Page 1
MODEL QUESTION PAPER
KANNADA-PAPER I
ಮಾದರಿ ಪ್ರಶ್ನೆ ಪತ್ರಿಕೆ ಅಂಕಗಳು:40
ತರಗತಿ:VIII ಕನ್ನಡ I ಸಮಯ:1 ಗಂಟೆ 30 ನಿಮಿಷ
ಸೂಚನೆಗಳು:
ಪ್ರಶ್ನೆಗಳನ್ನು ಓದಿ ಅರ್ಥೈಸಿಕೊಳ್ಳಲು ನಿಮಗೆ 15 ನಿಮಿಷ ಕಾಲಾವಕಾಶ ನೀಡಲಾಗಿದೆ.
ಎಲ್ಲಾ ಪ್ರಶ್ನೆಗಳನ್ನು ಸಾವಧಾನವಾಗಿ ಓದಿರಿ.
ಸೂಚನೆಗಳನ್ನು ಓದಿ ಅರ್ಥಮಾಡಿಕೊಂಡು ಕೊಡಲಾದ ಪ್ರಶ್ನೆಗಳಿಗೆ ಉತ್ತರಿಸಿರಿ.
1 ರಿಂದ 3 ರ ವರೆಗಿನ ಪ್ರಶ್ನೆಗಳಲ್ಲಿ ಯಾವುದಾದರೂ 2 ಪ್ರಶ್ನೆಗಳಿಗೆ ಉತ್ತರಿಸಿರಿ. 2*1=2
1.ಆವರಣದಿಂದ ಸರಿಯಾದ ಉತ್ತರವನ್ನು ಆರಿಸಿ ಬರೆಯಿರಿ.
ಅಸೀಮ ರೂಪಿ ಅಂಬರದಲ್ಲಿ ಮೂಡಿದುದೇನು?
(ಹೊನ್ನಾರು,ಹಿಂಗಾರು,ಮುಂಗಾರು,ಬಿಸಿಲು)
2.ಪರಿಸರದ ಉಳಿವು ಬಾಳಿನ ಗೆಲುವು ಪಾಠವು ಸಾಹಿತ್ಯದ ಯಾವ ಪ್ರಕಾರಕ್ಕೆ ಸೇರಿದುದಾಗಿದೆ?
(ಕಥೆ,ಕವನ,ಕಥನ ಕವನ,ಗೀತ ನಾಟಕ)
3. ಕೆಳಗಿನ ವಾಕ್ಯದಲ್ಲಿ ಅಡಿಗೆರೆ ಎಳೆದ ಪದದ ತದ್ಭವ ರೂಪ ಬರೆಯಿರಿ.
ಸ್ನೇಹಕ್ಕೆ ಸಮಾನ ಮನೋಧರ್ಮ ಅವಶ್ಯವಾಗಿದೆ .
4 ರಿಂದ 7 ರವರೆಗಿನ ಪ್ರಶ್ನೆಗಳಲ್ಲಿ ಯಾವುದಾದರೂ 3 ಪ್ರಶ್ನೆಗಳಿಗೆ ಉತ್ತರಿಸಿರಿ. 3*2=6
4. ದುಡುಕಿ ಮತಿದಪ್ಪುವುದು,ತಪ್ಪನೊಪ್ಪೆನ್ನುವುದು
ಬದುಕೆಂಬುದಿದು ತಾನೇ?- ಮಂಕುತಿಮ್ಮ
- ಮಂಕುತಿಮ್ಮನ ಕಗ್ಗದ ಈ ಮೇಲಿನ ಸಾಲುಗಳನ್ನು ವಿಶ್ಲೇಷಿಸಿ ಬರೆಯಿರಿ.
5. "ಇಸ್ಲಾಮೀಪುರದಲ್ಲೊಂದು ಯಕ್ಷಗಾನ' ಕಥೆಗೆ ಬೇರೊಂದು ಶೀರ್ಷಿಕೆ ನೀಡಿ ಸಮರ್ಥಿಸಿ ಬರೆಯಿರಿ.
6. ಕೆಳಗೆ ನೀಡಲಾದ ಸಾಲಿನಲ್ಲಿ ಅಡಿಗೆರೆ ಎಳೆದ ಭಾಷಾ ಪ್ರಯೋಗವನ್ನು ಬಳಸಿಕೊಂಡು ಸ್ವಂತ ವಾಕ್ಯ ರಚಿಸಿರಿ.
ಈ ಕಪಿ ನಮಗೇನಾದರೂ ಹೀಗೆ ಚೇಷ್ಟೆ ಮಾಡಿದರೆ ಸರಿಯಾದ ಗತಿ ತೋರಿಸುತ್ತೇವೆ ಎಂದರು.
7. ಮಾದರಿಯಂತೆ ಉತ್ತರಿಸಿರಿ.
ಹೊಟ್ಟೆಯೊಂದರ - ಹೊಟ್ಟೆ + ಒಂದರ
ಡೊಂಬನುಪಾಯ - —---------------
ಕಾಣುತೊಂದೆ - —---------------------
8 ರಿಂದ 13 ರವರೆಗಿನ ಪ್ರಶ್ನೆಗಳಲ್ಲಿ ಯಾವುದಾದರೂ 5 ಪ್ರಶ್ನೆಗಳಿಗೆ ಉತ್ತರಿಸಿರಿ. 5*4=20
8. ಮಳೆ ಬಂದಾಗ ಭೂಮಿಯಲ್ಲಾಗುವ ಬದಲಾವಣೆಯ ಕುರಿತು ‘ಮುಂಗಾರು ಗೀತೆ’ ಕವನದಲ್ಲಿ ಓದಿರುವಿರಿ.
ಈ ಹಿನ್ನೆಲೆಯಲ್ಲಿ ಮಳೆಯ ಜೊತೆಗಿನ ನಿಮ್ಮ ಅನುಭವವನ್ನು ವರ್ಣಿಸಿ ಒಂದು ವರ್ಣನ ಟಿಪ್ಪಣಿಯನ್ನು ಬರೆಯಿರಿ.
9. ನನಗೆ ಈ ಸಾಧುವಾದ ಕೋಣ ದೊರಕಿರುವಾಗ,ನಾನು ನಿಮ್ಮ ತಂಟೆಗೆ ಏಕೆ ಬರಲಿ? -ಇದು ಕಾಡುಕೋಣ
ಪಾಠದಲ್ಲಿ ಬಂದ ಚೇಷ್ಟೆ ಮಾಡುವ ಕಪಿಯ ಮಾತು. ಇದರ ಆಧಾರದಲ್ಲಿ ಕೋಣವನ್ನು ಗೋಳುಹೊಯ್ಯುತ್ತಿದ್ದ
ಕಪಿಯ ತುಂಟಾಟಗಳನ್ನು ನಿಮ್ಮ ಮಾತುಗಳಲ್ಲಿ ವಿವರಿಸಿರಿ.
10.‘ಮುಂಗಾರು ಗೀತೆ’ ಕವನದ ಈ ಕೆಳಗಿನ ಸಾಲುಗಳ ಆಸ್ವಾದನಾ ಟಿಪ್ಪಣಿ ಬರೆಯಿರಿ.
Page 2
ಹೊಸನೇಗಿಲ ಮುನ್ನಡೆಯಲ್ಲೂ
ಋತುಮಾನದ ರಂಗಿದೆ
ನವ ಮಾನವ ಮುನ್ನೋಟದಲ್ಲೂ
ಕಾಲಚಕ್ರ ಉರುಳಿದೆ.
11. ಡಿವಿಜಿ ಅವರ ಮಂಕುತಿಮ್ಮನ ಕಗ್ಗದ ಕೆಲವು ಸಾಲುಗಳನ್ನೂ,ಜ. ಹೊ. ನಾರಾಯಣಸ್ವಾಮಿಯವರ
‘ಮಾನವರಾಗೋಣ’ ಕವನದ ಕೆಲವು ಸಾಲುಗಳನ್ನೂ ಕೆಳಗೆ ನೀಡಲಾಗಿದೆ. ಎರಡೂ ಕವನಗಳ ಆಶಯಗಳನ್ನು
ಪರಸ್ಪರ ಹೋಲಿಸಿ, ಹೋಲಿಕಾ ಟಿಪ್ಪಣಿಯನ್ನು ಬರೆಯಿರಿ.
ಒಂದೆ ಗಗನವ ಕಾಣುತೊಂದೆ ನೆಲವನ್ನು ತುಳಿಯು
ತೊಂದೆ ಧಾನ್ಯವನುಣ್ಣುತೊಂದೆ ನೀರ್ಗುಡಿದು
ಒಂದೇ ಗಾಳಿಯನುಸಿರ್ವ ನರ ಜಾತಿಯೊಳಗೆಂತು
ಬಂದುದೀ ವೈಷಮ್ಯ- ಮಂಕುತಿಮ್ಮ
ಮಾನವರಾಗೋಣ
ಮಾನವರಾಗೋಣ ಬನ್ನಿ ಮಾನವರಾಗೋಣ
ಮಾನವರಾಗೋಣ ನಾವು ಮಾನವರಾಗೋಣ
ಭೇದವನರಿಯದು ನೀಲಿಯ ಗಗನ
ಒಂದೇ ಮಣ್ಣಿಂದೆಲ್ಲರ ಜನನ
ಒಂದೇ ದಿಕ್ಕಿನಲೆಲ್ಲರ ಪಯಣ
ನುಡಿಯಲಿ ಮಿಡಿಯಲಿ ಅಂತ:ಕರಣ
12. ಯಕ್ಷಗಾನ ನಡೆಯಬೇಕಾದರೆ ಅದ್ರಾಮ ಭಾಗವತಿಕೆ ಮಾಡಬೇಕು.ಈಗ ಹೊತ್ತಿ ಉರಿಯುವ ಊರು
ಅದ್ರಾಮನಿಂದ ಮತ್ತೆ ಒಂದಾಗುತ್ತೆ…..
ಉಪಕಾರ ಎಲ್ಲಿ ಬಂತು ಸಾಹೇಬರೇ,ಇದು ಮನುಷ್ಯರಾದ ನಾವು ಮಾಡುವ ಕರ್ತವ್ಯ….
- ಇವು "ಇಸ್ಲಾಮೀಪುರದಲ್ಲೊಂದು ಯಕ್ಷಗಾನ' ಪಾಠದಲ್ಲಿ ಬಂದ ಶಂಕರನಾರಾಯಣನ ಮಾತುಗಳು. ಇದರ
ಆಧಾರದಲ್ಲಿ ಶಂಕರನಾರಾಯಣನ ಪಾತ್ರಚಿತ್ರಣ ಮಾಡಿರಿ.
13.ಪರಸ್ಪರ ಪ್ರೀತಿ,ವಿಶ್ವಾಸವುಳ್ಳ ಸ್ನೇಹಿತರಿಗೆ ಜೀವದ ಗೆಳೆಯರು ಎನ್ನುವರು.ಅಂತಹ ಸ್ನೇಹಿತರ ದೇಹ
ಎರಡಿದ್ದರೂ ಮನಸ್ಸು, ಆತ್ಮ ಒಂದೇ ಆಗಿರುತ್ತದೆ.
- "ಸ್ನೇಹ' ಪಾಠದಲ್ಲಿ ಬರುವ ಮೇಲಿನ ಮಾತುಗಳ ಆಧಾರದಲ್ಲಿ ನಿಮ್ಮ ಆತ್ಮೀಯ ಗೆಳೆಯ ಅಥವಾ ಗೆಳತಿಯರ
ಪರಸ್ಪರ ಪ್ರೀತಿ,ಸ್ನೇಹ,ಸಹಕಾರ ಮೊದಲಾದ ವಿಚಾರಗಳನ್ನು ನಿಮ್ಮ ಅನುಭವಗಳೊಂದಿಗೆ ಟಿಪ್ಪಣಿಯ ರೂಪದಲ್ಲಿ
ಬರೆಯಿರಿ.
14 ರಿಂದ 16 ರವರೆಗಿನ ಪ್ರಶ್ನೆಗಳಲ್ಲಿ ಯಾವುದಾದರೂ 2 ಪ್ರಶ್ನೆಗಳಿಗೆ ಉತ್ತರಿಸಿರಿ. 2*6=12
14.ಕಾಡುಕೋಣ ಪಾಠದಲ್ಲಿ ಕೋಣದ ಸಾತ್ವಿಕತೆ ಹಾಗೂ ಕಪಿಯ ಚೇಷ್ಟೆಯ ಕುರಿತು ಓದಿ ತಿಳಿದಿರುವಿರಲ್ಲವೇ?
ಈ ಕಥೆಯನ್ನು ವಿವರಿಸುತ್ತಾ ನಿಮ್ಮ ಗೆಳೆಯ / ಗೆಳತಿಗೆ ಪತ್ರವೊಂದನ್ನು ಬರೆಯಿರಿ.
Page 3
15. ನಿಜವಾದ ಸ್ನೇಹಿತರು ಪರಸ್ಪರ ಏನನ್ನೂ ಬಯಸುವುದಿಲ್ಲ.ದುಃಖದ ಪ್ರಸಂಗ ಬಂದಾಗ,ಆರ್ಥಿಕ ಸಂಕಷ್ಟಗಳು
ಒದಗಿದಾಗ ಸಹಾಯ ಮಾಡುವವರೇ ನಿಜವಾದ ಸ್ನೇಹಿತರು.
- "ಸ್ನೇಹ 'ಪಾಠದಲ್ಲಿ ಬಂದ ಮೇಲಿನ ಮಾತುಗಳ ಆಧಾರದಲ್ಲಿ ‘ನಿಸ್ವಾರ್ಥ ಸ್ನೇಹ ಸಂಬಂಧ’ ಎಂಬ ವಿಷಯದ
ಕುರಿತು ಲಿಖಿತ ಭಾಷಣವೊಂದನ್ನು ತಯಾರಿಸಿರಿ.
16. ಕೋಮು ಗಲಭೆ , ಜಾತಿ ವೈಷಮ್ಯ ಮೊದಲಾದವುಗಳು ಸಮಾಜದ ಸ್ವಾಸ್ಥವನ್ನು ಕೆಡಿಸುತ್ತವೆ ಎಂಬುದನ್ನು
"ಇಸ್ಲಾಮೀಪುರದಲ್ಲೊಂದು ಯಕ್ಷಗಾನ' ಪಾಠದಲ್ಲಿ ಓದಿದ್ದೀರಿ. ಈ ಹಿನ್ನೆಲೆಯಲ್ಲಿ ‘ಶಾಂತಿಯುತ ಸಮಾಜಕ್ಕೆ
ಸಾಮರಸ್ಯದ ಜೀವನ’ ಎಂಬ ವಿಷಯದ ಕುರಿತು ಪ್ರಬಂಧವೊಂದನ್ನು ಬರೆಯಿರಿ.
Page 4
MODEL QUESTION PAPER
KANNADA-PAPER II
ಮಾದರಿ ಪ್ರಶ್ನೆ ಪತ್ರಿಕೆ ಅಂಕಗಳು:40
ತರಗತಿ:VIII ಕನ್ನಡ II ಸಮಯ:1 ಗಂಟೆ 30 ನಿಮಿಷ
ಸೂಚನೆಗಳು:
ಪ್ರಶ್ನೆಗಳನ್ನು ಓದಿ ಅರ್ಥೈಸಿಕೊಳ್ಳಲು ನಿಮಗೆ 15 ನಿಮಿಷ ಕಾಲಾವಕಾಶ ನೀಡಲಾಗಿದೆ.
ಎಲ್ಲಾ ಪ್ರಶ್ನೆಗಳನ್ನು ಸಾವಧಾನವಾಗಿ ಓದಿರಿ.
ಸೂಚನೆಗಳನ್ನು ಓದಿ ಅರ್ಥಮಾಡಿಕೊಂಡು ಕೊಡಲಾದ ಪ್ರಶ್ನೆಗಳಿಗೆ ಉತ್ತರಿಸಿರಿ.
1 ರಿಂದ 3 ರ ವರೆಗಿನ ಪ್ರಶ್ನೆಗಳಲ್ಲಿ ಯಾವುದಾದರೂ 2 ಪ್ರಶ್ನೆಗಳಿಗೆ ಉತ್ತರಿಸಿರಿ. 2*1=2
1."ಕುಡಿಯಬೇಡ'ಕವನದ ಈ ಕೆಳಗಿನ ಸಾಲುಗಳು ಯಾವ ಆಶಯವನ್ನು ವ್ಯ ಕ್ತಪಡಿಸುತ್ತವೆ?
ಮದ್ಯ ರಹಿತ ದುಡಿತದಿಂದ
ಹಸನು ಬಾಳ ಸಹಜಗುಟ್ಟ
(ಸುಖ ಜೀವನ,ದುಃಖ ಜೀವನ,ಕಷ್ಟ ದ ಜೀವನ,ದುರಂತ ಜೀವನ)
2’ನಾ ಕಂಡ ಆಸ್ಟ್ರೇಲಿಯಾ’ ಪಾಠ ಭಾಗವು ಯಾವ ಸಾಹಿತ್ಯ ಪ್ರಕಾರಕ್ಕೆ ಸೇರಿದೆ ?
(ಲಲಿತ ಪ್ರಬಂಧ,ಕಥೆ,ಪ್ರವಾಸ ಕಥನ,ಕವನ )
3. 'ನೆಗಡಿ' ಪಾಠ ಭಾಗಕ್ಕೆ ಬೇರೊಂದು ಶೀರ್ಷಿಕೆ ನೀಡಿರಿ.
4 ರಿಂದ 7 ರವರೆಗಿನ ಪ್ರಶ್ನೆಗಳಲ್ಲಿ ಯಾವುದಾದರೂ 3 ಪ್ರಶ್ನೆಗಳಿಗೆ ಉತ್ತರಿಸಿರಿ. 3*2=6
4. ಅಡಿಗೆರೆ ಎಳೆದ ಆಂಗ್ಲ ಪದಕ್ಕೆ ಸಂವಾದಿಯಾದ ಕನ್ನ ಡ ಪದವನ್ನು ಬಳಸಿ ಬೇರೊಂದು ವಾಕ್ಯ ಬರೆಯಿರಿ.
ತನ್ನ ಕುಟುಂಬದ ನೋವು ನಲಿವುಗಳನ್ನು ಬದಿಗಿರಿಸಿ ರೋಗಿಯ ಪ್ರಾಣ ಉಳಿಸಲು ಡಾಕ್ಟ ರ್ ಗಳು ಹರಸಾಹಸ
ಪಡುತ್ತಾರೆ.
5.ಕೆಳಗೆ ಕೊಡಲಾದ ವಾಕ್ಯ ವನ್ನು ಶಿಷ್ಟ ರೂಪದಲ್ಲಿ ಬರೆಯಿರಿ.
ಬ್ಯಾಸಿಗೆ ರಜೇಲಿ ಪ್ಯಾಟೆಯಿಂದ ಅಳ್ಳೀಲಿದ್ದ ಅಜ್ಜ ನ ಮನಿಗೆ ಬಂದ ಮೊಮ್ಮ ಗಅಳ್ಳಿ,ತೋಟಾ,ಹೊಲನ್ನೆಲ್ಲಾ ಸುತ್ಕೊಂಡು
ಬಂದ.
6 ಕೆಳಗೆ ಕೊಡಲಾದ ಸಂಯುಕ್ತ ವಾಕ್ಯ ವನ್ನು ಸರಳ ವಾಕ್ಯ ಗಳಾಗಿ ಪರಿವರ್ತಿಸಿ ಬರೆಯಿರಿ.
ಜಮೀನಿನಲ್ಲಿ ಕತ್ತೆಯೊಂದು ಕರ್ಕಶವಾಗಿ ಅರಚುತ್ತಿರುವುದನ್ನು ಕೇಳಿದ ಯಜಮಾನನು ತಟ್ಟ ನೆ ತನ್ನ ನಿದ್ದೆಯಿಂದ
ಎಚ್ಚೆ ತ್ತನು.
7. ‘ಕುಡಿಯಬೇಡ’ ಕವನದ ಈ ಕೆಳಗಿನ ಸಾಲುಗಳ ಸ್ವಾರಸ್ಯ ಬರೆಯಿರಿ .
ಮದ್ಯ ಕಿಂದೆ ಮುಚ್ಚು ಬಾಯ
ಸುಖದ ಬಾಳ್ವೆಗಿದುವೆ ನ್ಯಾಯ
Page 5
8 ರಿಂದ 13 ರವರೆಗಿನ ಪ್ರಶ್ನೆಗಳಲ್ಲಿ ಯಾವುದಾದರೂ 5 ಪ್ರಶ್ನೆಗಳಿಗೆ ಉತ್ತರಿಸಿರಿ. 5*4=20
8.ವೈದ್ಯ ವಿದ್ಯೆ ಇಷ್ಟು ಮುಂದುವರಿದರೂ ನೆಗಡಿಗೆ ಇನ್ನೂ ಮದ್ದು ಸಿದ್ಧ ವಾಗಿಲ್ಲ -ನೆಗಡಿ ಪಾಠ ಭಾಗದಲ್ಲಿ ಲೇಖಕರು
ಹೇಳಿದ ಈ ಮಾತನ್ನು ವಿಶ್ಲೇಷಿಸಿ ನೆಗಡಿಯಿಂದ ಲೇಖಕರು ಅನುಭವಿಸಿದ ಸಮಸ್ಯೆ ಗಳನ್ನು ಪಾಠದ ಆಧಾರದಲ್ಲಿ
ಬರೆಯಿರಿ.
9.'ಕುಡಿಯಬೇಡ' ಕವನದಲ್ಲಿ ಮದ್ಯ ಪಾನದ ದುಷ್ಪ ರಿಣಾಮಗಳ ಕುರಿತು ಓದಿರುವಿರಲ್ಲ ವೇ?ಅದೇ ಆಶಯವಿರುವ
‘ಸರ್ವಜ್ಞ ನ ತ್ರಿಪದಿ’ಗಳನ್ನು ಕೆಳಗೆ ನೀಡಲಾಗಿದೆ.ಇದರ ಆಶಯವನ್ನು ನಿಮ್ಮ ಅಭಿಪ್ರಾಯಗಳೊಂದಿಗೆ ಬರೆಯಿರಿ.
ಮದ್ಯ ಪಾನವ ಮಾಡಿ I
ಇದ್ದು ದೆಲ್ಲ ವ ನೀಗಿ I
ಬಿದ್ದು ಬರುವವನ ಸದ್ದ ಡಗಿ ಸಂತಾನ |
ವೆದ್ದು ಹೋಗುವುದು ಸರ್ವಜ್ಞ II
ಸುರೆಯ ಸೇವಿಸುವವನ | ಸುರಿಗೆಯನು ಪಿಡಿದವನ |
ದೊರೆಯೊಲುಮೆಗಾಗಿ ಹೆಣಗುವನ ಕಾಯುವದು |
ಸೊರಗಿ ಸಾಯುವದು ಸರ್ವಜ್ಞ ||
( ಹೆಣಗು-ಕಷ್ಟ ಪಡು ಸೊರಗು-ಕೊರಗು ಸುರಿಗೆ-ಸಣ್ಣ ಕತ್ತಿ)
10.ಮಾದಕ ವಸ್ತು ವಿನಿಂದ ದೂರವಿರುವುದೇ ಅತ್ಯಂತ ಸುರಕ್ಷಿತವಾದದ್ದು . ಜೇಡನ ಬಲೆ ಅಂದಕ್ಕೆ ಆಕರ್ಷಿತಗೊಂಡು
ಸಾಯುವ ಹುಳು ನಮಗೆ ಪಾಠವಾಗಬೇಕು. ಮದ್ಯ ಪಾನವಾಗಲೀ ಮಾದಕ ವಸ್ತು ವಾಗಲೀ ನೀಡುವ ಪ್ರಾರಂಭಿಕ
ಸುಖದ ಆಕರ್ಷಣೆಗೆ ಒಳಗಾದರೆ , ನಮ್ಮ ಸ್ಥಿತಿ ದುರಂತವಾಗುತ್ತದೆ-'ಭ್ರಮಾಧೀನ 'ಪಾಠ ಭಾಗದ ಈ ಸಾಲುಗಳ
ಆಧಾರದಲ್ಲಿ ಜನಜಾಗೃತಿ ಮೂಡಿಸಲು ಕರಪತ್ರವೊಂದನ್ನು ತಯಾರಿಸಿ.
11. ಡಾ.ಕೆ.ಕಮಲಾಕ್ಷರು ಬರೆದ ‘ ನಾ ಕಂಡ ಆಸ್ಟ್ರೇಲಿಯಾ’ ಪ್ರವಾಸ ಕಥನದಲ್ಲಿ ಶುಚಿತ್ವ ಕ್ಕೆ ಆಸ್ಟ್ರೇಲಿಯನ್ನ ರು ನೀಡುವ
ಪ್ರಾಶಸ್ತ್ಯವನ್ನು ತಿಳಿದುಕೊಂಡಿರುವೆವು. ಇದರ ಆಧಾರದಲ್ಲಿ ಆರೋಗ್ಯ ಮತ್ತು ಶುಚಿತ್ವ ದ ಕುರಿತು ಕಿರು ಲೇಖನ
ಬರೆಯಿರಿ.
12 .ಕೆಳಗೆ ನೀಡಲಾದ ಗದ್ಯ ಭಾಗವನ್ನು ಸಂಕ್ಷೇಪಿಸಿ ಬರೆಯಿರಿ.
ಹವ್ಯಾಸಗಳು ವ್ಯ ಕ್ತಿಯ ಜೀವನವನ್ನು ಸಂತೋಷಮಯ ಮತ್ತು ಅರ್ಥಪೂರ್ಣವಾಗಿಸಲು ಸಹಾಯ ಮಾಡುತ್ತವೆ
.ಪ್ರತಿಯೊಬ್ಬ ರೂ ತಮ್ಮ ಆಸಕ್ತಿಗಳಿಗೆ ಅನುಗುಣವಾಗಿ ಹವ್ಯಾಸಗಳನ್ನು ಬೆಳೆಸಿಕೊಳ್ಳ ಬೇಕು ಮತ್ತು ಅವುಗಳನ್ನು ಜೀವನದ
ಭಾಗವಾಗಿ ಮಾಡಿಕೊಳ್ಳ ಬೇಕು. ಹವ್ಯಾಸಗಳು ವ್ಯ ಕ್ತಿಯ ಜೀವನದಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ .ಬಿಡುವಿನ
ವೇಳೆಯನ್ನು ಆನಂದದಾಯಕವಾಗಿ ಕಳೆಯಲು ಹವ್ಯಾಸಗಳು ಸಹಾಯ ಮಾಡುವುದಲ್ಲ ದೆ ಹೊಸ ವಿಷಯಗಳನ್ನು
ಕಲಿಯಲು ಮತ್ತು ವ್ಯ ಕ್ತಿಯ ವ್ಯ ಕ್ತಿತ್ವ ವನ್ನು ಅಭಿವೃದ್ಧಿಪಡಿಸಲು ಸಹಾಯ ಮಾಡುತ್ತವೆ .ದೈಹಿಕ ಹವ್ಯಾಸಗಳು, ಮಾನಸಿಕ
Page 6
ಹವ್ಯಾಸಗಳು ,ಸೃಜನಶೀಲ ಹವ್ಯಾಸಗಳು, ಸಂಗೀತದ ಹವ್ಯಾಸಗಳು ಹೀಗೆ ಹವ್ಯಾಸಗಳಲ್ಲಿ ವಿವಿಧ ಪ್ರಕಾರಗಳಿವೆ .ಹವ್ಯಾಸ
ಎನ್ನು ವುದು ಜೀವನೋಪಾಯಕ್ಕಾಗಿ ಅಲ್ಲ ; ಅದು ಆತ್ಮ ಸಂತೋಷಕ್ಕಾಗಿ ಮಾಡುವ ಕೆಲಸ -ಇದು ಬೀಚಿಯವರು
ಹವ್ಯಾಸಕ್ಕೆ ನೀಡಿದ್ದ ವ್ಯಾಖ್ಯಾನ. ಬದುಕನ್ನು ಆಸಕ್ತಿದಾಯಕವನ್ನಾಗಿ ಮಾಡಲು ಸದಾ ಕ್ರಿಯಾಶೀಲರಾಗಿರಲು ಹವ್ಯಾಸ
ಪೂರಕ .ನಮ್ಮ ದಿನನಿತ್ಯ ದ ಚಟುವಟಿಕೆ ,ಕೆಲಸ ಕಾರ್ಯಗಳು, ಕ್ರೀಡೆ ,ಆಹಾರ -ವಿಹಾರ ಇವೆಲ್ಲ ದರ ಜೊತೆಗೆ ಉತ್ತಮ
ಹವ್ಯಾಸಗಳು ಜೊತೆಗೂಡಿದರೆ ನಾವು ನಮ್ಮ ಜೀವನವನ್ನು ಸಂತೋಷದಿಂದ ಸುಂದರವಾಗಿ ಕಳೆಯಲು ಸಾಧ್ಯ . ಉತ್ತಮ
ಹವ್ಯಾಸಗಳು ನಮ್ಮ ಜೀವನಕ್ಕೆ ಉತ್ತಮ ಅಡಿಪಾಯವನ್ನು ಹಾಕಿಕೊಡುತ್ತವೆ.ಒಬ್ಬ ವ್ಯ ಕ್ತಿಯ ಸರ್ವತೋಮುಖ ಅಭಿವೃದ್ಧಿಗೆ
ಉತ್ತಮ ಹವ್ಯಾಸಗಳು ಪೂರಕವಾಗಿದೆ.
13.ಆಯುರ್ವೇದ ಔಷಧೋತ್ಪ ನ್ನ ಗಳನ್ನು ನಿಮ್ಮ ಊರಿನಲ್ಲಿ ಮಹಿಳಾ ಸಂಘದವರು ಮಾರಾಟ ಮಾಡಲಿದ್ದಾರೆ ಎಂದು
ಭಾವಿಸಿ ಕೊಳ್ಳಿ.ಇದರ ಪ್ರಚಾರಕ್ಕಾಗಿ ಒಂದು ಜಾಹೀರಾತು ತಯಾರಿಸಿರಿ.
14 ರಿಂದ 16 ರವರೆಗಿನ ಪ್ರಶ್ನೆಗಳಲ್ಲಿ ಯಾವುದಾದರೂ 2 ಪ್ರಶ್ನೆಗಳಿಗೆ ಉತ್ತರಿಸಿರಿ. 2*6=12
14. ‘ಆರೋಗ್ಯ ಸಂಪತ್ತು ‘ ಘಟಕದಲ್ಲಿ ಆಧುನಿಕ ಆಹಾರ ಸೇವನೆಯು ಆರೋಗ್ಯ ದ ಮೇಲೆ ಬೀರುವ ಪರಿಣಾಮಗಳ
ಕುರಿತು ಓದಿ ತಿಳಿದಿರುವಿರಿ. ಇದರ ಆಧಾರದಲ್ಲಿ ‘ಆಧುನಿಕ ಆಹಾರ ಪದ್ಧ ತಿ ಮತ್ತು ಆರೋಗ್ಯ ಸಮಸ್ಯೆ ಗಳು’ ಎಂಬ
ವಿಷಯದ ಕುರಿತು ಲಿಖಿತ ಭಾಷಣವನ್ನು ತಯಾರಿಸಿರಿ.
15.'ಭ್ರಮಾಧೀನ' ಕಥೆಯಲ್ಲಿ ಮಾದಕ ವಸ್ತು ಗಳ ಬಳಕೆಯಿಂದ ಯೋಗೀಶನು ಬುದ್ಧಿ ಭ್ರಮಣೆಗೆ ಒಳಗಾದುದನ್ನು ಓದಿ
ತಿಳಿದಿರುವಿರಿ.ಇದರ ಆಧಾರದಲ್ಲಿ
ಮಾದಕ ವ್ಯ ಸನ,ಪರಿಣಾಮ ಮತ್ತು ತಡೆಗಟ್ಟು ವಿಕೆಯ ಕುರಿತು ಪ್ರಬಂಧವೊಂದನ್ನು ಬರೆಯಿರಿ
16 ‘ನಾ ಕಂಡ ಆಸ್ಟ್ರೇಲಿಯಾ ‘ ಪಾಠದಲ್ಲಿ ಲೇಖಕರ ಪ್ರವಾಸದ ಅನುಭವಗಳನ್ನು ಓದಿ ತಿಳಿದಿರುವಿರಿ.ಈ ಹಿನ್ನೆಲೆಯಲ್ಲಿ
ನೀವು ಕೈಗೊಂಡ ಯಾವುದಾದರೂ ಒಂದು ಪ್ರವಾಸದ ಅನುಭವಗಳನ್ನು ವಿವರಿಸುತ್ತಾ ನಿಮ್ಮ ಗೆಳೆಯ/ಗೆಳತಿಗೆ
ಪತ್ರವೊಂದನ್ನು ಬರೆಯಿರಿ.
***