Page 1
SUMMATIVE ASSESSMENT – TERM I
ಕಾಲುವಾರ್ಷಿಕ ಸಂಕಲನಾತ್ಮಕ ಮೌಲ್ಯಮಾಪನ
ಮಾದರಿ ಪ್ರಶ್ನೆ ಪತ್ರಿಕೆ
ಕನ್ನಡ ಮುಂದುವರಿದ ಪಠ್ಯ (KANNADA AT)
ತರಗತಿ: 7 ಸಮಯ: 2 ಗಂಟೆಗಳು
ಸೂಚನೆಗಳು
1. ಮೌಲ್ಯ ಮಾಪನ ಚಟುವಟಿಕೆಗಳು ಪ್ರಾರಂಭವಾಗುವ ಮೊದಲ ಹದಿನೈದು ನಿಮಿಷಗಳು ಕೂಲ್ ಆಪ್ ಟೈಮ್ ಆಗಿದೆ.
ಪ್ರ ಶ್ನೆ ಗಳನ್ನು ಓದಿ ಅರ್ಥೈಸಲು ಮತ್ತು ಉತ್ತರಗಳನ್ನು ಕಂಡುಕೊಳ್ಳಲು ಈ ಸಮಯವನ್ನು ಉಪಯೋಗಿಸಬಹುದು.
2. ಒಟ್ಟು ಆರು ಚಟುವಟಿಕೆಗಳಿವೆ. ಅವುಗಳಲ್ಲಿ ಎರಡು ಚಟುವಟಿಕೆಗಳಿಗೆ ಆಯ್ಕೆಗಳು ಇರುವುದು. ಅವುಗಳಲ್ಲಿ A
ಅಥವಾ B ಯಾವುದಾದರೂ ಒಂದು ಚಟುವಟಿಕೆಗೆ ಉತ್ತರಿಸಿದರೆ ಸಾಕು.
3. ಉತ್ತರಿಸಲು ಆಯ್ಕೆ ಮಾಡಿದ ಚಟುವಟಿಕೆಗಳ ಎಲ್ಲಾ ಉಪಪ್ರ ಶ್ನೆ ಗಳಿಗೂ ಉತ್ತರ ಬರೆಯಬೇಕು.
ಚಟುವಟಿಕೆ - 1 ಓದುವ ಬರೆಯುವ
ಕೆಳಗಿನ ಗದ್ಯವನ್ನು ಓದಿ ನೀಡಿರುವ ಪ್ರಶ್ನೆಗಳಿಗೆ ಉತ್ತರಿಸಿರಿ.
ಬಾಕ್ಸಿಂಗ್ ರಿಂಗ್‌ನ ಮಹಾರಾಣಿ
ಮಣಿಪುರದ ಕಂಗ್ ತೈ ಎಂಬ ಪುಟ್ಟ ಹಳ್ಳಿಯೊಂದರಲ್ಲಿ 1983 ರಲ್ಲಿ ಜನಿಸಿದ ಮೇರಿ ಕೋಮ್, ಅತ್ಯಂತ ಬಡತನದ
ಕುಟುಂಬದಲ್ಲಿ ಬೆಳೆದವರು. ಚಿಕ್ಕಂದಿನಿಂದಲೇ ಕಷ್ಟದ ಜೀವನವನ್ನು ನೋಡಿದ ಮೇರಿ ಕೋಮ್‌ಗೆ ಬಾಕ್ಸಿಂಗ್ ಒಂದು ಕನಸಾಗಿತ್ತು.
ಆದರೆ, ಅಂತಹ ಗ್ರಾಮೀಣ ಪ್ರ ದೇಶದಲ್ಲಿ, ಅದರಲ್ಲೂ ಮಹಿಳೆಯೊಬ್ಬಳು ಬಾಕ್ಸಿಂಗ್‌ನಂತಹ ಪುರುಷ ಪ್ರ ಧಾನ ಕ್ರೀಡೆಯಲ್ಲಿ
ತೊಡಗಿಸಿಕೊಳ್ಳುವುದು ಸುಲಭದ ಮಾತಾಗಿರಲಿಲ್ಲ.
ಮಣಿಪುರದ ಮತ್ತೊಬ್ಬ ಬಾಕ್ಸರ್ ಡಿಂಗ್ಕೊ ಸಿಂಗ್ ರವರು ಮೇರಿ ಕೋಮ್‌ಗೆ ಬಾಕ್ಸಿಂಗ್ ಕಲಿಯಲು ಪ್ರೇರಣೆ.
ಬಾಕ್ಸಿಂಗ್‌ನಲ್ಲಿ ಏನಾದರೂ ಸಾಧಿಸಬೇಕೆಂಬ ಛಲ ಅವರಲ್ಲಿ ಮನೆ ಮಾಡಿತ್ತು. ಆದರೆ, ಮನೆಯಲ್ಲಿ ಇದಕ್ಕೆ ಬೆಂಬಲವಿರಲಿಲ್ಲ.
ಬಾಕ್ಸಿಂಗ್‌ನಲ್ಲಿ ಗಾಯಗಳಾಗಬಹುದು, ಅದು ಹುಡುಗಿಯರಿಗೆ ಸರಿಯಲ್ಲ ಎಂದು ಪೋಷಕರು ವಿರೋಧಿಸಿದ್ದರು. ಆದರೂ, ಮೇರಿ
ಕೋಮ್ ಗುಪ್ತವಾಗಿ ತರಬೇತಿಗೆ ಹೋಗಲು ಶುರುಮಾಡಿದರು. ಆರಂಭದಲ್ಲಿ ಅವರು ಕುಸ್ತಿ, ಕರಾಟೆ ಮುಂತಾದ ಕ್ರೀಡೆಗಳಲ್ಲಿ
ಆಸಕ್ತಿ ಹೊಂದಿದ್ದರು. ನಂತರ ಕೋಚ್ ಕೆ. ಕೋಶಿಸೋ ಸಿಂಗ್ ಅವರ ಅಡಿಯಲ್ಲಿ ಬಾಕ್ಸಿಂಗ್ ತರಬೇತಿಯನ್ನು ಪಡೆದರು.
ಅವರ ತರಬೇತಿ ಬಹಳ ಕಷ್ಟಕರವಾಗಿತ್ತು. ಬಡತನದಿಂದಾಗಿ ಪೌಷ್ಟಿಕ ಆಹಾರವೂ ಸಿಗುತ್ತಿರಲಿಲ್ಲ. ಸರಿಯಾದ
ಸೌಲಭ್ಯ ಗಳಿಲ್ಲದೆಯೂ ಅವರು ತಮ್ಮ ಅಭ್ಯಾ ಸವನ್ನು ನಿರಂತರವಾಗಿ ಮುಂದುವರಿಸಿದರು. ಅವರ ಕಠಿಣ ಪರಿಶ್ರ ಮಕ್ಕೆ ಫಲ
ಸಿಕ್ಕಿತು. 2000 ನೇ ಇಸವಿಯಲ್ಲಿ ಅವರು ಮೊದಲ ಬಾರಿಗೆ ರಾಜ್ಯ ಬಾಕ್ಸಿಂಗ್ ಚಾಂಪಿಯನ್‌ಶಿಪ್ ಗೆದ್ದರು. ಇದು ಅವರ ಬಾಕ್ಸಿಂಗ್
ಜೀವನಕ್ಕೆ ತಿರುವು ನೀಡಿತು. ನಂತರ ಅವರು ರಾಷ್ಟ್ರೀಯ ಮಟ್ಟದಲ್ಲಿ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ಭಾರತವನ್ನು
ಪ್ರ ತಿನಿಧಿಸಲು ಆರಂಭಿಸಿದರು.
K 702 Page 1 of 7
Page 2
ಅವರು ಐದು ಬಾರಿ ವಿಶ್ವ ಚಾಂಪಿಯನ್‌ಶಿಪ್ ಗೆದ್ದ ಮೊದಲ ಮಹಿಳಾ ಬಾಕ್ಸರ್ ಎಂಬ ಹೆಗ್ಗಳಿಕೆಗೆ ಪಾತ್ರರಾದರು.
2012 ರ ಲಂಡನ್ ಒಲಿಂಪಿಕ್ಸ್‌ನಲ್ಲಿ ಕಂಚಿನ ಪದಕ ಗೆಲ್ಲುವ ಮೂಲಕ ಇಡೀ ದೇಶಕ್ಕೆ ಕೀರ್ತಿ ತಂದರು. ಮಹಿಳಾ ಬಾಕ್ಸಿಂಗ್
ಒಲಿಂಪಿಕ್ಸ್‌ನಲ್ಲಿ ಮೊದಲ ಬಾರಿಗೆ ಪರಿಚಯಿಸಲ್ಪಟ್ಟಾ ಗ, ಪದಕ ಗೆದ್ದ ಮೊದಲ ಭಾರತೀಯ ಮಹಿಳಾ ಬಾಕ್ಸರ್ ಆದರು. ನಂತರ,
2014 ರ ಏಷ ್ಯ ನ್ ಗೇಮ್ಸ್‌ನಲ್ಲಿ ಚಿನ್ನದ ಪದಕ ಗೆದ್ದ ಮೊದಲ ಭಾರತೀಯ ಮಹಿಳಾ ಬಾಕ್ಸರ್ ಎಂಬ ದಾಖಲೆ ಮಾಡಿದರು. ಅವರು
ಆರು ಬಾರಿ ವಿಶ್ವ ಚಾಂಪಿಯನ್‌ಶಿಪ್ ಗೆದ್ದು, "ಮ್ಯಾಗ್ನಿಫಿಸೆಂಟ್ ಮೇರಿ" ಎಂದೇ ಖ್ಯಾತಿ ಪಡೆದರು.
ಮೇರಿ ಕೋಮ್ ಅವರ ಕಥೆ ಕೇವಲ ಕ್ರೀಡಾ ಸಾಧನೆಯ ಕಥೆಯಲ್ಲ. ಅದು ಬಡತನ, ಸವಾಲುಗಳು ಮತ್ತು ಸಾಮಾಜಿಕ
ನಿರ್ಬಂಧಗಳನ್ನು ಮೀರಿ, ತಮ್ಮ ಕನಸುಗಳನ್ನು ಬೆನ್ನಟ್ಟಿ, ಅದರಲ್ಲಿ ಯಶಸ್ಸು ಕಂಡ ಮಹಿಳೆಯೊಬ್ಬಳ ದೃ ಢ ಸಂಕಲ್ಪದ ಕಥೆ. "ನನಗೆ
ಇಷ್ಟ ವಾದ ಕೆಲಸವನ್ನು ನಾನು ಮಾಡಬೇಕು, ಯಾವುದೇ ಸವಾಲುಗಳು ಬಂದರೂ ನಾನು ಹೋರಾಡುತ್ತೇನೆ" ಎಂಬ ಅವರ
ಮಾತುಗಳು ಲಕ್ಷಾಂತರ ಜನರಿಗೆ ಸ್ಫೂರ್ತಿಯಾಗಿವೆ. ಇಂದಿಗೂ ಅವರು ಯುವ ಬಾಕ್ಸರ್‌ಗಳಿಗೆ ಮಾರ್ಗದರ್ಶಕರಾಗಿ, ಭಾರತದ
ಕ್ರೀಡಾ ಜಗತ್ತಿಗೆ ಮಾದರಿಯಾಗಿದ್ದಾರೆ.
1) ವಿಶ್ವ ಒಲಿಂಪಿಕ್ಸ್ ಕ್ರೀಡಾ ಕೂಟದಲ್ಲಿ ಮೇರಿಕೋಮ್ ಪಡೆದ ಪದಕ ಯಾವುದು?
ಅ ) ಬೆಳ್ಳಿ ಪದಕ ಆ ) ಕಂಚಿನ ಪದಕ
ಇ ) ಚಿನ್ನದ ಪದಕ ಈ ) ಪದಕ ಪಡೆಯಲಿಲ್ಲ
2) ‘‘ಬಾಕ್ಸಿಂಗ್ ನಲ್ಲಿ ಗಾಯಗಳಾಗಬಹುದು, ಅದು ಹುಡುಗಿಯರಿಗೆ ಸರಿಯಲ್ಲ’’ ಎಂಬ ಪೋಷಕರ ಮಾತಿನಲ್ಲಿ
ವ್ಯಕ್ತವಾಗುವ ಭಾವನೆ ಯಾವುದು?
ಅ ) ಅಸೂಯೆ ಆ ) ಕೋಪ
ಇ ) ದುಃಖ ಈ ) ಭಯ
3) ಮೇರಿ ಕೋಮ್ ಕಂಡ ಕನಸನ್ನು ಈಡೇರಿಸಲು ಪಟ್ಟ ಕಠಿಣ ಪರಿಶ್ರಮದ ಕುರಿತು ಓದಿ ತಿಳಿದಿರಲ್ಲವೇ? ನಿಮ್ಮ
ಕನಸುಗಳೇನು? ಅದನ್ನು ಈಡೇರಿಸಲು ನಿಮ್ಮ ಪ್ರಯತ್ನ ಹೇಗಿರಬೇಕು? ಲಘು ಟಿಪ್ಪಣಿ ಬರೆಯಿರಿ.
4) ಈ ಸ್ಫೂರ್ತಿದಾಯಕ ಗದ್ಯ ಭಾಗಕ್ಕೆ ಸೂಕ್ತವಾಗುವ ಇನ್ನೊಂದು ಶೀರ್ಷಿಕೆ ನೀಡಿರಿ.
ಚಟುವಟಿಕೆ - 2 ಸ್ವಾರಸ್ಯ ಬರೆಯುವ
1) 'ಬಣ್ಣವೇರಿತು ಪಾಲ್ಗಡಲು' ಎಂಬ ಪದ್ಯದಲ್ಲಿ ಹೆಣ್ಣಿನ ಗುಣ ಸ್ವಭಾವದ ಜೊತೆಗೆ ಕುಟುಂಬದಲ್ಲಿ ಅವಳ ಪಾತ್ರ,
ಗೌರವ ಮತ್ತು ಮಹತ್ವನ್ನು ಹೊನ್ನಮ್ಮಳು ಪ್ರಧಾನವಾಗಿ ತಿಳಿಸಿರುವರಲ್ಲವೇ? ಪದ್ಯದ ಕೆಲವು ಸಾಲುಗಳನ್ನು ಕೆಳಗೆ
ಕೊಡಲಾಗಿದೆ. ಅವುಗಳ ಸ್ವಾರಸ್ಯವನ್ನು ಬರೆಯಿರಿ.
ಕುಲಪುತ್ರ ನೋದಿ ತಿಳಿದು ನಡೆದಲ್ಲದೆ
ಕುಲವನುದ್ಧರಿಸಲರಿಯನು
ಕುಲಪುತ್ರಿಯೊಳ್ಳುವರನಿಗಿತ್ತ ಮಾತ್ರಕೆ
ಕುಲಕೋಟಿಯನುದ್ಧರಿಪಳು
K 702 Page 2 of 7
Page 3
2) ಮೇಲಿನ ಪದ್ಯಭಾಗದಲ್ಲಿ ಬಂದಿರುವ ಪ್ರಾಸ ಯಾವುದು?
ಅ ) ಅನು ಪ್ರಾಸ ಆ ) ಮಧ್ಯ ಪ್ರಾಸ
ಇ ) ಆದಿ ಪ್ರಾಸ ಈ ) ಅಂತ್ಯ ಪ್ರಾಸ
3) ‘ಕುಲವನುದ್ಧರಿಸಲರಿಯನು’ ಎಂಬ ಪದವನ್ನು ಸರಿಯಾಗಿ ವಿಂಗಡಿಸಿದ ರೀತಿ ಯಾವುದು?
ಅ ) ಕುಲವನು + ಉದ್ಧರಿಸಲು + ಅರಿಯನು
ಆ ) ಕುಲವನುದ್ಧರಿಸಲು + ಅರಿಯನು
ಇ ) ಕುಲವನ್ + ಉದ್ಧರಿಸಲು + ಅರಿಯನು
ಈ ) ಕುಲವನ್ + ಉದ್ಧರಿಸಲ್ + ಅರಿಯನು
ಚಟುವಟಿಕೆ - 3 ಪತ್ರ ಬರೆಯುವ
1) ಕಾಡಿನಲ್ಲಿ ಬೇಕಾದಷ್ಟು ಮರಗಳಿವೆ. ಆದರೆ ಚೆರ್ರಿ ಮರವನ್ನೇ ರಾಕೇಶನು ಇಷ್ಟ ಪಡಲು ಕಾರಣವೇನೆಂಬುದು
ತಿಳಿದಿರುವೀರಲ್ಲವೇ.? ನಾವೇ ನೆಟ್ಟು ಬೆಳೆಸಿದ ಮರದಲ್ಲಿ ಫಲ, ಪುಷ್ಪ ಗಳು ಆಗುವಾಗ ನಾವು ತುಂಬಾ
ಖುಷಿಪಡುತ್ತೇವೆ. ಅದೇ ರೀತಿಯಲ್ಲಿ ರಾಕೇಶನು ತಾನು ನೆಟ್ಟ ಚೆರ್ರಿ ಮರದ ಹಣ್ಣುಗಳನ್ನು ತಿಂದು ಕುಶಿಯಿಂದ
ತನ್ನ ತಾಯಿಗೆ ತಿಳಿಸಲು ಪತ್ರ ಬರೆದನು. ಅವನು ಬರೆದ ಪತ್ರ ಹೇಗಿರಬಹುದು? ಊಹಿಸಿ ಪತ್ರ ಬರೆಯಿರಿ.
2) ಅಡಿಗೆರೆ ಎಳೆದ ಪದವನ್ನು ಬಳಸಿ ಸ್ವಂತ ವಾಕ್ಯ ರಚಿಸಿರಿ.
ರಾಜನು ರಾಣಿಯ ಮಾತಿಗೆ ಮರುಳಾಗಿ ಅಪಾಯವನ್ನು ಆಹ್ವಾನಿಸುತ್ತಿದ್ದಾನೆ.
ಚಟುವಟಿಕೆ - 4 ವ್ಯಕ್ತಿ ಪರಿಚಯ ಬರೆಯುವ
1) ಈ ಕೆಳಗೆ ನೀಡಿರುವ ವಾಕ್ಯಕ್ಕೆ ಸೂಕ್ತವಾಗುವ ನಾಣ್ಣುಡಿಯನ್ನು ಆರಿಸಿ ಬರೆಯಿರಿ.
‘ಸ್ಥಳೀಯವಾಗಿ ಅತ್ಯುತ್ತಮ ತರಬೇತುದಾರರಿದ್ದರೂ, ದೂರದ ನಗರಕ್ಕೆ ತರಬೇತಿಗಾಗಿ ತೆರಳುವ ಅಥ್ಲೀಟ್’
ಅ ) ಮನಸಿದ್ದರೆ ಮಾರ್ಗ
ಆ ) ಹಿತ್ತಲಗಿಡ ಮದ್ದಲ್ಲ
ಇ ) ಕಾಯಕವೇ ಕೈಲಾಸ
ಈ ) ದುಡಿಮೆಯೇ ದೇವರು
2) ಪೋರ್ಚುಗೀಸರ ವಿರುದ್ಧ ಹೋರಾಡಿದ ತುಳುನಾಡಿನ ವೀರ ವನಿತೆ ರಾಣಿ ಅಬ್ಬಕ್ಕನ ಕಥೆಯನ್ನು ಓದಿ
ತಿಳಿದಿರುವಿರಲ್ಲವೇ? ಅದೇ ರೀತಿಯಲ್ಲಿ ಅನೇಕ ಮಹಿಳೆಯರು ಪ್ರತಿಭೆ ಮತ್ತು ಪರಿಶ್ರಮದಿಂದ ವಿವಿಧ ಕ್ಷೇತ್ರಗಳಲ್ಲಿ
ಮಹತ್ವದ ಸಾಧನೆಗಳನ್ನು ಮಾಡಿದ್ದಾರೆ. ಅವರಲ್ಲಿ ‘ಮನು ಭಾಕರ್’ ಕೂಡಾ ಒಬ್ಬರು. ಅವರ ವಿವರಗಳನ್ನು ಕೆಳಗೆ
ಕೊಡಲಾಗಿದೆ. ಅದರ ಆಧಾರದಲ್ಲಿ ಅವರ ವ್ಯಕ್ತಿ ಪರಿಚಯವನ್ನು ಬರೆಯಿರಿ.
K 702 Page 3 of 7
Page 4
ಮನು ಭಾಕರ್
ಜನನ: ಫೆಬ್ರ ವರಿ 18, 2002
ಜನ್ಮ ಸ್ಥಳ: ಗೋರಿಯಾ ಗ್ರಾಮ, ಝಜ್ಜರ್ ಜಿಲ್ಲೆ, ಹರಿಯಾಣ, ಭಾರತ
ತಂದೆ: ರಾಮ್ ಕಿಶನ್ ಭಾಕರ್ ( ನೇವಿ ಎಂಜಿನಿಯರ್)
ತಾಯಿ: ಸುಮೇಧಾ ಭಾಕರ್
ಆರಂಭಿಕ ಜೀವನ ಮತ್ತು ಕ್ರೀಡಾ ವೃ ತ್ತಿಜೀವನ :
14 ನೇ ವಯಸ್ಸಿನಲ್ಲೇ ಶೂಟಿಂಗ್ (ಏರ್ ಪಿಸ್ತೂಲ್) ಅಭ್ಯಾ ಸ,
ಶೂಟಿಂಗ್ ಅವರ ಪ್ರ ಮುಖ ಆಸಕ್ತಿ
ಬಾಲ್ಯ ದಲ್ಲಿ ಬಾಕ್ಸಿಂಗ್, ಟೆನಿಸ್, ಮತ್ತು ಸ್ಕೇಟಿಂಗ್‌ನಂತಹ ಅನೇಕ
ಕ್ರೀಡೆಗಳ ಅಭ್ಯಾ ಸ
ರಾಷ್ಟ್ರೀಯ ಶೂಟಿಂಗ್ ತಂಡದಲ್ಲಿ ಅತ್ಯುತ್ತಮ ಶೂಟರ್
ಉನ್ನತ ಶಿಕ್ಷಣಕ್ಕಾಗಿ ವಿದೇಶ ಯಾತ್ರೆ
ಪ್ರ ಮುಖ ಸಾಧನೆಗಳು :
ಒಲಿಂಪಿಕ್ಸ್ 2024 (ಪ್ಯಾರಿಸ್): ಮಹಿಳೆಯರ 10 ಮೀಟರ್ ಏರ್ ಪಿಸ್ತೂಲ್ ಸ್ಪರ್ಧೆಯಲ್ಲಿ ಕಂಚಿನ ಪದಕ. ಒಂದೇ
ಒಲಿಂಪಿಕ್ಸ್ ಆವೃ ತ್ತಿಯಲ್ಲಿ ಎರಡು ಪದಕಗಳು (ಎರಡೂ ಕಂಚು)
ವಿಶ್ವ ಚಾಂಪಿಯನ್‌ಶಿಪ್ (2023): ಚಿನ್ನದ ಪದಕ.
ಏಷ ್ಯ ನ್ ಗೇಮ್ಸ್ (2022): ಚಿನ್ನದ ಪದಕ.
ಕಾಮನ್‌ವೆಲ್ತ್ ಕ್ರೀಡಾಕೂಟ (2018): 16 ನೇ ವಯಸ್ಸಿನಲ್ಲಿ ಮಹಿಳೆಯರ 10 ಮೀ ಏರ್ ಪಿಸ್ತೂಲ್ ಸ್ಪರ್ಧೆಯಲ್ಲಿ
ಚಿನ್ನದ ಪದಕ
ಏಷ ್ಯ ನ್ ಜೂನಿಯರ್ ಚಾಂಪಿಯನ್‌ಶಿಪ್ (2017): ಬೆಳ್ಳಿ ಪದಕ
ಪ್ರ ಶಸ್ತಿಗಳು ಮತ್ತು ಮನ್ನ ಣೆಗಳು :
ಮೇಜರ್ ಧ್ಯಾನ್ ಚಂದ್ ಖೇಲ್ ರತ್ನ ಪ್ರ ಶಸ್ತಿ (2025)
ಚಟುವಟಿಕೆ - 5 ವಿವರಣೆ ಬರೆಯುವ ಅಥವಾ ಪತ್ರಿಕಾ ವಾರ್ತೆ ಬರೆಯುವ
ಎ
1) ಆಧುನಿಕ ಕಾಲಘಟ್ಟದಲ್ಲಿ ಸಾವಯವ ಕೃ ಷಿಗೆ ಹೆಚ್ಚು ಬೇಡಿಕೆಯಿದೆ. ರಾಸಾಯನಿಕ ಗೊಬ್ಬರಗಳು, ಕೀಟನಾಶಕಗಳು,
ಕಳೆನಾಶಕಗಳು, ಮಾರ್ಪಾಡಿತ ಬೀಜಗಳು ಮತ್ತು ಕೃ ತಕ ಹಾರ್ಮೋನ್‌ಗಳನ್ನು ಬಳಸದೆ, ನೈ ಸರ್ಗಿಕ ವಿಧಾನಗಳ ಮೂಲಕ
ಆಹಾರವನ್ನು ಬೆಳೆಯುವ ಒಂದು ಸಮಗ್ರ ವ್ಯ ವಸ್ಥೆಯೇ ಸಾವಯವ ಕೃ ಷಿ. ಇದರ ಕುರಿತು ಸಮಗ್ರ ವಿಚಾರಗಳು
ಒಳಗೊಳ್ಳುವಂತೆ ಒಂದು ವಿವರಣೆ ತಯಾರಿಸಿರಿ.
K 702 Page 4 of 7
Page 5
2) ಕೆಳಗಿನ ವಾಕ್ಯ ದಲ್ಲಿ ಅಡಿಗೆರೆ ಎಳೆದ ಇಸವಿ ಮತ್ತು ದಿನಾಂಕವನ್ನು ಕನ್ನಡದಲ್ಲಿ ಬರೆದ ಸರಿಯಾದ ಕ್ರ ಮವನ್ನು ಆರಿಸಿ
ಬರೆಯಿರಿ.
ಕೇರಳ ರಾಜ್ಯ ವು 1956 ನವೆಂಬರ್ 1 ರಂದು ರೂಪುಗೊಂಡಿತು.
ಅ ) ೧೯೫೬ ನವೆಂಬರ್ ೧ ಆ ) ೧೯೯೬ ನವೆಂಬರ್ ೧
ಇ ) ೧೯೫೯ ನವೆಂಬರ್ ೧ ಈ ) ೧೬೫೯ ನವೆಂಬರ್ ೧
ಅಥವಾ ಬಿ
1) 'ಬಾಳು ಬೆಳಗಿಸಿದ ಕೃ ಷಿ' ಪಾಠದಲ್ಲಿ ಶಶಿಕಲಾಳ ಬದುಕಿನ ಹೋರಾಟಗಳ ಬಗ್ಗೆ ತಿಳಿದುಕೊಂಡಿರುವಿರಿ. ಬದುಕಲ್ಲಿ
ಚಿಕ್ಕ ವಯಸ್ಸಿಗೇ ಗಂಡನನ್ನು ಕಳೆದುಕೊಂಡು ಒಂಟಿಯಾದ ನಂತರವೂ, ಎಲ್ಲ ಸವಾಲುಗಳಿಗೂ ಎದೆಯೊಡ್ಡಿ
ಕೃ ಷಿಯಲ್ಲಿ ತೊಡಗಿಸಿಕೊಂಡು ಗೆದ್ದ ಈ ದಿಟ್ಟೆಯ ಬದುಕು ಎಲ್ಲರಿಗೂ ಸ್ಫೂರ್ತಿ. ಇವಳ ಜೀವನಾಧಾರಿತ ಕಿರುಚಿತ್ರ
'ಬಾಳು ಬೆಳಗಿಸಿದ ಕೃ ಷಿ'ಯ ಪ್ರ ದರ್ಶನ ನಿಮ್ಮ ಶಾಲೆಯಲ್ಲಿ ಆಯೋಜಿಸುವಿರೆಂದು ಭಾವಿಸಿ ಪ್ರ ಚಾರದ ಭಾಗವಾಗಿ
ಪತ್ರಿಕೆಗೆ ನೀಡಲು ಒಂದು ವಾರ್ತೆಯನ್ನು ತಯಾರಿಸಿರಿ.
2) ಈ ಕೆಳಗೆ ನೀಡಿರುವ ವಾಕ್ಯ ದಲ್ಲಿರುವ ಪದಗಳಲ್ಲಿ ಅನ್ಯ ದೇಶಿ ಅಲ್ಲದ ಪದ ಯಾವುದು? ಆಯ್ಕೆಗಳಿಂದ ಆರಿಸಿ
ಬರೆಯಿರಿ.
ನಮ್ಮ ಜಮೀನಿನಲ್ಲಿ ಜನರೇಟರ್ ಇತ್ತು. ಅದನ್ನು ಸ್ಟಾರ್ಟ್ ಮಾಡಲು ಒಂದು ಬಿಂದಿಗೆ ನೀರು ಹಾಕಬೇಕಿತ್ತು.
ಅ ) ಜಮೀನು ಆ ) ಜನರೇಟರ್
ಇ ) ಸ್ಟಾರ್ಟ್ ಈ ) ಬಿಂದಿಗೆ
ಚಟುವಟಿಕೆ - 6 ಹೋಲಿಕಾ ಟಿಪ್ಪಣಿ ಬರೆಯುವ ಅಥವಾ ಲೇಖನ ಬರೆಯುವ
ಎ
1) 'ನೇಗಿಲ ಯೋಗಿ' ಕವನವನ್ನು ಹಾಡಿ ಆಸ್ವಾದಿಸಿ ಅದರ ಆಶಯವನ್ನು ತಿಳಿದು ಕೊಂಡಿರುವಿರಲ್ಲವೇ? ಅದೇ ರೀತಿಯ
ಒಂದು ಹಾಡನ್ನು ಕೆಳಗೆ ಕೊಡಲಾಗಿದೆ. ಎರಡು ಹಾಡುಗಳನ್ನು ಓದಿ ಸಾಮ್ಯ - ವ್ಯ ತ್ಯಾ ಸಗಳನ್ನು ಕಂಡುಕೊಂಡು
ಹೋಲಿಕಾ ಟಿಪ್ಪಣಿ ಬರೆಯಿರಿ.
ನಮಸ್ತೆ
ಗದ್ದೆ ಕೆಸರನು ಕುಡಿದು, ಕಾಡು ಮುಳ್ಳನು ಕಡಿದು
ಮುಂಜಾನೆಯಿಂದ ಸಂಜೆಯ ವರೆಗೆ ದುಡಿದುಡಿದು
ಚಳಿಯೋ ಮಳೆಯೋ ಬಿಸಿಲೋ ಬೇಗೆಯೆಲ್ಲವ ಸಹಿಸಿ ಪದಗಳ ಅರ್ಥ :
ಬೆವರು ಕಂಬನಿ ರಕುತ ಸುರಿಸಿ ನೆಲವನು ತಣಿಸಿ
ಧರಣಿ - ಭೂಮಿ
ಕೆಸರಿನಿಂದಮೃ ತಕಲಶವನೆತ್ತಿ ಕೊಡುತಿರುವೆ;
ಗೈಮೆ - ದುಡಿಮೆ
ಹಸಿದ ಬಾಯಾರಿದ ಜಗತ್ತಿಗನ್ನವ ನೆರೆವೆ
ಋಣ - ಸಾಲ
ಸಸ್ಯ ಶ್ಯಾಮಲೆ ಸುಜಲೆ ಸುಫಲೆ ಮಾತೆಯ ಪುಣ್ಯ
ಪುತ್ರ ರೈತ ನಮಸ್ತೆ, ನೀನೆ ಪರಮ ಪವಿತ್ರ
ನಿನ್ನ ಋಣವೆನಗೆ ಹಿರಿದುಂಟಿದನು ತಿಳಿದಿಹೆನು
K 702 Page 5 of 7
Page 6
ನಿನ್ನ ಗೈಮೆಯ ಮೈಮೆಯಿಂದಲೇ ಬದುಕಿಹೆನು
ದಿನದಿನಂ ದುಡಿವ ನಿನ್ನಯ ಧೀರ ಹೆಜ್ಜೆಯಲಿ;
ಧರ್ಮ ಚಕ್ರ ದಿಂ ಧರಣಿ ತಿರುಗುತಿಹುದಚ್ಚಿನಲಿ;
ಮುಂದುಮುಂದಕೆ ಮುಂದನಂತಕಾಲದ ವರೆಗೆ
ತವ ಋಣಂ ತೀರಿಸುವ ಕುಲ ಪರಂಪರೆಯೆನಗೆ
- ಕಯ್ಯಾರ ಕಿಞ ್ಞಣ್ಣ ರೈ
ನೇಗಿಲ ಯೋಗಿ
ನೇಗಿಲ ಹಿಡಿದಾ ಹೊಲದೊಳು ಹಾಡುತ
ಉಳುವಾ ಯೋಗಿಯ ನೋಡಲ್ಲಿ.
ಫಲವನು ಬಯಸದ ಸೇವೆಯೇ ಪೂಜೆಯು
ಕರ್ಮವೆ ಇಹಪರ ಸಾಧನವು.
ಕಷ್ಟದೊಳನ್ನವ ದುಡಿವನೆ ತ್ಯಾ ಗಿ
ಸೃ ಷ್ಟಿ ನಿಯಮದೊಳಗವನೆ ಭೋಗಿ,
ಲೋಕದೊಳೇನೇ ನಡೆಯುತಲಿರಲಿ
ತನ್ನೀ ಕಾರ್ಯವ ಬಿಡನೆಂದೂ:
ರಾಜ್ಯ ಗಳುದಿಸಲಿ ರಾಜ್ಯ ಗಳಳಿಯಲಿ,
ಹಾರಲಿ ಗದ್ದುಗೆ ಮಕುಟಗಳು,
ಮುತ್ತಿಗೆ ಹಾಕಲಿ ಸೈ ನಿಕರೆಲ್ಲ,
ಬಿತ್ತುಳುವುದನವ ಬಿಡುವುದೆ ಇಲ್ಲ.
ಬಾಳಿತು ನಮ್ಮಿ ನಾಗರಿಕತೆ ಸಿರಿ
ಮಣ್ಣುಣಿ ನೇಗಿಲಿನಾಶ್ರ ಯದಿ;
ನೇಗಿಲ ಹಿಡಿದಾ ಕೈಯಾಧಾರದಿ
ದೊರೆಗಳು ದರ್ಪದೊಳಾಳಿದರು.
ನೇಗಿಲ ಬಲದೊಳು ವೀರರು ಮೆರೆದರು,
ಶಿಲ್ಪಿಗಳೆಸೆದರು, ಕವಿಗಳು ಬರೆದರು.
ಯಾರೂ ಅರಿಯದ ನೇಗಿಲ ಯೋಗಿಯೆ
ಲೋಕಕೆ ಅನ್ನವನೀಯುವನು.
ಹೆಸರನು ಬಯಸದೆ ಅತಿಸುಖಕೆಳಸದೆ
ದುಡಿವನು ಗೌರವಕಾಶಿಸದೆ.
ನೇಗಿಲಕುಳದೊಳಗಡಗಿದೆ ಕರ್ಮ;
ನೇಗಿಲ ಮೇಲೆಯೆ ನಿಂತಿದೆ ಧರ್ಮ.
- ಕುವೆಂಪು
K 702 Page 6 of 7
Page 7
ಅಥವಾ ಬಿ
1) ಕುವೆಂಪುರವರ "ನೇಗಿಲ ಯೋಗಿ" ಕವನದಲ್ಲಿ ರೈತನನ್ನು ಕೇವಲ ಒಬ್ಬ ಕಾರ್ಮಿಕನಾಗಿ ನೋಡದೆ, ಲೋಕಕ್ಕೆ ಅನ್ನ
ನೀಡುವ ಅನ್ನದಾತನಾಗಿ, ಮತ್ತು ಸೃ ಷ್ಟಿಯ ನಿಯಮವನ್ನು ಪಾಲಿಸುವವನಾಗಿ ಚಿತ್ರಿಸಿದ್ದಾರೆ. ಇತ್ತೀಚಿನ ದಿನಗಳಲ್ಲಿ ರೈತನ
ಕೈಯಲ್ಲಿ ನೇಗಿಲು ಕಾಣ ಸಿಗುವುದು ಅಪರೂಪ. ಕಾರಣ ತಂತ್ರ ಜ್ಞಾನದ ಪ್ರ ಭಾವ ಕೃ ಷಿ ಕೇತ್ರ ದಲ್ಲಿ ಕೂಡಾ ಬೀರಿದೆ. ಕೆಳಗೆ
ನೀಡಿರುವ ಹೆಗ್ಗುರುತುಗಳ ಆಧಾರದಲ್ಲಿ 'ಕೃ ಷಿ ಕೇತ್ರ ದಲ್ಲಿ ತಂತ್ರ ಜ್ಞಾನ' ಎಂಬ ವಿಷಯದ ಕುರಿತು ಲೇಖನವನ್ನು
ತಯಾರಿಸಿರಿ.
ಟ್ರ್ಯಾಕ್ಟರ್‌ಗಳು, ಬಿತ್ತನೆ ಯಂತ್ರ ಗಳು, ಕೊಯ್ಲು ಯಂತ್ರ ಗಳು
ಮೋಟಾರ್ ಪಂಪ್‌ಗಳು, ಹನಿ ನೀರಾವರಿ, ಸ್ಪ್ರಿಂಕ್ಲರ್
ಸ್ಮಾರ್ಟ್ ಫೋನ್ ಮತ್ತು ಆ್ಯ ಪ್‌ಗಳು (ಹವಾಮಾನದ ಬಗ್ಗೆ ಮಾಹಿತಿ)
ಡ್ರೋನ್‌ಗಳು (ಬೆಳೆಗಳು ಹೇಗೆ ಬೆಳೆಯುತ್ತಿವೆ, ಎಲ್ಲಿ ನೀರು ಬೇಕು, ಎಲ್ಲಿ ಕೀಟಗಳ ಸಮಸ್ಯೆ )
ಹೆಚ್ಚು ಬೆಳೆ
ಕಡಿಮೆ ಸಮಯ
ಕಡಿಮೆ ಶ್ರ ಮ
ನೀರಿನ ಉಳಿತಾಯ
ಕಡಿಮೆ ರಾಸಾಯನಿಕ ಬಳಕೆ
********************************
K 702 Page 7 of 7
Page 8
SUMMATIVE ASSESSMENT – TERM I
ಕಾಲುವಾರ್ಷಿಕ ಸಂಕಲನಾತ್ಮಕ ಮೌಲ್ಯಮಾಪನ
ಮಾದರಿ ಪ್ರಶ್ನೆ ಪತ್ರಿಕೆ
ಕನ್ನಡ ಮೂಲ ಪಠ್ಯ (KANNADA BT)
ತರಗತಿ: 7 ಸಮಯ: 2 ಗಂಟೆಗಳು
ಸೂಚನೆಗಳು
1. ಮೌಲ್ಯ ಮಾಪನ ಚಟುವಟಿಕೆಗಳು ಪ್ರಾರಂಭವಾಗುವ ಮೊದಲ ಹದಿನೈದು ನಿಮಿಷಗಳು ಕೂಲ್ ಆಪ್ ಟೈಮ್ ಆಗಿದೆ.
ಪ್ರ ಶ್ನೆ ಗಳನ್ನು ಓದಿ ಅರ್ಥೈಸಲು ಮತ್ತು ಉತ್ತರಗಳನ್ನು ಕಂಡುಕೊಳ್ಳಲು ಈ ಸಮಯವನ್ನು ಉಪಯೋಗಿಸಬಹುದು.
2. ಒಟ್ಟು ಆರು ಚಟುವಟಿಕೆಗಳಿವೆ. ಅವುಗಳಲ್ಲಿ ಎರಡು ಚಟುವಟಿಕೆಗಳಿಗೆ ಆಯ್ಕೆಗಳು ಇರುವುದು. ಅವುಗಳಲ್ಲಿ A
ಅಥವಾ B ಯಾವುದಾದರೂ ಒಂದು ಚಟುವಟಿಕೆಗೆ ಉತ್ತರಿಸಿದರೆ ಸಾಕು.
3. ಉತ್ತರಿಸಲು ಆಯ್ಕೆ ಮಾಡಿದ ಚಟುವಟಿಕೆಗಳ ಎಲ್ಲಾ ಉಪಪ್ರ ಶ್ನೆ ಗಳಿಗೂ ಉತ್ತರ ಬರೆಯಬೇಕು.
ಚಟುವಟಿಕೆ - 1 ಓದುವ ಬರೆಯುವ
ಕೆಳಗಿನ ಗದ್ಯವನ್ನು ಓದಿ ನೀಡಿರುವ ಪ್ರಶ್ನೆಗಳಿಗೆ ಉತ್ತರಿಸಿರಿ.
ಕಥೆಗಾರ, ಪ್ರಕೃ ತಿ ಪ್ರೇಮಿ ಮತ್ತು ಸಾಹಸಿ
ಅಪ್ಪಟ ಕನ್ನಡದ ಮಣ್ಣಿನ ಮಗ, ಪ್ರಕೃತಿಯ ಒಡನಾಡಿ, ಕಥೆಗಾರ, ವಿಜ್ಞಾನಿ, ಕೃಷಿಕ, ಛಾಯಾಗ್ರಾಹಕ – ಹೀಗೆ ಹಲವು
ಮುಖಗಳಿದ್ದ ಒಬ್ಬ ಅಸಾಮಾನ್ಯ ವ್ಯಕ್ತಿಯೇ ಪೂರ್ಣಚಂದ್ರ ತೇಜಸ್ವಿ. ಕನ್ನಡದ ಮಹಾನ್ ಕವಿ ಕುವೆಂಪು ಅವರ ಮಗನಾಗಿದ್ದರೂ,
ತೇಜಸ್ವಿ ತಮ್ಮದೇ ಆದ ದಾರಿಯಲ್ಲಿ ನಡೆದು, ಕನ್ನಡ ಸಾಹಿತ್ಯದಲ್ಲಿ ಹೊಸದೊಂದು ಸಂಚಲನ ಮೂಡಿಸಿದರು. ಮಕ್ಕಳಾದ ನಿಮಗೆ
ಅವರ ಜೀವನ ಒಂದು ಅದ್ಭುತ ಪಾಠ.
ತೇಜಸ್ವಿ ಅವರು ಹುಟ್ಟಿದ್ದು 1938 ರಲ್ಲಿ, ಮಲೆನಾಡಿನ ಸುಂದರ ಪರಿಸರದಲ್ಲಿ. ಬಾಲ್ಯದಿಂದಲೇ ಅವರಿಗೆ ಪ್ರಕೃತಿಯ ಬಗ್ಗೆ
ಅಪಾರ ಒಲವಿತ್ತು. ಕಾಡು, ಪ್ರಾಣಿ-ಪಕ್ಷಿಗಳು, ಗಿಡ-ಮರಗಳು – ಇವೆಲ್ಲ ಅವರ ಆಪ್ತ ಗೆಳೆಯರಾಗಿದ್ದವು. ಪುಸ್ತಕಗಳಿಗಿಂತ ಹೆಚ್ಚಾಗಿ,
ಅವರು ಪ್ರಪಂಚವನ್ನು ನೋಡಿ, ಕೇಳಿ, ಅನುಭವಿಸಿ ಕಲಿತರು. ಅವರ ಕಥೆಗಳಲ್ಲಿ ಬರುವ ಪಾತ್ರಗಳು, ಘಟನೆಗಳು ನಮಗೆ
ಮಲೆನಾಡಿನ ಕಾಡು, ಅಲ್ಲಿನ ಜನರ ಬದುಕು, ಪ್ರಾಣಿಗಳ ಚಲನವಲನಗಳನ್ನು ಕಣ್ಣಿಗೆ ಕಟ್ಟಿದಂತೆ ತೋರಿಸುತ್ತವೆ.
ತೇಜಸ್ವಿ ಅವರು ದೊಡ್ಡ ವಿಶ್ವವಿದ್ಯಾಲಯಗಳಲ್ಲಿ ಹೋಗಿ ಪಾಠ ಹೇಳುವ ಅಧ್ಯಾಪಕರಾಗಲಿಲ್ಲ, ಬದಲಿಗೆ ಸ್ವತಃ ತಾವೇ
ಪ್ರಕೃತಿಯಲ್ಲಿ ವಿದ್ಯಾರ್ಥಿಯಾಗಿ, ಅದರ ಪಾಠಗಳನ್ನು ಕಲಿತರು. ಕಾಡಿನಲ್ಲಿ ವಾಸಿಸುತ್ತಾ, ಅಡಿಕೆ ತೋಟ ಮಾಡಿದರು, ಮೀನು
ಸಾಕಿದರು, ಕಾಡಿನ ನಡುವೆ ಅಲೆಯುತ್ತಾ ಪ್ರಾಣಿಗಳ ಬಗ್ಗೆ ಅಧ್ಯಯನ ಮಾಡಿದರು. ಪ್ರತಿಯೊಂದು ಸಣ್ಣ ಜೀವಿ, ಮರ, ಬಳ್ಳಿ, ಹೂವು
– ಇವುಗಳ ಬಗ್ಗೆಯೂ ಅವರಿಗೆ ಅಪಾರ ಕುತೂಹಲವಿತ್ತು. ಇದೇ ಕುತೂಹಲದಿಂದ ಅವರು ಅನೇಕ ವೈಜ್ಞಾನಿಕ ವಿಚಾರಗಳನ್ನು
ತಮ್ಮ ಕಥೆಗಳಲ್ಲಿ ಸುಲಭವಾಗಿ ಅರ್ಥವಾಗುವಂತೆ ಬರೆದರು. 'ಕರ್ವಾಲೋ' ಎಂಬ ಕಾದಂಬರಿಯಲ್ಲಿ ಅವರು ಒಂದು ವಿಶಿಷ್ಟ
ಜಾತಿಯ ಹಲ್ಲಿಯನ್ನು ಹುಡುಕಿಕೊಂಡು ಹೋಗುವ ಕಥೆಯನ್ನು ಬರೆಯುತ್ತಾರೆ, ಇದು ವಿಜ್ಞಾನ ಮತ್ತು ಸಾಹಸದ ಅದ್ಭುತ ಮಿಶ್ರಣ.
K 712 Page 1 of 5
Page 9
ಅವರು ಕೇವಲ ಕಥೆ ಬರೆಯಲಿಲ್ಲ, ಚಿತ್ರಗಳನ್ನು ತೆಗೆದರು, ಚಿತ್ರಗಳನ್ನು ಬರೆದರು, ಹೊಸ ಪ್ರಯೋಗಗಳನ್ನು ಮಾಡಿದರು.
ಅವರ ಬಳಿ ಯಾವಾಗಲೂ ಒಂದು ಕ್ಯಾಮರಾ ಇರುತ್ತಿತ್ತು. ಪ್ರಕೃತಿಯ ಸುಂದರ ದೃಶ್ಯಗಳನ್ನು, ವಿಚಿತ್ರ ಪ್ರಾಣಿಗಳನ್ನು ತಮ್ಮ
ಕ್ಯಾಮರಾದಲ್ಲಿ ಸೆರೆಹಿಡಿದು, ಆ ಮೂಲಕ ಪ್ರಪಂಚವನ್ನು ಮತ್ತಷ್ಟು ಹತ್ತಿರದಿಂದ ಅರ್ಥಮಾಡಿಕೊಳ್ಳಲು ಪ್ರಯತ್ನಿಸಿದರು.
'ಮಾಯಾಲೋಕ', 'ಮಿಲೇನಿಯಮ್' ನಂತಹ ಕೃತಿಗಳು ಅವರು ತಂತ್ರಜ್ಞಾನ ಮತ್ತು ಹೊಸ ಆವಿಷ್ಕಾರಗಳ ಬಗ್ಗೆ ಎಷ್ಟೊಂದು ಆಸಕ್ತಿ
ಹೊಂದಿದ್ದರು ಎಂಬುದನ್ನು ತೋರಿಸುತ್ತವೆ.
ತೇಜಸ್ವಿಯವರ ಬದುಕು ನಮಗೆ ಕಲಿಸುವ ಪಾಠವೇನೆಂದರೆ ಕೇವಲ ಪುಸ್ತಕಗಳಲ್ಲಿ ಓದುವುದಲ್ಲ , ಪ್ರಪಂಚವನ್ನು ಕಣ್ಣಾರೆ
ನೋಡಿ, ಅನುಭವಿಸಿ, ಪ್ರಶ್ನೆ ಕೇಳಿ ಮತ್ತು ಹೊಸ ವಿಷಯಗಳನ್ನು ಕಲಿಯಿರಿ. ನಿಮ್ಮ ಸುತ್ತಲಿರುವ ಸಣ್ಣ ವಿಷಯಗಳ ಬಗ್ಗೆಯೂ
ಕುತೂಹಲ ಇಟ್ಟುಕೊಳ್ಳಿ. ಪರಿಸರವನ್ನು ಪ್ರೀತಿಸಿ, ಅದನ್ನು ಸಂರಕ್ಷಿಸಿ. ನಿಮ್ಮ ಆಸಕ್ತಿಗಳನ್ನು ಬೆನ್ನಟ್ಟಿ ಹೋಗಿ, ಅದರಲ್ಲಿ ಯಶಸ್ಸು
ಪಡೆಯಿರಿ. ಕಷ್ಟಗಳು ಬಂದರೂ ಎದೆಗುಂದದೆ, ನಿಮ್ಮದೇ ಆದ ದಾರಿಯನ್ನು ಕಂಡುಕೊಳ್ಳಿರಿ.
1) ಪೂರ್ಣ ಚಂದ್ರ ತೇಜಸ್ವಿಯವರ ಹವ್ಯಾಸಗಳಲ್ಲಿ ಒಳಪಡದ ಆಯ್ಕೆ ಯಾವುದು?
ಅ ) ಮೀನುಗಾರಿಕೆ ಆ ) ಕೃ ಷಿ ಮತ್ತು ಪರಿಸರ ಕಾಳಜಿ
ಇ ) ಸಿನಿಮಾ ನಟನೆ ಈ ) ಛಾಯಾಗ್ರಹಣ
2) ಗದ್ಯ ಭಾಗದಲ್ಲಿ ಬಂದಿರುವ ಕೆಲವು ಪದಗಳ ಜೊತೆಗಳನ್ನು ಕೊಡಲಾಗಿದೆ. ಅವುಗಳಲ್ಲಿ ತಪ್ಪಾದ ಜೊತೆ
ಯಾವುದು?
ಅ ) ಕೃ ತಿ - ಅಕೃ ತಿ ಆ ) ವೈಜ್ಞಾನಿಕ - ಅವೈಜ್ಞಾನಿಕ
ಇ ) ಆಸಕ್ತಿ - ನಿರಾಸಕ್ತಿ ಈ ) ಸಾಮಾನ್ಯ - ಅಸಾಮಾನ್ಯ
3) ಈ ಕೆಳಗೆ ನೀಡಿರುವವುಗಳಲ್ಲಿ ಪರಿಸರ ನಾಶಕ್ಕೆ ಕಾರಣವಾಗುವ ಚಟುವಟಿಕೆ ಯಾವುದು?
ಅ ) ಪ್ಲಾಸ್ಟಿಕ್ ಬಳಕೆಯನ್ನು ಕಡಿಮೆ ಮಾಡುವುದು
ಆ ) ಗಿಡಗಳನ್ನು ನೆಟ್ಟು ಬೆಳೆಸುವುದು
ಇ ) ಗುಡ್ಡಗಳನ್ನು ಸಮತಟ್ಟು ಮಾಡುವುದು
ಈ ) ನೀರನ್ನು ಮಿತವಾಗಿ ಬಳಸುವುದು.
4) ‘‘ಪೂರ್ಣ ಚಂದ್ರ ತೇಜಸ್ವಿಯವರು ಪ್ರಕೃ ತಿಯಲ್ಲಿ ವಿದ್ಯಾರ್ಥಿಯಾಗಿ ಪಾಠಗಳನ್ನು ಕಲಿತರು.’’ ಈ ವಾಕ್ಯ ದಿಂದ
ಏನನ್ನು ಅರ್ಥೈಸಿಕೊಳ್ಳಬಹುದು ? ನಿಮ್ಮ ಮಾತುಗಳಲ್ಲಿ ಬರೆಯಿರಿ.
ಚಟುವಟಿಕೆ - 2 ಆಶಯ ಬರೆಯುವ
ರಾಷ್ಟ ್ರಕವಿ ಗೋವಿಂದ ಪೈಗಳ 'ಕನ್ನಡಿಗರ ತಾಯಿ' ಕವಿತೆಯನ್ನು ಹಾಡಿ ಆಸ್ವಾದಿಸಿರುವಿರಲ್ಲವೇ? ಅದೇ ರೀತಿಯಲ್ಲಿ ಕನ್ನಡ
ಭಾಷಾ ಪ್ರೇಮವನ್ನು ಸಾರುವ ಕವಿತೆಯೊಂದನ್ನು ಕೆಳಗೆ ಕೊಡಲಾಗಿದೆ.
ಕನ್ನಡವೇ ಸತ್ಯ
ಎಲ್ಲಾದರು ಇರು; ಎಂತಾದರು ಇರು;
ಎಂದೆಂದಿಗೂ ನೀ ಕನ್ನಡವಾಗಿರು.
K 712 Page 2 of 5
Page 10
ಕನ್ನಡವೇ ಸತ್ಯ ! ಕನ್ನಡವೇ ನಿತ್ಯ !
ಕನ್ನಡ ಗೋವಿನ ಓ ಮುದ್ದಿನ ಕರು,
ಕನ್ನಡತನವೊಂದಿದ್ದರೆ ನೀನಮ್ಮಗೆ ಕಲ್ಪತರು!
ಕನ್ನಡವೇ ಸತ್ಯ ! ಕನ್ನಡವೇ ನಿತ್ಯ !
ನೀ ಮೆಟ್ಟುವ ನೆಲ - ಅದೇ ಕರ್ನಾಟಕ;
ನೀನೇರುವ ಮಲೆ - ಸಹ್ಯಾದ್ರಿ .
ನೀ ಮುಟ್ಟುವ ಮರ - ಶ್ರೀಗಂಧದ ಮರ;
ನೀ ಕುಡಿಯುವ ನೀರ್ - ಕಾವೇರಿ.
ಪಂಪನನೋದುವ ನಿನ್ನ ನಾಲಗೆ
ಕನ್ನಡವೇ ಸತ್ಯ
ಕುಮಾರವ್ಯಾಸನಾಲಿಪ ಕಿವಿಯದು
ಕನ್ನಡವೇ ನಿತ್ಯ ।।ಎಲ್ಲಾದರೂ ಇರು ।।
- ಕುವೆಂಪು
1) ಮೇಲೆ ಕೊಟ್ಟಿರುವ ಪದ್ಯಭಾಗದ ಆಶಯವನ್ನು ಬರೆಯಿರಿ.
2) ‘ಪಂಪನನೋದುವ' ಎಂಬ ಪದವನ್ನು ಅರ್ಥವತ್ತಾಗಿ ಈ ರೀತಿಯಾಗಿ ಬಿಡಿಸಿಬರೆಯಬಹುದು.
ಅ ) ಪಂಪನ +ಓದುವ ಆ ) ಪಂಪನನು+ ಓದುವ
ಇ ) ಪಂಪ + ಓದುವ ಈ ) ಪಂಪನನೋ + ಓದುವ
3) ಕೆಳಗೆ ಕೊಟ್ಟಿರುವ ವಾಕ್ಯದಲ್ಲಿ ಅಡಿಗೆರೆ ಎಳೆದ ಪದವನ್ನು ಬಳಸಿ ಸ್ವಂತ ವಾಕ್ಯ ರಚಿಸಿರಿ.
ಅವನು ಹೇಳಿದ ಕಥೆಯಲ್ಲಿ ಒಂದಿಷ್ಟು ಕೂಡಾ ಸತ್ಯ ಇರಲಿಲ್ಲ.
ಚಟುವಟಿಕೆ - 3 ಅಭಿಪ್ರಾಯ ಟಿಪ್ಪಣಿ ಬರೆಯುವ
ಶಾಂತಿಗೆರೆಯ ರೈತ ರಾಮಚಂದ್ರಪ್ಪ ಈ ರಸ್ತೆಯಲ್ಲಿ ಅಷ್ಟು ದೂರ ಬಂದಾಗ ಹೊಲದಲ್ಲಿ ಕೊಳೆ ಎದ್ದು ನಿಂತಿದ್ದರೂ ಅಲ್ಲಲ್ಲಿ
ತುಂಡು ತುಂಡಾಗಿ ಗುರುತು ಮಾಡಿದ್ದು, ಕೆಲವೆಡೆಗಳಲ್ಲಿ ಅಡಿಪಾಯ ತೆಗೆಯುತ್ತಿರುವುದು, ಒಂದೆರಡು ಕಡೆಗಳಲ್ಲಿ ಗೋಡೆಗಳು
ಎದ್ದು ನಿಂತಿರುವುದು ಕಂಡಿತು. ಕಲ್ಲು, ಮರಳು, ಮಣ್ಣು, ಮರಗಳನ್ನು ಕೆಲವರು ಲಾರಿಗಳಲ್ಲಿ ತಂದು ಅಲ್ಲಲ್ಲಿ ಹಾಕುತ್ತಿದ್ದರು.
1) ಮೇಲೆ ನೀಡಿರುವ ವಿವರಣೆಯನ್ನು ಓದಿದಿರಲ್ಲವೇ? ಇಂದು ಹಳ್ಳಿಗಳು ಮಾಯವಾಗಿ ಅಲ್ಲಲ್ಲಿ ಪಟ್ಟಣಗಳು ತಲೆ
ಎತ್ತುತ್ತಿವೆ. ನಿಮ್ಮ ದೃಷ್ಟಿಯಲ್ಲಿ ಇದು ಧನಾತ್ಮಕ ಬೆಳೆವಣಿಗೆಯೋ? ಋಣಾತ್ಮಕ ಬೆಳವಣಿಗೆಯೋ? ಅಭಿಪ್ರಾಯ ಟಿಪ್ಪಣಿ
ಬರೆಯಿರಿ.
2) ಈ ಕೆಳಗಿನ ವಾಕ್ಯಗಳಲ್ಲಿ ಅನ್ಯದೇಶೀಯ ಪದ ಇಲ್ಲದ ವಾಕ್ಯ ಯಾವುದು?
ಅ ) ಈ ಊರಿನಲ್ಲಿ ಸೆಟಲ್ ಆಗುವುದು.
ಆ ) ಕಡಿದು ಮಾಡಿದ ಬೆಟ್ಟುಗದ್ದೆಗಳು ಇದ್ದುವು.
ಇ ) ಕಾರಿನ ಹಾರ್ನ್ ಕೇಳಿಸಿತು.
ಈ ) ಕೆಲವೊಮ್ಮೆ ತಂದೆಗೆ ಕಂಪ್ಲೇಂಟು ಹೋಗುತ್ತಿತ್ತು.
K 712 Page 3 of 5
Page 11
ಚಟುವಟಿಕೆ - 4 ಪಾತ್ರಚಿತ್ರಣ ಬರೆಯುವ
‘ಇನ್ನೆಷ್ಟು ದಿನ ಈ ಇಳಿವಯಸ್ಸಿನಲ್ಲಿ ಈ ಹಳ್ಳಿಕೊಂಪೇಲಿರೋದು? ಆರಾಮವಾಗಿ ಪೇಟೇಲಿರಬಹುದಲ್ಲಾ ಚಂದದ
ಮನೆಯಲ್ಲಿದ್ದುಕೊಂಡು... ಅಲ್ಲಿ-ಇಲ್ಲಿ ಮಗನ ಕಾರಲ್ಲಿ ತಿರ್ಗಾಡಿಕೊಂಡು... ಮೊಮ್ಮಕ್ಕಳೊಂದಿಗೆ ಆಟವಾಡ್ಕೊಂಡು,
ಖುಷಿಯಲ್ಲಿರ್ಬಹುದಲ್ಲಾ…ದಿನ ಹೋಗೋದೇ ಗೊತ್ತಾಗ್ಲಿಕ್ಕಿಲ್ಲ .
1) ಲಕ್ಷ್ಮಮ್ಮನವರ ಈ ಮಾತಿನ ಆಧಾರದಲ್ಲಿ ಅವರ ಪಾತ್ರಚಿತ್ರಣವನ್ನು ಬರೆಯಿರಿ.
2) ರಾಮನು ಶಾಲೆಗೆ ಹೋದನು. ಇಲ್ಲಿ 'ರಾಮನು' ಎಂಬ ಪದದ ಬದಲಿಗೆ ಬಳಸಬಹುದಾದ ಸೂಕ್ತ
ಸರ್ವನಾಮ ಯಾವುದು?
ಅ ) ಅವರು ಆ ) ಅವನು
ಇ ) ಅವಳು ಈ ) ಅದು
ಚಟುವಟಿಕೆ - 5 ಮನವಿ ಪತ್ರ ಬರೆಯುವ ಅಥವಾ ಓದುಗರ ಓಲೆಗೆ ಬರೆಯುವ
A) ನಮ್ಮ ಶಾಲೆಗಳಲ್ಲಿ ಮಧ್ಯಾಹ್ನದ ಬಿಸಿಯೂಟವನ್ನು ನೀಡಲಾಗುತ್ತಿದೆ. ಪೌಷ್ಟಿಕಾಂಶಯುಕ್ತ ಮತ್ತು ತಾಜಾ ತರಕಾರಿಗಳನ್ನು
ವಿದ್ಯಾರ್ಥಿಗಳಿಗೆ ಒದಗಿಸುವ ಮಹತ್ತರ ಉದ್ದೇಶದಿಂದ, ಶಾಲಾ ಆವರಣದಲ್ಲಿಯೇ ಒಂದು ಸುಸಜ್ಜಿತ ತರಕಾರಿ
ತೋಟವನ್ನು ನಿರ್ಮಿಸಬೇಕಾಗಿದೆ. ಈ ಮಹತ್ವಾಕಾಂಕ್ಷೆಯ ಯೋಜನೆಯನ್ನು ಯಶಸ್ವಿಗೊಳಿಸಲು, ನಿಮ್ಮ ಊರಿನ ಕೃಷಿ
ಇಲಾಖೆಯ ಸಹಕಾರ ಅತ್ಯಗತ್ಯವಾಗಿದೆ. ತರಕಾರಿ ತೋಟ ನಿರ್ಮಾಣಕ್ಕೆ ಬೇಕಾದ ಬೀಜಗಳು, ಸಸಿಗಳು, ಸಾವಯವ
ಗೊಬ್ಬರ, ಕೃಷಿ ಸಲಕರಣೆಗಳು ಹಾಗೂ ತಾಂತ್ರಿಕ ಮಾರ್ಗದರ್ಶನವನ್ನು ಒದಗಿಸುವಂತೆ ವಿನಂತಿಸಿಕೊಂಡು ಕೃಷಿ
ಅಧಿಕಾರಿಗೆ 'ಮನವಿ ಪತ್ರ'ವೊಂದನ್ನು ಬರೆಯಿರಿ.
ಅಥವಾ
B) ಆಧುನಿಕ ಜೀವನಶೈಲಿಯಲ್ಲಿ ಪ್ರತಿಯೊಬ್ಬರೂ ತಮ್ಮ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸುವುದು ಅತೀ
ಅಗತ್ಯವಾಗಿದೆ. ದಿನನಿತ್ಯದ ವ್ಯಾಯಾಮದ ಕೊರತೆ, ಅಸಮರ್ಪಕ ಆಹಾರ ಕ್ರಮ ಹಾಗೂ ಡಿಜಿಟಲ್ ವಸ್ತುಗಳ ಅತಿಯಾದ
ಬಳಕೆ ನಮ್ಮ ಆರೋಗ್ಯವನ್ನು ಏರುಪೇರು ಮಾಡುತ್ತಿವೆ. ಈ ನಿಟ್ಟಿನಲ್ಲಿ, ನಮ್ಮ ಶಾಲೆಗಳಲ್ಲಿ ಮಕ್ಕಳ ಶಾರೀರಿಕ ಮತ್ತು
ಮಾನಸಿಕ ಆರೋಗ್ಯವನ್ನು ಸದೃಢಗೊಳಿಸಬೇಕೆಂಬ ಉದ್ದೇಶದಿಂದ ಝೂಂಬಾ ನೃತ್ಯವನ್ನು ಪರಿಚಯಿಸಲಾಯಿತು. ಈ
ಕುರಿತು 'ಮಕ್ಕಳ ಆರೋಗ್ಯಕ್ಕಾಗಿ ವಿವಿಧ ಚಟುವಟಿಕೆಗಳು' ಎಂಬ ವಿಷಯದ ಮೇಲೆ ಪತ್ರಿಕೆಯ 'ಓದುಗರ ಓಲೆ'
ವಿಭಾಗಕ್ಕೆ ಲೇಖನವನ್ನು ಬರೆಯಿರಿ.
ಚಟುವಟಿಕೆ - 6 ಲಿಖಿತ ಭಾಷಣ ಬರೆಯುವ ಅಥವಾ ವರ್ಣನೆ ಬರೆಯುವ
A) ಫ್ಯಾಕ್ಟರಿ ಪ್ರಾರಂಭವಾದ ಮೇಲೆ ಕೆಲವೇ ದಿನಗಳಲ್ಲಿ ಆದ ಬದಲಾವಣೆಯೆಂದರೆ ಶಾಂತಿಗೆರೆ
ಶಾಂತಿನಗರವಾಯಿತು. ಕೆಟ್ಟ ವಾಸನೆಯೊಂದು ಮೂಗಿಗೆ ಅಡರತೊಡಗಿತು. ತ್ಯಾಜ್ಯ ವಿಲೇವಾರಿಯು ಇಂದು ನಮ್ಮ
ದೇಶದ ದೊಡ್ಡ ಸಮಸ್ಯೆಯಾಗಿದೆ. ಸ್ವಚತೆ
್ಛ ಯ ಮಹತ್ವ ಮತ್ತು ಪ್ರಾಮುಖ್ಯತೆಯನ್ನು ಎಷ್ಟು ಹೇಳಿದರೂ ಜನರು ಇನ್ನೂ
K 712 Page 4 of 5
Page 12
ಎಚ್ಚೆತ್ತುಕೊಳ್ಳದೇ ಇರುವುದು ವಿಷಾದನೀಯ. ಇದರ ಆಧಾರದಲ್ಲಿ ‘ಸ್ವಚ್ಛತೆಯ ಮಹತ್ವ’ದ ಕುರಿತು ಒಂದು ಲಿಖಿತ
ಭಾಷಣ ತಯಾರಿಸಿರಿ.
ಅಥವಾ
B) ಸೂರ್ಯೋದಯ ಒಂದು ಅದ್ಭುತ ಪ್ರಕೃತಿ ಸೌಂದರ್ಯ. ಇಡೀ ಜಗತ್ತು ನಿದ್ರೆಯಲ್ಲಿ ಮುಳುಗಿರುವಾಗ, ಸೂರ್ಯನ
ಮೊದಲ ಕಿರಣಗಳು ಪ್ರಕೃತಿಯಲ್ಲಿ ನಿಧಾನವಾಗಿ ಮೂಡುವುದನ್ನು ನೋಡುವಾಗ ಮೈ ಮನ ರೋಮಾಂಚನವಾಗುತ್ತದೆ.
ನೀವು ಸೂರ್ಯೋದಯದ ಸುಂದರ ಕ್ಷಣಗಳನ್ನು ಸವಿದಿರಬಹುದಲ್ಲವೇ? ಕೆಳಗೆ ನೀಡಿರುವ ಹೆಗ್ಗುರುತುಗಳನ್ನು ಮತ್ತು
ನಿಮ್ಮ ಅನುಭವಗಳನ್ನು ಸೇರಿಸಿ ಸೂರ್ಯೋದಯದ 'ವರ್ಣನೆ' ಬರೆಯಿರಿ.
ಆಕಾಶವು ಚಿನ್ನದ ಬಣ್ಣಗಳ ಅದ್ಭುತ ಮಿಶ್ರ ಣ
ಮಂಜಿನ ಪದರಗಳು ನಿಧಾನವಾಗಿ ಕರಗಲು ಪ್ರಾರಂಭ.
ಪಕ್ಷಿಗಳ ಇಂಪಾದ ಚಿಲಿಪಿಲಿ ನಾದ
ತಂಪಾದ ಗಾಳಿ
ಮನಸ್ಸಿಗೆ ಒಂದು ರೀತಿಯ ನೆಮ್ಮದಿ ಮತ್ತು ಉಲ್ಲಾಸ
ಕಿರಣಗಳಿಂದ ಇಡೀ ಪ್ರ ಪಂಚಕ್ಕೆ ಚೈತನ್ಯ
ಹೊಸ ಉತ್ಸಾಹ ಮತ್ತು ಶಕ್ತಿ
ಹೊಸ ಆರಂಭ, ಹೊಸ ಅವಕಾಶಗಳು ಮತ್ತು ಹೊಸ ಭರವಸೆಗಳು
********************************
K 712 Page 5 of 5