aglasem.com
Home Schools Admission Career Mock Test PDF Docs Playground
ClassChoose class
StateSelect state

Kerala Class 9 First Term Model Question Paper 2025 Kannada

Download Kerala Class 9 First Term Model Question Paper 2025 Kannada pdf. Here at aglasem.com get latest Kerala Board Class 9 Sample Papers. Kerala Class 9 Onam Exam Kannada Model Paper 2025 is below. More Detail
Kerala Class 9 First Term Model Question Paper 2025 Kannada - Page 1 of 5

Finished viewing? Save it for later —

Download Kerala Class 9 First Term Model Question Paper 2025 Kannada (PDF · 5 pages)
Downloaded 60 times

About Kerala Class 9 First Term Model Question Paper 2025 Kannada

Kerala Class 9 First Term Model Question Paper 2025 Kannada is available here for free download. Published by Kerala Board for Class 9, this sample paper can be viewed online or downloaded as a PDF (5 pages). Candidates preparing for Class 9 can use Kerala Class 9 First Term Model Question Paper 2025 Kannada to understand the exam pattern, the type of questions asked, and the overall difficulty level.

Frequently Asked Questions

How can I download Kerala Class 9 First Term Model Question Paper 2025 Kannada?

Open this page and click the Download button to save Kerala Class 9 First Term Model Question Paper 2025 Kannada as a PDF. It is completely free on AglaSem Docs.

Is Kerala Class 9 First Term Model Question Paper 2025 Kannada free to download?

Yes. Kerala Class 9 First Term Model Question Paper 2025 Kannada can be viewed online and downloaded as a PDF free of cost on AglaSem Docs.

How many pages does Kerala Class 9 First Term Model Question Paper 2025 Kannada have?

Kerala Class 9 First Term Model Question Paper 2025 Kannada contains 5 pages, which you can read online or download together as a single PDF.

Where can I find more Class 9 study material?

You can find more Class 9 question papers, sample papers, syllabus, and answer keys on AglaSem Docs.

Kerala Class 9 First Term Model Question Paper 2025 Kannada – Text

Read the full text of this sample paper below — useful to quickly search, copy and reference the content online without downloading the PDF.

📄 View text version (5 pages)

Page 1

MODEL QUESTION PAPER
KANNADA-PAPER I
ಮಾದರಿ ಪ್ರಶ್ನೆ ಪತ್ರಿಕೆ ಅಂಕಗಳು:40
ತರಗತಿ:IX ಕನ್ನಡ I ಸಮಯ:1 ಗಂಟೆ 30 ನಿಮಿಷ
ಸೂಚನೆಗಳು:
 ಪ್ರಶ್ನೆಗಳನ್ನು ಓದಿ ಅರ್ಥೈಸಿಕೊಳ್ಳಲು ನಿಮಗೆ 15 ನಿಮಿಷ ಕಾಲಾವಕಾಶ ನೀಡಲಾಗಿದೆ.
 ಎಲ್ಲಾ ಪ್ರಶ್ನೆಗಳನ್ನು ಸಾವಧಾನವಾಗಿ ಓದಿರಿ.
 ಸೂಚನೆಗಳನ್ನು ಓದಿ ಅರ್ಥಮಾಡಿಕೊಂಡು ಕೊಡಲಾದ ಪ್ರಶ್ನೆಗಳಿಗೆ ಉತ್ತರಿಸಿರಿ.
1 ರಿಂದ 3 ರ ವರೆಗಿನ ಪ್ರಶ್ನೆಗಳಲ್ಲಿ ಯಾವುದಾದರೂ 2 ಪ್ರಶ್ನೆಗಳಿಗೆ ಉತ್ತರಿಸಿರಿ. 2*1=2
1.1. ಆವರಣದಿಂದ ಸರಿಯಾದ ಉತ್ತರವನ್ನು ಆರಿಸಿ ಬರೆಯಿರಿ.
' ಗ್ರಾಮಭಾರತ ' ಪಾಠ ಭಾಗವು ಯಾವ ಸಾಹಿತ್ಯ ಪ್ರಕಾರಕ್ಕೆ ಸೇರಿದೆ?
( ಕಥೆ, ಕಾದಂಬರಿ, ಅಂಕಣ ಬರಹ, ವಿಮರ್ಶೆ )
2. ಮಾದರಿಯಂತೆ ಉತ್ತರಿಸಿರಿ.
ದುಃಖೋದ್ರಿಕ್ತ = ದುಃಖ + ಉದ್ರಿಕ್ತ
ಔಷಧೋಪಚಾರ= -----------
3.' ನಂದನವೇ ನಾಡೆಲ್ಲವೂ' ಎಂಬಲ್ಲಿ ಕವಿ ಮಲೆನಾಡಿನ ಯಾವ ಶ್ರೇಷ್ಠತೆಯನ್ನು ಗುರುತಿಸುತ್ತಾರೆ?
(ಮಳೆ ,ಗಾಳಿ ,ಮೋಡ, ಪ್ರಕೃತಿ ಸೌಂದರ್ಯ)
4 ರಿಂದ 7 ರವರೆಗಿನ ಪ್ರಶ್ನೆಗಳಲ್ಲಿ ಯಾವುದಾದರೂ 3 ಪ್ರಶ್ನೆಗಳಿಗೆ ಉತ್ತರಿಸಿರಿ. 3*2=6
4.ಕೆಳಗೆ ಕೊಡಲಾದ ವಾಕ್ಯದಲ್ಲಿ ಅಡಿಗೆರೆ ಎಳೆದ ಭಾಷಾ ಪ್ರಯೋಗವನ್ನು ಬಳಸಿಕೊಂಡು ಇನ್ನೊಂದು ಸ್ವಂತ ವಾಕ್ಯವನ್ನು
ರಚಿಸಿರಿ.
ಅಜ್ಜಿಯ ಮಾತಿನ ಅರ್ಥ ತಿಳಿಯದ ನಮೃತಾಳು ಗರಬಡಿದವಳಂತೆ ನಿಂತುಕೊಂಡಳು.
5. ' ಬೀಬಜ್ಜಿ 'ಪಾಠ ಭಾಗವು ನೀಡುವ ಸಂದೇಶವೇನು ನಿಮ್ಮ ಮಾತುಗಳಲ್ಲಿ ಬರೆಯಿರಿ.
6. ' ಬೆಟ್ಟದ ನೋಟ' ಪಾಠ ಭಾಗಕ್ಕೆ ಆ ಶೀರ್ಷಿಕೆಯು ಎಷ್ಟರಮಟ್ಟಿಗೆ ಒಪ್ಪುತ್ತದೆ ವಿಶ್ಲೇಷಿಸಿ ಬರೆಯಿರಿ.
7.ರಶೀದ್ ಈ ಶತಮಾನದಲ್ಲಿ ಬದುಕಲು ನಾಲಾಯಕ್ ಆದ ವ್ಯಕ್ತಿ ಎಂಬುದು ಆತನ ಸ್ನೇಹಿತರ ಅನಿಸಿಕೆ. ಆತನ ಅತಿ
ಪ್ರಾಮಾಣಿಕತೆಯೇ ಸ್ನೇಹಿತರ ಈ ವಾದಕ್ಕೆ ಕಾರಣ. ಸಾಕಷ್ಟು ಮೇಲ್ಸಂಪಾದನೆ ಪಡೆಯಬಹುದಾಗಿದ್ದ ಉದ್ಯೋಗದಲ್ಲಿದ್ದರೂ
ಆತನು ಈವರೆಗೂ ಆ ಹಾದಿ ತುಳಿದವನಲ್ಲ ತಿಂಗಳ ಕೊನೆಯಲ್ಲಿ ಹಣದ ಕೊರತೆಯಿಂದಾಗಿ ಬಸಳೆ ಸೊಪ್ಪಿನ ಸಾರು ಮಾಡಿ
ಊಟ ಮಾಡಿದ್ದು ಎಷ್ಟು ಬಾರಿಯೊ! ಆತನ ಮನೆಯಲ್ಲಿ ಹೆಂಡತಿ ಮತ್ತು ಇಬ್ಬರು ಮಕ್ಕಳು , ತಾಯಿ, ನಿರುದ್ಯೋಗಿ ತಮ್ಮ
ಮತ್ತು ತಂಗಿ ಇದ್ದಾರೆ. ಎಲ್ಲರೂ ಆತನೊಡನೆ ಸರಕಾರಿ ಮನೆಯಲ್ಲಿ ವಾಸಿಸುತ್ತಿದ್ದರು ಅವನ ಅತಿ ಪ್ರಾಮಾಣಿಕತೆ ಮತ್ತು
ದೈವ ಭಕ್ತಿ ಉಳಿದವರಿಗೆ ಮಾದರಿಯಾಗಿತ್ತು. ಕೆಳಗೆ ನೀಡಲಾದ ಗದ್ಯ ಭಾಗದಲ್ಲಿ ಬಂದಿರುವ ಸರ್ವನಾಮಗಳನ್ನು ಗುರುತಿಸಿ
8 ರಿಂದ 13 ರವರೆಗಿನ ಪ್ರಶ್ನೆಗಳಲ್ಲಿ ಯಾವುದಾದರೂ 5 ಪ್ರಶ್ನೆಗಳಿಗೆ ಉತ್ತರಿಸಿರಿ. 5*4=20
8. ಬೀಬಜ್ಜಿಯ ಮನೆಯ ಹುಗ್ಗಿಯ ಸವಿಯನ್ನು ಸವಿದ ಬಾಲಕನೊಬ್ಬನು ಆ ದಿನ ತನ್ನ ದಿನಚರಿಯಲ್ಲಿ ಹೇಗೆ
ಬರೆದಿರಬಹುದು ?ಊಹಿಸಿ ದಿನಚರಿ ಬರೆಯಿರಿ.
9. ಕೆಳಗೆ ನೀಡಲಾದ ಸರ್ವಜ್ಞನ ವಚನಗಳ ಆಶಯವನ್ನು ಹೋಲಿಸಿ ನಿಮ್ಮ ಅಭಿಪ್ರಾಯವನ್ನು ಟಿಪ್ಪಣಿ ರೂಪದಲ್ಲಿ
ಕೊಟ್ಟುಂಬ ಕಾಲದಲ್ಲಿ ಕೊಟ್ಟುಣ್ಣಲರಿಯದೆ
ಹುಟ್ಟಿಯ ಮೇಲೆ ಜೇನಿಕ್ಕಿ ಪರರಿಗೆ

Page 2

ಕೊಟ್ಟು ಹೋಹಂತೆ ಸರ್ವಜ್ಞ.
ಕೊಟ್ಟದ್ದು ತನಗೆ ಬಚ್ಚಿಟ್ಟದ್ದು ಪರರಿಗೆ
ಕೊಟ್ಟಿದ್ದು ಕೆಟ್ಟಿತೆನಬೇಡ ಮುಂದಕ್ಕೆ
ಕಟ್ಟಿಹುದು ಬುತ್ತಿ ಸರ್ವಜ್ಞ.
10. ಅರಣ್ಯ ನಾಶದಿಂದ ಕಾಡು ಪ್ರಾಣಿಗಳು ತಮ್ಮ ನೆಲೆಗಳನ್ನು ಕಳೆದುಕೊಂಡು ನಾಡಿನತ್ತ ಮುಖ ಮಾಡಿವೆ. ಕಾಡು
ಪ್ರಾಣಿಗಳ ಉಪಟಳದ ಬಗ್ಗೆ ಜನಜಾಗ್ರತಿ ಮೂಡಿಸಲ ಅಗತ್ಯವಾದ ಕರ ಪತ್ರವನ್ನು ತಯಾರಿಸಿರಿ.
11.ಕುವೆಂಪುರವರ 'ಹೋಗುವೆನು ನಾ' ಕವನದ ಸಾಲುಗಳನ್ನು ಕೆಳಗೆ ನೀಡಲಾಗಿದೆ ಅದರ ಆಸ್ವಾದನ ಟಿಪ್ಪಣಿಯನ್ನು
ರವಿಯ ರಶ್ಮಿಯ ಪ್ರಜ್ಞೆಯಿಲ್ಲದ ವಿಪಿನ ನಿರ್ಜನ ರಂಗಕೆ,
ಮುಗಿಲನಂಡಲೆಯುತ್ತ ನಿಂತಿಹ ಧೀರ ಪರ್ವತ ಶೃಂಗಕೆ,
ವನ ವಿಹಂಗಸ್ವನ ತರಂಗಿತ ಪವನ ಪಾವನ ಸಂಗಕೆ,
ಹೋಗುವೆನು ನಾ ಮಧುರ ಸುಂದರ ಶೈಲವನ ಲಲಿತಾಂಗಕೆ!

12. ಜೊತೆಗೊಳಿಸಿರಿ.
ಅ. ಆ ಇ
1 ತಿಳಿಯೆನೋವಿದೆ, ತಿಳಿಯದಿರುವುದೇ 1. ಶಿವರಾಮ ಕಾರಂತ. 1. ವಚನಗಳು
ಜಾಣ್ಮೆ.
2. ಓದಿ ಓದಿ ನಿದ್ದೆಗಟ
ೆ ್ಟು ತೆಳ್ಳಗಾಗಿದ್ದೀರ 2. ಸರ್ವಜ್ಞ 2. ಬೆಟ್ಟದ ಜೀವ
3. ಕೊಡುವ ತಾನೆ ಮೃಢನು 3. ಕುವೆಂಪು 3. ಬಟ್ಟೆ ಇಲ್ಲದ ಊರಿನಲ್ಲಿ
4. ನಮ್ಮ ಮನೆಯ ಹಸು 4. ಪಕ್ಷಿಕಾಶಿ
ಮೇವಿಗೆಹೋದುದು ಬರಲಿಲ್ಲ. 4. ಮಿರ್ಜಾ ಬಶೀರ್.

13. ನಿತ್ಯವೂ ಬೆಟ್ಟವನ್ನೇ ನೋಡುತ್ತ, ಎಲ್ಲೋ ತಿರುಗಾಡುತ್ತಿರುವ ನಮಗೆ ಇದು ಬರಿಯ ಬೆಟ್ಟ .ಏನೋ ಪೇಟೆಯಿಂದ
ಬರುವ ನಿಮ್ಮಂಥವರು ಅದರ ಚಂದವನ್ನು ಬಣ್ಣಿಸಿದರೇನೆ ಅದು ಚಂದವೆಂದು ತಿಳಿಯಬೇಕು. ' 'ಬೆಟ್ಟದ ನೋಟ 'ಪಾಠದ
ಈ ಮಾತಿನ ಹಿನ್ನೆಲೆಯಲ್ಲಿ ನೀವು ನೋಡಿದ ಪ್ರಕೃತಿ ರಮಣೀಯ ದೃಶ್ಯವನ್ನು ವರ್ಣಿಸಿ ಬರೆಯಿರಿ
14 ರಿಂದ 16 ರವರೆಗಿನ ಪ್ರಶ್ನೆಗಳಲ್ಲಿ ಯಾವುದಾದರೂ 2 ಪ್ರಶ್ನೆಗಳಿಗೆ ಉತ್ತರಿಸಿರಿ. 2*6=12
14. 'ಇಂದು ನಮ್ಮ ಹಳ್ಳಿಗಳನ್ನು ನಗರಕ್ಕೆ ಒಯ್ಯುವ ಅಥವಾ ಹಳ್ಳಿಗಳನ್ನೇ ನಗರಗಳನ್ನಾಗಿಸುವ ಅಡ್ಡಡ್ಡ ಸಿಗಿದು ಸಾಗುವ
ರಾಷ್ಟ್ರೀಯ ಹೆದ್ದಾರಿಯ ಎಡಬಲದ ನೆರಳು ಮರಗಳು ನಾಶವಾಗಿ ಅದರಡಿಯಲ್ಲಿ ಯಾವುದೇ ಅರಳಿಕಟ್ಟೆಗಳು ಉಳಿದಿಲ್ಲ'.
'ಗ್ರಾಮ ಭಾರತ' ಪಾಠ ದಲ್ಲಿ ಬರುವ ಈ ಮಾತಿನ ಆಧಾರದಲ್ಲಿ"ರಸ್ತೆ ಅಗಲೀಕರಣದ ಪರಿಣಾಮಗಳು' ಎಂಬ ವಿಷಯದ
ಕುರಿತು ಪ್ರಬಂಧವನ್ನು ಬರೆಯಿರಿ.
15. ' ನೊಂದವರ ಗೆಳೆಯ' ಪಾಠದಲ್ಲಿ ಈಶ್ವರ ಚಂದ್ರ ವಿದ್ಯಾಸಾಗರರು ಮಾಡುತ್ತಿದ್ದ ಸಮಾಜ ಸೇವೆಯ ಬಗ್ಗೆ ಓದಿ
ತಿಳಿದಿರುವಿರಿ . ಅದರ ಆಧಾರದಲ್ಲಿ 'ವಿದ್ಯಾರ್ಥಿ ಮತ್ತು ಸಮಾಜ ಸೇವೆ' ಎಂಬ ವಿಷಯದ ಕುರಿತು ಲಿಖಿತ ಭಾಷಣವನ್ನು
ತಯಾರಿಸಿರಿ.
16. ವೃದ್ಧರು ನಮಗೆ ದಾರಿದೀಪ ಒಂದು ಮನೆಯ ಏಳಿಗೆಯಲ್ಲಿ ವೃದ್ಧರ ಪಾತ್ರ ಮಹತ್ತರವಾದದ್ದು ಅಂತಹ ವೃದ್ಧರ
ಆರೈಕೆಯು ನಮ್ಮ ಕರ್ತವ್ಯವಾಗಿದೆ ' ವೃದ್ಧರ ಆರೈಕೆಯಲ್ಲಿ ಯುವಜನರ ಪಾತ್ರ ' ಎಂಬ ವಿಷಯದ ಕುರಿತು ಲೇಖನವನ್ನು

Page 3

MODEL QUESTION PAPER
KANNADA-PAPER II
ಮಾದರಿ ಪ್ರಶ್ನೆ ಪತ್ರಿಕೆ ಅಂಕಗಳು:40
ತರಗತಿ:IX ಕನ್ನಡ II ಸಮಯ:1 ಗಂಟೆ 30 ನಿಮಿಷ
ಸೂಚನೆಗಳು:
 ಪ್ರಶ್ನೆಗಳನ್ನು ಓದಿ ಅರ್ಥೈಸಿಕೊಳ್ಳಲು ನಿಮಗೆ 15 ನಿಮಿಷ ಕಾಲಾವಕಾಶ ನೀಡಲಾಗಿದೆ.
 ಎಲ್ಲಾ ಪ್ರಶ್ನೆಗಳನ್ನು ಸಾವಧಾನವಾಗಿ ಓದಿರಿ.
 ಸೂಚನೆಗಳನ್ನು ಓದಿ ಅರ್ಥಮಾಡಿಕೊಂಡು ಕೊಡಲಾದ ಪ್ರಶ್ನೆಗಳಿಗೆ ಉತ್ತರಿಸಿರಿ.
1 ರಿಂದ 3 ರ ವರೆಗಿನ ಪ್ರಶ್ನೆಗಳಲ್ಲಿ ಯಾವುದಾದರೂ 2 ಪ್ರಶ್ನೆಗಳಿಗೆ ಉತ್ತರಿಸಿರಿ. 2*1=2
1.ಕೆಳಗೆ ನೀಡಲಾದ ಕವನದ ಸಾಲುಗಳಲ್ಲಿ ಅಡಿಗೆರೆ ಎಳೆದ ಪದ ಯಾವ ಅರ್ಥವನ್ನು ಸೂಚಿಸುತ್ತದೆ.
ಎತ್ತರದ ಮಲೆಯ ಭುಜ, ಬಿತ್ತರದ ಬಯಲಿನೆದೆ
ಆರೋಗ್ಯ ಭಾಗ್ಯ ಧನಧಾನ್ಯ ಸಂಪತ್ತು.
(ಆಕಾರ ,ವಿಸ್ತಾರ, ವಿನ್ಯಾಸ ,ವಿಕಾಸ)
2.ಹಿರೇಮಗಳೂರು ಕಣ್ಣನ್ ಅವರು ಬರೆದ 'ಒಂದು ಮೂಸುಂಬೆ ಇನ್ನೊಂದು ಗೋಸುಂಬೆ' ಶೀರ್ಷಿಕೆಯ
ವಿಶೇಷತೆಯನ್ನು ಬರೆಯಿರಿ.
(ಹಾಸ್ಯ,ವಿಡಂಬನೆ, ವೈಚಾರಿಕತೆ, ದುಗುಡ)
3. ಗಾರ್ಡನ್ -ಈ ಪದಕ್ಕೆ ಸಂವಾದಿಯಾದ ಕನ್ನಡ ಪದವನ್ನು ಬರೆಯಿರಿ.
4 ರಿಂದ 7 ರವರೆಗಿನ ಪ್ರಶ್ನೆಗಳಲ್ಲಿ ಯಾವುದಾದರೂ 3 ಪ್ರಶ್ನೆಗಳಿಗೆ ಉತ್ತರಿಸಿರಿ. 3*2=6
4.ಕೆಳಗೆ ನೀಡಲಾದ ವಾಕ್ಯದಲ್ಲಿ ಅಡಿಗೆರ ಹಾಕಿದ ಪದವನ್ನು ಉಪಯೋಗಿಸಿಕೊಂಡು ಬೇರೊಂದು ವಾಕ್ಯವನ್ನು ರಚಿಸಿರಿ.
ಸರ್ಕಸ್ ನಲ್ಲಿ ದಾರವನ್ನು ಹಿಡಿದು ಅತ್ತಿಂದಿತ್ತ ಜೋಲಾಡುತ್ತಾ ಎತ್ತರದಿಂದ ಕೆಳಕ್ಕೆ ಧುಮುಕುವುದನ್ನು ಕಂಡಾಗ ಮೈ
ರೋಮಾಂಚನವಾಗುತ್ತದೆ.
5. ಕೆಳಗೆ ನೀಡಿರುವ ಸಂಯುಕ್ತ ವಾಕ್ಯವನ್ನು ಸರಳ ವಾಕ್ಯಗಳಾಗಿ ಪರಿವರ್ತಿಸಿ ಬರೆಯಿರಿ.
ದೂರದಿಂದ ಪ್ರಯಾಸ ಪಟ್ಟು ಬದರಿ ಕ್ಷೇತ್ರಕ್ಕೆ ಬರುವ ಭಕ್ತರು ಚಳಿಯಲ್ಲಿ ಬಿಸಿ ನೀರಿನ ಸ್ನಾನದ ಸುಖ ನೀಡುವ ಪ್ರಕೃತಿಯ
ವಿಸ್ಮಯಕ್ಕೆ ಶರಣಾಗುತ್ತಾರೆ.
6. ಕೆಳಗೆ ನೀಡಲಾದ ವಾಕ್ಯಗಳಿಗೆ ಸೂಕ್ತವಾದ ಲೇಖನ ಚಿಹ್ನೆಗಳನ್ನು ಅಳವಡಿಸಿರಿ.
ಉತ್ತಮ ಜ್ಞಾನವನ್ನು ಸಂಪಾದಿಸಬೇಕಾದರೆ ಬೇರೆ ಬೇರೆ ಜನರ ಸಂಪರ್ಕ ಮಾಡಬೇಕು ಅವರ ಆಹಾರ ವ್ಯವಹಾರ
ಅಭ್ಯಾಸಗಳನ್ನು ತಿಳಿಯಬೇಕು ಅಲ್ಲವೇ ಎಂದು ಅಧ್ಯಾಪಕರು ವಿದ್ಯಾರ್ಥಿಗಳಲ್ಲಿ ಕೇಳಿದರು.
7. 'ಮಂಗಲ ಗೀತ 'ಕವನಕ್ಕೆ ಈ ಶೀರ್ಷಿಕೆಯು ಹೇಗೆ ಒಪ್ಪುತ್ತದೆ ಎಂಬುದನ್ನು ಸಮರ್ಥಿಸಿ ಬರೆಯಿರಿ.
8 ರಿಂದ 13 ರವರೆಗಿನ ಪ್ರಶ್ನೆಗಳಲ್ಲಿ ಯಾವುದಾದರೂ 5 ಪ್ರಶ್ನೆಗಳಿಗೆ ಉತ್ತರಿಸಿರಿ. 5*4=20
8. ಕೆಳಗೆ ಕೊಡಲಾದ 'ಮಂಗಲ ಗೀತ' ಕವನದ ಸಾಲುಗಳ ಸ್ವಾರಸ್ಯವನ್ನು ಬರೆಯಿರಿ.
ಬಾದಾಮಿ ಬನವಾಸಿ ಹಂಪೆ ಹಳೆಬೀಡುಗಳ
ಮೂಕವಾಣಿಗಳ ಸುಸ್ವಾಗತವ ಕೇಳು.
ಆಳಿದ ಸಾಮ್ರಾಜ್ಯಗಳ ಬಾಳದಿಹ ವೈಭವದ
ಕತೆ ಹೇಳಿ ಕಣ್ಣೊರಸಿ ಸವೆದುದಾಯುಷ್ಯ.
9. 'ಪ್ರವಾಸದಿಂದ ದೊರೆಯುವ ಪ್ರಯೋಜನಗಳು' ಎಂಬ ವಿಷಯದ ಕುರಿತು ಪತ್ರಿಕೆಗೆ ಕಳುಹಿಸಲು ಒಂದು ಕಿರು
ಲೇಖನವನ್ನು ಬರೆಯಿರಿ.

Page 4

10. ಕೆಳಗೆ ನೀಡಿರುವ ಗದ್ಯಭಾಗವನ್ನು ಓದಿ ನಾಲ್ಕು ಪ್ರಶ್ನೆಗಳನ್ನು ತಯಾರಿಸಿರಿ.
ಯೋಗ ಮೂಲತಃ ಅತ್ಯಂತ ಪ್ರಾಚೀನ ಕಲೆ. ಇದು ಆರೋಗ್ಯಕರ ದೇಹದೊಳಗೆ ಆರೋಗ್ಯಕರ ಮನಸ್ಸನ್ನು ಬೆಳೆಸುವ
ಗುರಿಯನ್ನು ಹೊಂದಿದೆ. ಯೋಗ ಮಾನವ ದೇಹದ ದೈಹಿಕ, ಆಧ್ಯಾತ್ಮಿಕ ಮತ್ತು ಮಾನಸಿಕ ಸ್ಥಿತಿಯನ್ನು ಹೆಚ್ಚಿಸುತ್ತದೆ.
'ಯೋಗ 'ಎನ್ನುವ ಪದ ಸಂಸ್ಕೃತದ ಮೂಲ ಧಾತುವಾದ "ಯುಜ್" ನಿಂದ ಬಂದಿದ್ದು ಇದು ಕೂಡಿಸು ಕೇಂದ್ರೀಕರಿಸು
ಎನ್ನುವ ಅರ್ಥವನ್ನು ನೀಡುತ್ತದೆ. ಇಂತಹ ಅಮೂಲ್ಯ ಸಂಪತ್ತನ್ನು ಇಡೀ ಜಗತ್ತಿಗೆ ಪರಿಚಯಿಸಿದವರು ಪತಂಜಲಿ
ಮಹರ್ಷಿ. ಯೋಗ ಕಲಿಕೆಯಿಂದ ಮಕ್ಕಳಲ್ಲಿ ವೈಚಾರಿಕತೆ ,ಭಾವನಾತ್ಮಕ ರಚನೆ ಮತ್ತು ಸೃಜನಶೀಲತೆಯನ್ನು
ಬೆಳೆಸಬಹುದಾಗಿದೆ. ಸಂಕುಚಿತವಾದ ಅಹಂಕಾರ ತುಂಬಿದ ವ್ಯಕ್ತಿತ್ವವನ್ನು ವಿಶಾಲಗೊಳಿಸಿ ಉನ್ನತ ಸ್ಥಾನಕ್ಕೆ
ಕರೆದೊಯ್ಯುತ್ತದೆ. ಹಾಗೆಯೇ ದೈಹಿಕವಾಗಿ ಸಕ್ರಿಯವಾಗಿ ಮಾಡುವ ಯೋಗ ಮಾನಸಿಕ ಆರೋಗ್ಯಕ್ಕೆ ಸಂಬಂಧಿಸಿದ
ವಿಷಯಗಳಿಗೆ ಹಾಗೂ ಖಿನ್ನತಯ
ೆ ಲಕ್ಷಣಗಳಿಗೂ ಪರಿಹಾರವನ್ನು ನೀಡುತ್ತದೆ.
11. 'ಒಂದು ಮೂಸುಂಬೆ ಇನ್ನೊಂದು ಗೋಸುಂಬೆ' ಪಾಠದ ಆಧಾರದಲ್ಲಿ ಭಾರತೀಯ ಸಂಸ್ಕೃತಿ ಎಂಬ ವಿಷಯದ
ಕುರಿತು ಶಾಲೆಯ ಸಾಹಿತ್ಯ ಸಭೆಯಲ್ಲಿ ಮಂಡಿಸುವುದಕ್ಕಾಗಿ ಒಂದು ಲಿಖಿತ ಭಾಷಣವನ್ನು ತಯಾರಿಸಿರಿ.
12. 'ಭೂಲೋಕದ ಅಮರಾವತಿ ಶಿಮ್ಲಾ' ಈ ಪಾಠಭಾಗವನ್ನು ಓದಿದಿರಲ್ಲವೇ?ಇದರ ಆಧಾರದಲ್ಲಿ 'ಶಿಮ್ಲಾ ಭೂಮಿಯ
ಮೇಲಿನ ಸ್ವರ್ಗ' ಈ ಮಾತನ್ನು ಸಮರ್ಥಿಸಿ ಲೇಖನವನ್ನು ಬರೆಯಿರಿ.
13.'ಒಂದು ಮೂಸುಂಬೆ ಇನ್ನೊಂದು ಗೋಸುಂಬೆ' ಪಾಠದ ಆಧಾರದಲ್ಲಿ ದುಡಿಮೆಯ ಮಹತ್ವದ ಕುರಿತು ಟಿಪ್ಪಣಿಯನ್ನು
14 ರಿಂದ 16 ರವರೆಗಿನ ಪ್ರಶ್ನೆಗಳಲ್ಲಿ ಯಾವುದಾದರೂ 2 ಪ್ರಶ್ನೆಗಳಿಗೆ ಉತ್ತರಿಸಿರಿ. 2*6=12
14.ನಿಮ್ಮ ಊರಿನಲ್ಲಿ ಅನೇಕ ಪ್ರೇಕ್ಷಣೀಯ ಸ್ಥಳಗಳು ಇರುವುದಲ್ಲವೇ? ಅವುಗಳಲ್ಲಿ ಯಾವುದಾದರು ಒಂದು ಸ್ಥಳದ
ವಿಶೇಷತೆ ,ಪರಿಚಯವನ್ನು ತಿಳಿಸುತ್ತಾ ನಿಮ್ಮ ಗೆಳಯ
ೆ / ಗೆಳತಿಗೆ ಒಂದು ಪತ್ರ ಬರೆಯಿರಿ.
15. 'ಒಂದು ಮೂಸುಂಬೆ ಇನ್ನೊಂದು ಗೋಸುಂಬೆ 'ಪಾಠದ ಆಧಾರದಲ್ಲಿ ಸಂಸ್ಕೃತಿ ಅಂದು-ಇಂದು ಎಂಬ ವಿಷಯದ
ಕುರಿತು ಪ್ರಬಂಧವನ್ನು ಬರೆಯಿರಿ.
16. 'ಮಂಗಳ ಗೀತ 'ಕವನದಲ್ಲಿ ಕವಿ ಕನ್ನಡ ನಾಡಿನ ಹಿರಿಮೆ ವಿಶಿಷ್ಟಗಳನ್ನು ಬಹಳ ಸೊಗಸಾಗಿ ವರ್ಣಿಸಿದ್ದಾರಲ್ಲವೇ?
ಅದೇ ರೀತಿಯ ಇನ್ನೊಂದು ಕವನವನ್ನು ಕೆಳಗೆ ನೀಡಲಾಗಿದೆ ಇದರ ಆಶಯವನ್ನು ನಿಮ್ಮ ಮಾತುಗಳಲ್ಲಿ ಬರೆಯಿರಿ.
ಕನ್ನಡ ನಾಡು
ನೋಡಿದು ನಮ್ಮಯ ಕನ್ನಡ ನಾಡು
ಅಂದದ ಚಂದದ ಗಂಧದ ಗೂಡು
ಒಲವು ಬಲವು ಉಕ್ಕುವ ನಾಡು
ಗೆಲುವು ನಲಿವು ಚಿಮ್ಮುವ ನಾಡು

ಥಳಥಳ ಹೊಳೆಯುವ ಗಣಿಗಳ ನಾಡು
ಜುಳುಜಳು ಹರಿಯುವ ತೊರೆಗಳ ನಾಡು
ಮುಗಿಲನು ಮುಟ್ಟುವ ಗಿರಿಗಳ ನಾಡು
ಹಚ್ಚನೆ ಹಸುರಿನ ಬನಗಳ ಬೀಡು

ತ್ಯಾಗದ ಭೋಗದ ವೀರರ ನಾಡು
ರಸಿಕರ ಕೃಷಿಕರ ಶ್ರಮಿಕರ ನಾಡು
ತೆಂಗಿನ ಕಂಗಿನ ರಂಗಿನ ನಾಡು
ಸುಂದರ ಹವೆಯ ಬಂಧುರ ಬೀಡು
ಹೂವಿನ ಜೇನಿನ ಹೊನ್ನಿನ ನಾಡು

Page 5

ಕವಿಗಳ ಋಷಿಗಳ ಸಂತರ ನಾಡು
ವಿಧವಿಧ ಧರ್ಮದ ದೇವರ ಬೀಡು
ಬೆಚ್ಚನೆ ಬದುಕಿನ ತೌರಿದು ನೋಡು

ಬೇಲೂರು ಬೆಳ್ಗೊಳ ಹಂಪೆಯ ಶಿಲ್ಪದ
ಕಾವೇರಿ ತುಂಗೆಯ ಭದ್ರೆಯ ತಲ್ಪದ
ಶಾಂತಿಯ ಸಮತೆಯ ಮಮತೆಯ ನಾಡು
ದೇವರು ರಚಿಸಿದ ಸುಂದರ ನಾಡು
ಡಾ.ಎಚ್.ಜೆ ಲಕ್ಕಪ್ಪಗೌಡ
(ತೊರೆ-ನದಿ ಗಿರಿ-ಬೆಟ್ಟ ಬಂಧುರ-ಮಿತ್ರ)

Document Details

Board / OrgKerala Board
ExamClass 9
TypeSample Paper
Pages5
Updated24 Sep 2026

More for Kerala Class 9

📄Question Paper 📝Sample Paper