂದು ಪಲಾಯನಗೈಯದೆ ಇರುತ್ತಿದ್ದರೆ
ಏನಾಗುತ್ತಿತ್ತು? ಎಂಬುದನ್ನು ಊಹಿಸಿ ಬರೆಯಿರಿ.
2) 'ಅಗ್ರ ಜ' - ಎಂಬ ಪದದ ಸಮಾನಾರ್ಥ ಪದ ಯಾವುದು?
ಅ ) ತಮ್ಮ ಆ ) ತಂದೆ
ಇ ) ಅಣ್ಣ ಈ ) ಮಾವ
ಚಟುವಟಿಕೆ - 6 ಕಥೆಯಾಗಿ ಬರೆಯುವ ಅಥವಾ ಲೇಖನ ಬರೆಯುವ
ಎ
ಅಳಿಯ ಕಟ್ಟು ಕ್ರಮ ಜಾರಿಗೆ ಬಂದ ಬಗೆಯನ್ನು 'ಭೂತಾಳ ಪಾಂಡ್ಯ' ಎಂಬ ಕಥನ ಕವನವನ್ನು ಓದಿ ತಿಳಿದುಕೊಂಡಿರುವಿರಲ್ಲವೇ?
ಅದೇ ರೀತಿ ಪರಸ್ಪರ ಸಹಾಯ ಮತ್ತು ಸಹಾನುಭೂತಿಯ ಮಹತ್ವವನ್ನು ಎತ್ತಿ ತೋರಿಸುವ ಒಂದು ಕಥನ ಕವನವನ್ನು ಕೆಳಗೆ
ಕೊಡಲಾಗಿದೆ. ಈ ಕಥನ ಕವನವನ್ನು ಓದಿ ಕಥೆಯಾಗಿ ಬದಲಾಯಿಸಿ ಬರೆಯಿರಿ.
ಸಂತೆಗೆ ಹೋದನು ಭೀಮಣ್ಣ
ಸಂತೆಗೆ ಹೋದನು ಭೀಮಣ್ಣ
ಹಿಂಡಿಯ ಕೊಂಡನು ಹತ್ತು ಮಣ
ಕತ್ತೆಯ ಬೆನ್ನಿಗೆ ಹೇರಿಸಿದ
ಕುದುರೆಯ ಜೊತೆಯಲಿ ಸಾಗಿಸಿದ
ಕತ್ತೆಯು ಅರಚಿತು ‘ಓ ಗೆಳೆಯ
ಅರ್ಧವ ನೀ ಹೊರು ದಮ್ಮಯ್ಯ’
K 512 Page 3 of 5
Page 8
ಕುದುರೆಗೆ ಕೂಗದು ಕೇಳಿಸಿತು,
ಕತ್ತೆಯ ಕಿರುಚನು ಚಾಳಿಸಿತು
‘ನಿನ್ನಯ ಬೆನ್ನಿಗೆ ಹಾಕಿದನು
ಅದಕೇ ನಿನ್ನನು ಸಾಕಿದನು
ನೀನೇ ಹೊತ್ತುಕೊ ಬೇಗ ನಡಿ
ದಣಿಯದೊ ಬರುವನು ಹಾದಿ ಹಿಡಿ’
ನಡುಗಿತು ಕತ್ತೆಯ ಕೈಕಾಲು
ಬಿದ್ದಿತು ಭೂಮಿಗೆ ಕಂಗಾಲು!
ಬಂದನು ಆಗಲೆ ಭೀಮಣ್ಣ
ಕುದುರೆಗೆ ಹೊರಿಸಿದ ಹತ್ತು ಮಣ
ಹೊತ್ತಿತು ಕುದುರೆಯು ಹೊರೆಯನ್ನ
ಅತ್ತಿತು, ಬಗ್ಗಿಸಿತದು ಬೆನ್ನ
ಕುದುರೆಯು ಬೇಡಿತು ಕತ್ತೆಯನು
‘ಮರೆಯೆನು ನಿನ್ನುಪಕಾರವನು
ಒಂದಿಷ್ಟಾದರು ಹೊತ್ತುಕೊಡು
ನನ್ನಯ ಪ್ರಾಣವ ಉಳಿಸಿಕೊಡು’
ಕತ್ತೆಯು ಹೇಳಿತು ಹಿಗ್ಗಿನಲಿ
‘ಆಗೇನಂದಿಯ ಸೊಕ್ಕಿನಲಿ
ನನ್ನಯ ಕಷ್ಟದಿ ಹಿಗ್ಗಿದ್ದಿ
ಬಂತೇ ಈಗಾದರು ಬುದ್ಧಿ
ನೀ ನನಗಿದ್ದರೆ ನಾ ನಿನಗೆ
ನೆನಪಿರಲೀ ನುಡಿ ನಮ್ಮೊಳಗೆ.’
- ಕಯ್ಯಾರ ಕಿಞ ್ಞಣ್ಣ ರೈ
ಅಥವಾ ಬಿ
ಓಣಂ ಕೇರಳ ರಾಜ್ಯ ದ ಪ್ರ ಮುಖ ಹಬ್ಬ ಗಳಲ್ಲಿ ಒಂದಾಗಿದೆ. ಇದು ಸುಗ್ಗಿಯ ಹಬ್ಬವಾಗಿದ್ದು, ಕೇರಳದ ಶ್ರೀಮಂತ ಸಂಸ್ಕ ೃ ತಿ ಮತ್ತು
ಸಂಪ್ರ ದಾಯವನ್ನು ಪ್ರ ತಿಬಿಂಬಿಸುತ್ತದೆ. ಕೊಟ್ಟಿರುವ ಹೆಗ್ಗುರುತುಗಳನ್ನು ಬಳಸಿಕೊಂಡು ಈ ಆಚರಣೆಯ ಕ್ರ ಮ, ಹಿನ್ನೆಲೆ, ಪ್ರಾಧಾನ್ಯ ತೆ
ಮೊದಲಾದವುಗಳನ್ನು ಸೇರಿಸಿಕೊಂಡು ಓಣಂ ಹಬ್ಬದ ಕುರಿತು ಸಮಗ್ರ ಮಾಹಿತಿ ಒಳಗೊಂಡ ಲೇಖನವನ್ನು ತಯಾರಿಸಿರಿ.
● ಸಾಮಾನ್ಯ ವಾಗಿ ಆಗಸ್ಟ್ ಅಥವಾ ಸೆಪ್ಟೆಂಬರ್ ತಿಂಗಳಲ್ಲಿ ಬರುತ್ತದೆ.
● ಹತ್ತು ದಿನಗಳ ಕಾಲ ಈ ಹಬ್ಬದ ಸಂಭ್ರ ಮ ಆಚರಿಸಲಾಗುತ್ತದೆ.
● ಮಹಾಬಲಿ ಚಕ್ರ ವರ್ತಿಯ ಪುನರಾಗಮನ
● ಓಣಂ ಹಬ್ಬವು ಸುಗ್ಗಿಯ ಕಾಲ ಮತ್ತು ಮಳೆಗಾಲದ ಅಂತ್ಯ
● ಜಾತಿ, ಧರ್ಮ ಭೇದವಿಲ್ಲದ ಒಗ್ಗೂಡಿಸುವ ಹಬ್ಬವಾಗಿದೆ.
K 512 Page 4 of 5
Page 9
● ಪೂಕಳಂ (ಹೂವಿನ ರಂಗೋಲಿ)
● ಓಣಂ ಸದ್ಯ
● ಹೊಸ ಬಟ್ಟೆ
● ಸಾಂಸ್ಕ ೃ ತಿಕ ಚಟುವಟಿಕೆಗಳು, ಆಟಗಳು
● ಹುಲಿ ವೇಷದ ನೃ ತ ್ಯ, ದೋಣಿ ಸ್ಪರ್ಧೆ
********************************
K 512 Page 5 of 5