aglasem.com
Home Schools Admission Career Mock Test PDF Docs Playground
ClassChoose class
StateSelect state

Kerala Class 6 First Term Model Question Paper 2025 Kannada

Download Kerala Class 6 First Term Model Question Paper 2025 Kannada pdf. Here at aglasem.com get latest Kerala Board Class 6 Sample Papers. Kerala Class 6 Onam Exam Kannada Model Paper 2025 is below. More Detail
Kerala Class 6 First Term Model Question Paper 2025 Kannada - Page 1 of 8

Finished viewing? Save it for later —

Download Kerala Class 6 First Term Model Question Paper 2025 Kannada (PDF · 8 pages)
Downloaded 57 times

About Kerala Class 6 First Term Model Question Paper 2025 Kannada

Kerala Class 6 First Term Model Question Paper 2025 Kannada is available here for free download. Published by Kerala Board for Class 6, this sample paper can be viewed online or downloaded as a PDF (8 pages). Candidates preparing for Class 6 can use Kerala Class 6 First Term Model Question Paper 2025 Kannada to understand the exam pattern, the type of questions asked, and the overall difficulty level.

Frequently Asked Questions

How can I download Kerala Class 6 First Term Model Question Paper 2025 Kannada?

Open this page and click the Download button to save Kerala Class 6 First Term Model Question Paper 2025 Kannada as a PDF. It is completely free on AglaSem Docs.

Is Kerala Class 6 First Term Model Question Paper 2025 Kannada free to download?

Yes. Kerala Class 6 First Term Model Question Paper 2025 Kannada can be viewed online and downloaded as a PDF free of cost on AglaSem Docs.

How many pages does Kerala Class 6 First Term Model Question Paper 2025 Kannada have?

Kerala Class 6 First Term Model Question Paper 2025 Kannada contains 8 pages, which you can read online or download together as a single PDF.

Where can I find more Class 6 study material?

You can find more Class 6 question papers, sample papers, syllabus, and answer keys on AglaSem Docs.

Kerala Class 6 First Term Model Question Paper 2025 Kannada – Text

Read the full text of this sample paper below — useful to quickly search, copy and reference the content online without downloading the PDF.

📄 View text version (8 pages)

Page 1

SUMMATIVE ASSESSMENT – TERM I
ಕಾಲುವಾರ್ಷಿಕ ಸಂಕಲನಾತ್ಮಕ ಮೌಲ್ಯಮಾಪನ
ಮಾದರಿ ಪ್ರಶ್ನೆ ಪತ್ರಿಕೆ
ಕನ್ನಡ ಮುಂದುವರಿದ ಪಠ್ಯ (KANNADA AT)
ತರಗತಿ: 6 ಸಮಯ: 2 ಗಂಟೆಗಳು

ಸೂಚನೆಗಳು
1. ಮೌಲ್ಯ ಮಾಪನ ಚಟುವಟಿಕೆಗಳು ಪ್ರಾರಂಭವಾಗುವ ಮೊದಲ ಹದಿನೈದು ನಿಮಿಷಗಳು ಕೂಲ್ ಆಪ್ ಟೈಮ್ ಆಗಿದೆ.
ಪ್ರ ಶ್ನೆ ಗಳನ್ನು ಓದಿ ಅರ್ಥೈಸಲು ಮತ್ತು ಉತ್ತರಗಳನ್ನು ಕಂಡುಕೊಳ್ಳಲು ಈ ಸಮಯವನ್ನು ಉಪಯೋಗಿಸಬಹುದು.
2. ಒಟ್ಟು ಆರು ಚಟುವಟಿಕೆಗಳಿವೆ. ಅವುಗಳಲ್ಲಿ ಎರಡು ಚಟುವಟಿಕೆಗಳಿಗೆ ಆಯ್ಕೆಗಳು ಇರುವುದು. ಅವುಗಳಲ್ಲಿ A
ಅಥವಾ B ಯಾವುದಾದರೂ ಒಂದು ಚಟುವಟಿಕೆಗೆ ಉತ್ತರಿಸಿದರೆ ಸಾಕು.
3. ಉತ್ತರಿಸಲು ಆಯ್ಕೆ ಮಾಡಿದ ಚಟುವಟಿಕೆಗಳ ಎಲ್ಲಾ ಉಪಪ್ರ ಶ್ನೆ ಗಳಿಗೂ ಉತ್ತರ ಬರೆಯಬೇಕು.

ಚಟುವಟಿಕೆ - 1 ಓದುವ ಬರೆಯುವ
ಕೆಳಗಿನ ಗದ್ಯವನ್ನು ಓದಿ ನೀಡಿರುವ ಪ್ರಶ್ನೆಗಳಿಗೆ ಉತ್ತರಿಸಿರಿ.

ಮಳೆಗಾಲದ ಅನುಭವ
ಈ ಸಲದ ಮಳೆಗಾಲ ನನಗೆ ಬಾಲ್ಯ ದ ದಿನಗಳನ್ನು ನೆನಪಿಸಿತು. ನಾನು ಶಾಲೆಗೆ ಹೋಗುವಾಗ ಇದೇ ರೀತಿ ಮಳೆ
ಸುರಿಯುತ್ತಿತ್ತು. ಅದೂ ಒಂದೆರಡು ದಿನಗಳಲ್ಲ, ಮಳೆಗಾಲದ ನಾಲ್ಕು ತಿಂಗಳು ಹೀಗೆ. ಜೇಷ್ಠ ಮಾಸದಲ್ಲಿ ಆರಂಭವಾಗುವ
ಮಳೆಗಾಲ, ಅನಂತರ ಚತುರ್ದಶಿಗೆ ಮುಗಿಯುವುದು ಎಂದು ನಮ್ಮ ಅಜ್ಜಿ ಹೇಳುತ್ತಿದ್ದರು. ಆರಂಭದ ಮಳೆ ಗುಡುಗು
ಸಿಡಿಲುಗಳಿಂದ ಸುರಿಯುವ ಅಡ್ಡ ಮಳೆಯಾದರೆ, ಆಷಾಢದ ಮಳೆ ಎಡಬಿಡದೆ ಸುರಿಯುವ ಧಾರಾಕಾರ ಮಳೆ. ಒಂದು
ನಿಮಿಷವೂ ಬಿಡದೆ ಸುರಿಯುವ ಮಳೆಗೆ, ಹದಿನೈದು ದಿನಗಳಿಗೊಮ್ಮೆ ಸೂರ್ಯನ ದರ್ಶನವಾಗುವುದು ಅಸಾಧ್ಯ ವಾಗಿರುತ್ತಿತ್ತು.
ಶ್ರಾವಣದಲ್ಲಿ ಚಿರಿಪಿರಿ ಮಳೆ, ಆ ಮಳೆಗೇ ನದಿ ಹೊಳೆಗಳಲ್ಲಿ ನೀರು ತುಂಬುವುದು. ಭಾದ್ರ ಪದದಲ್ಲಿ ಬಿಟ್ಟು ಬಿಟ್ಟು ಮಳೆ ಬರುತ್ತಿತ್ತು.
ಮೂರು ನಾಲ್ಕು ದಶಕಗಳ ಹಿಂದೆ, ಮಳೆಗಾಲ ಬರುವ ಮೊದಲೇ ಕರಾವಳಿ ಮತ್ತು ಮಲೆನಾಡಿನ ಜನ ಮಾನಸಿಕವಾಗಿ
ಸಿದ್ಧರಾಗುತ್ತಿದ್ದರು. ಬೇಸಿಗೆಯಲ್ಲಿ ಅದಕ್ಕೆ ಬೇಕಾದ ಸಿದ್ಧತೆ ನಡೆದಿರುತ್ತಿತ್ತು. ಆಹಾರ ಸಾಮಗ್ರಿಗಳ ಸಂಗ್ರ ಹ, ಉಪ್ಪಿನಕಾಯಿ, ಹಪ್ಪಳ
ಸಂಡಿಗೆಗಳ ತಯಾರಿ, ಮಾವಿನಕಾಯಿ, ಕಣಿಲೆ, ಹಲಸಿನತೊಳೆಗಳನ್ನು ಉಪ್ಪಿಗೆ ಹಾಕಿ ಮಳೆಗಾಲದ ಉಪಯೋಗಕ್ಕೆ
ಸಂಗ್ರ ಹವಾಗುತ್ತವೆ. ಮಳೆಗಾಲದಲ್ಲಿ ಘಟ್ಟ ಪ್ರ ದೇಶಗಳಲ್ಲಿ ಬೆಳೆಯುವ ತರಕಾರಿಗಳು ಕರಾವಳಿಯ ನಮ್ಮೂರಿಗೆ ಬರುತ್ತಿರಲಿಲ್ಲ.
ನಮ್ಮ ಸುತ್ತ ಮುತ್ತ ಯಥೇಚ್ಛವಾಗಿ ಬೆಳೆಯುವಂತಹ ಚಗಟೆ ಸೊಪ್ಪು, ಕೆಸುವಿನೆಲೆ (ತೇವು), ಉಪ್ಪಿಗೆ ಹಾಕಿಟ್ಟ ಸಾಮಾಗ್ರಿಗಳ‌ನ್ನು
ಉಪಯೋಗಿಸಿ ಖಾದ್ಯ ಗಳನ್ನು ತಯಾರಿಸುವುದರಲ್ಲಿ ನಮ್ಮ ಹಿರಿಯರು ನಿಸ್ಸೀಮರಾಗಿದ್ದರು. ಮಳೆಗಾಲದ ಈ ಎಲ್ಲಾ ಖಾದ್ಯ ಗಳ
ನೆನಪಾದರೆ ಈಗಲೂ ಬಾಯಲ್ಲಿ ನೀರೂರುತ್ತದೆ.
- ಅನಿತಾ ಪೈ
( ಪದಗಳ ಅರ್ಥ : ಯಥೇಚ್ಛ - ಬೇಕಾದಷ್ಟು, ನಿಸ್ಸೀಮ - ಸಮರ್ಥ ವ್ಯಕ್ತಿ )

K 602 Page 1 of 4

Page 2

1. ಅತಿ ಹೆಚ್ಚು ಮಳೆ ಸುರಿಯುವುದು ಯಾವ ಮಾಸದಲ್ಲಿ ಎಂದು ಲೇಖಕಿ ಹೇಳಿದ್ದಾರೆ?
ಅ ) ಜೇಷ್ಠ ಮಾಸ. ಆ ) ಶ್ರಾವಣ ಮಾಸ
ಇ ) ಆಷಾಢ ಮಾಸ ಈ ) ಭಾದ್ರಪದ ಮಾಸ
2. 'ಮಳೆಗಾಲ' - ಎಂಬ ಪದವನ್ನು ವಿಂಗಡಿಸಿ ಬರೆದಾಗ
ಅ ) ಮಳೆ+ಗಾಲ. ಆ ) ಮಳೆಯ+ ಕಾಲ
ಇ ) ಮಳೆ+ಕಾಲ ಈ ) ಮಳೆಗೆ +ಕಾಲ
3. ಮೇಲಿನ ಗದ್ಯ ಭಾಗದಲ್ಲಿ ಬಂದಿರುವ 'ದ್ವಿರುಕ್ತಿ' ಪದವನ್ನು ಹುಡುಕಿ ಬರೆಯಿರಿ.
4. ಹಿಂದಿನ ಕಾಲದಲ್ಲಿ ಮಳೆಗಾಲದ ತಯಾರಿ ಯಾವ ರೀತಿ ನಡೆಯುತ್ತಿತ್ತು?
5. ವಿದ್ಯಾರ್ಥಿಗಳಾದ ನೀವು ಮಳೆಗಾಲ ಬರುವ ಸಂದರ್ಭದಲ್ಲಿ ಯಾವ ರೀತಿಯ ಸಿದ್ಧತೆ ನಡೆಸುವಿರಿ ಎಂದು ಬರೆಯಿರಿ?

ಚಟುವಟಿಕೆ - 2 ಭಿತ್ತಿಪತ್ರ ತಯಾರಿಸುವ
1. ಮಳೆಗಾಲದಲ್ಲಿ ಮಳೆಯ ತೀವ್ರ ತೆ ಹೆಚ್ಚಾದಂತೆ ಅದರಿಂದ ಉಂಟಾಗುವ ಅನಾಹುತಗಳೂ ಹೆಚ್ಚಾಗುವುದು. ಭೂ ಕುಸಿತ,
ಮರಗಳು ಬೀಳುವುದು, ವಿದ್ಯುತ್ ಉಪಕರಣಗಳಿಂದ ತೊಂದರೆ, ತಗ್ಗು ಪ್ರ ದೇಶದಲ್ಲಿ ನೀರು ತುಂಬುವುದು ಹೀಗೆ
ಅನೇಕ ಅನಾಹುತಗಳನ್ನು 'ಗಗನದಿ ಸಾಗಿವೆ' ಪಾಠ ಭಾಗದಲ್ಲಿ ನೀವು ತಿಳಿದಿದ್ದೀರಿ. ಮಳೆಗಾಲದಲ್ಲಿ ವಹಿಸಬೇಕಾದ
ಎಚ್ಚರಿಕೆಗಳ ಕುರಿತು ಜನರಲ್ಲಿ ಜಾಗೃ ತಿ ಮೂಡಿಸಲು 'ಭಿತ್ತಿ ಪತ್ರ'ವೊಂದನ್ನು ತಯಾರಿಸಿರಿ.
2. ಗುಂಪಿಗೆ ಸೇರದ ಪದ ಯಾವುದು?
ಅ ) ಇಳೆ ಆ ) ಧರೆ
ಇ ) ಪೃಥ್ವಿ. ಈ ) ಉದಕ

ಚಟುವಟಿಕೆ - 3 ಅನುಭವ ಕಥನ ಬರೆಯುವ ಅಥವಾ ದಿನಚರಿ ಬರೆಯುವ
ಎ
1. ಜಾಗತಿಕ ತಾಪಮಾನ ಹೆಚ್ಚುವುದರಿಂದ ಬೇಸಗೆ ಕಾಲದಲ್ಲಿ ಕೆಲವೊಂದು ಸಮಸ್ಯೆ ಗಳನ್ನು ಎದುರಿಸುತ್ತಿರುವೆವು.
ದೇಹದಲ್ಲಿ ನೀರಿನ ಪ್ರ ಮಾಣ ಕಡಿಮೆಯಾಗುವುದು, ಆಯಾಸ, ಚರ್ಮದ ಸಮಸ್ಯೆ ಗಳು, ಬಿಸಿಲಿಗೆ ಪ್ರ ಯಾಣದ
ಸಮಸ್ಯೆ ಹೀಗೆ ಅನೇಕ. ಬೇಸಗೆ ಕಾಲದಲ್ಲಿ ಇಂತಹ ಸಮಸ್ಯೆ ಗಳನ್ನು ನೀವೂ ಅನುಭವಿಸಿರಬಹುದು. ಅಂತಹ
ಅನುಭವಗಳನ್ನು ಬರೆಯಿರಿ.
2. ಈ ಕೆಳಗಿನ ವಾಕ್ಯ ಯಾವ ಕಾಲವನ್ನು ಸೂಚಿಸುತ್ತದೆ?
'ಗಾಳಿ ಜೋರಾಗಿ ಬೀಸುತ್ತಿದೆ'
ಅ ) ವರ್ತಮಾನ ಕಾಲ ಆ ) ರಾಹುಕಾಲ
ಇ ) ಭವಿಷ್ಯತ್ ಕಾಲ ಈ ) ಭೂತಕಾಲ

K 602 Page 2 of 4

Page 3

ಅಥವಾ ಬಿ
1) ನೀವು ಹಬ್ಬದ ದಿನದಂದು ಬಹಳ ಸಂಭ್ರಮದಿಂದ ಕುಣಿದಾಡುತ್ತೀರಲ್ಲವೇ? ಗೆಳೆಯ ಗೆಳತಿಯರೊಂದಿಗೆ,
ಬಂಧುಗಳೊಂದಿಗೆ ಆತ್ಮೀಯತೆಯಿಂದ ಒಡನಾಡುತ್ತೀರಿ. ನೀವು ಆಚರಿಸಿದ ಯಾವುದಾದರೂ ಹಬ್ಬದ ದಿನದ
ದಿನಚರಿಯನ್ನು ಬರೆಯಿರಿ.
2) ಸರಿಯಾಗಿ ಬರೆದ ಪದ ಯಾವುದು?
ಅ ) ಪ್ರ ಬಂಧ ಆ ) ಪ್ರ ಭಂದ
ಇ ) ಪ್ರಭಾಂದ ಈ ) ಪ್ರಭಂಧ

ಚಟುವಟಿಕೆ - 4 ವಿವರಣೆ ಬರೆಯುವ ಅಥವಾ ಅಭಿಪ್ರಾಯ ಟಿಪ್ಪಣಿ ಬರೆಯುವ
ಎ
1. ಜಮಾಲ್, ವಿಕ್ಟರ್ ತಮ್ಮ ಶಾಲಾ ಕಲೋತ್ಸವದಲ್ಲಿ ಪ್ರ ದರ್ಶಿಸುವುದಕ್ಕಾಗಿ ಚವಿಟ್ಟು ನಾಟಕ ತಯಾರಿಯಲ್ಲಿದ್ದಾರೆ. ಅದೇ
ಶಾಲೆಯಲ್ಲಿ ಕಲಿಯುತ್ತಿರುವ ಅತಿಥಿ ಕಾರ್ಮಿಕ ಕುಟುಂಬದ ವಿದ್ಯಾರ್ಥಿಯಾದ ಹಿಮಾಂಶುವಿಗೆ ಇದು ಹೊಸ
ಕಲಾರೂಪವಾಗಿದೆ. ಅವನಲ್ಲಿ ಈ ಬಗ್ಗೆ ಕುತೂಹಲ ಮೂಡಿತು. ಅವನು ಜೋನ್ ನಲ್ಲಿ ಇದರ ಬಗ್ಗೆ ಕೇಳಿಯೇ ಬಿಟ್ಟ ನು.
ಜೋನ್ ಈ ಬಗ್ಗೆ ಬಹಳ ಉತ್ಸಾಹದಿಂದ ಚವಿಟ್ಟು ನಾಟಕದ ಬಗ್ಗೆ ಹಿಮಾಂಶುವಿನಲ್ಲಿ ವಿವರಿಸತೊಡಗಿದನು. ಚವಿಟ್ಟು
ನಾಟಕದ ವಿವರಣೆಯನ್ನು ಬರೆಯಿರಿ.
2. ಈ ಕೆಳಗಿನ ವಾಕ್ಯ ದಲ್ಲಿರುವ ಕ್ರಿಯಾಪದ ಯಾವುದು?
ರಮೇಶನು ಉದ್ಯಾನವನದಲ್ಲಿ ಅರಳಿದ ಸುಂದರವಾದ ಹೂವನ್ನು ಕೊಯ್ದನು.
ಅ ) ಉದ್ಯಾನ ಆ ) ಕೊಯ್ಯು
ಇ ) ಸುಂದರ ಈ ) ಹೂ
ಅಥವಾ ಬಿ
1) ‘ಮಳೆಗಾಲವು ಮಕ್ಕಳಿಗೆ ಬಹಳ ಖುಷಿಯನ್ನು ನೀಡುತ್ತದೆ.’ ಈ ಮಾತಿನ ಬಗ್ಗೆ ನಿಮ್ಮ ಅಭಿಪ್ರಾಯವೇನು? ಟಿಪ್ಪಣಿ
ಬರೆಯಿರಿ.
2) ಈ ವಾಕ್ಯದಲ್ಲಿರುವ ಅನ್ಯದೇಶಿಯ ಪದವನ್ನು ಬರೆಯಿರಿ.
''ಮಾಲ್ಯೂಶ್ ಎಲ್ಲಿ? ನಿನ್ನೆ ಸ್ಕೂಲಿಗೆ ಹೋದವನು ಇದುವರೆಗೆ ಬಂದಿಲ್ಲ''ಫೆಡೋಶಿಯ ಗಾಬರಿಯಿಂದ ಹೇಳಿದಳು.
ಅ ) ಮಾಲ್ಯೂಶ್ ಆ ) ಹೋಗು
ಇ ) ಫೆಡೋಶಿಯ ಈ ) ಸ್ಕೂಲ್

ಚಟುವಟಿಕೆ - 5 ಸಂದರ್ಶನ ಪ್ರಶ್ನಾವಳಿ ಬರೆಯುವ
1. ನಿಮ್ಮ ಊರಿನಲ್ಲಿರುವ ಓರ್ವ ದೈವ ನರ್ತಕನನ್ನು ಭೇಟಿಯಾದಿರಿ ಎಂದು ಭಾವಿಸಿರಿ. ಅವರಲ್ಲಿ ಕಳೆಯ ಕುರಿತಾಗಿ
ಕೇಳಬಹುದಾದ ಪ್ರ ಶ್ನೆ ಗಳನ್ನು ತಯಾರಿಸಿರಿ.

K 602 Page 3 of 4

Page 4

2. ‘ ‘ನಿನ್ನ ನೆತ್ತಿಯ ಎಣ್ಣೆ ಜಿಡ್ಡು ಆರಲಿಲ್ಲ. ಕಾಲಿನ ಅರಸಿನ ಮಾಸಲಿಲ್ಲ ’’
'ಬೀರು ಕಲ್ಕುಡ' ಪಾಠ ಭಾಗದ ಆಧಾರದಲ್ಲಿ ಈರವದಿ ಹೇಳಿದ ಈ ಮಾತಿನ ವಿಶೇಷಾರ್ಥ ಬರೆಯಿರಿ.

ಚಟುವಟಿಕೆ - 6 ವರ್ಣಿಸಿ ಬರೆಯುವ
1. ನೀವು ಪ್ರ ವಾಸ ಹೋಗಿರುವ ಸಂದರ್ಭದಲ್ಲಿ ಸುಂದರವಾದ ನದಿಯಲ್ಲಿ ಹರಿಯುವ ನೀರು, ಎತ್ತರವಾದ ಗುಡ್ಡ - ಬೆಟ್ಟ,
ಬಣ್ಣ ಬಣ್ಣದ ಹೂಗಳು, ಹಸುರು ಹಸುರಾದ ಗಿಡ ಮರಗಳನ್ನು ಒಳಗೊಂಡ ಪ್ರಕೃ ತಿ ಸೌಂದರ್ಯವನ್ನು
ಅಸ್ವಾದಿಸಿರಬಹುದು. ಅಲ್ಲಿನ ಹಸಿರು ಮನಸ್ಸಿಗೆ ಮುದ ನೀಡಿರಬಹುದು. ಅಂತಹ ಪ್ರಕೃ ತಿಯನ್ನು ವರ್ಣಿಸಿ ಬರೆಯಿರಿ.
2. ಗುಂಪಿಗೆ ಸೇರದ ಜೋಡಿ ಯಾವುದು?
ಅ ) ಸಾಮರ್ಥ್ಯ - ಅಸಾಮರ್ಥ್ಯ ಆ ) ಆಸೆ - ಅತಿಯಾಸೆ
ಇ ) ಧೈರ್ಯ - ಅಧೈರ್ಯ ಈ ) ಹೆಚ್ಚು - ಕಡಿಮೆ

********************************

K 602 Page 4 of 4

Page 5

SUMMATIVE ASSESSMENT – TERM I
ಕಾಲುವಾರ್ಷಿಕ ಸಂಕಲನಾತ್ಮಕ ಮೌಲ್ಯಮಾಪನ
ಮಾದರಿ ಪ್ರಶ್ನೆ ಪತ್ರಿಕೆ
ಕನ್ನಡ ಮೂಲ ಪಠ್ಯ (KANNADA BT)
ತರಗತಿ: 6 ಸಮಯ: 2 ಗಂಟೆಗಳು

ಸೂಚನೆಗಳು
1. ಮೌಲ್ಯ ಮಾಪನ ಚಟುವಟಿಕೆಗಳು ಪ್ರಾರಂಭವಾಗುವ ಮೊದಲ ಹದಿನೈದು ನಿಮಿಷಗಳು ಕೂಲ್ ಆಪ್ ಟೈಮ್ ಆಗಿದೆ.
ಪ್ರ ಶ್ನೆ ಗಳನ್ನು ಓದಿ ಅರ್ಥೈಸಲು ಮತ್ತು ಉತ್ತರಗಳನ್ನು ಕಂಡುಕೊಳ್ಳಲು ಈ ಸಮಯವನ್ನು ಉಪಯೋಗಿಸಬಹುದು.
2. ಒಟ್ಟು ಆರು ಚಟುವಟಿಕೆಗಳಿವೆ. ಅವುಗಳಲ್ಲಿ ಎರಡು ಚಟುವಟಿಕೆಗಳಿಗೆ ಆಯ್ಕೆಗಳು ಇರುವುದು. ಅವುಗಳಲ್ಲಿ A
ಅಥವಾ B ಯಾವುದಾದರೂ ಒಂದು ಚಟುವಟಿಕೆಗೆ ಉತ್ತರಿಸಿದರೆ ಸಾಕು.
3. ಉತ್ತರಿಸಲು ಆಯ್ಕೆ ಮಾಡಿದ ಚಟುವಟಿಕೆಗಳ ಎಲ್ಲಾ ಉಪಪ್ರ ಶ್ನೆ ಗಳಿಗೂ ಉತ್ತರ ಬರೆಯಬೇಕು.

ಚಟುವಟಿಕೆ - 1 ಓದುವ ಬರೆಯುವ
ಕೆಳಗಿನ ಗದ್ಯವನ್ನು ಓದಿ ನೀಡಿರುವ ಪ್ರಶ್ನೆಗಳಿಗೆ ಉತ್ತರಿಸಿರಿ.
ಅಶೋಕ ನಗರ ಎಂಬ ಊರಿನಲ್ಲಿ ಸೋಮನೆಂಬ ಉಡಾಳ ಹುಡುಗನಿದ್ದ. ಅವನು ಯಾರ ಮನೆಗೆ ಹೋದರೂ ಅವರು
ತುಂಬಿಟ್ಟ ಕೊಡದಲ್ಲಿದ್ದ ನೀರನ್ನು ಖಾಲಿ ಮಾಡುತ್ತಿದ್ದನು. ತಂದೆ ತಾಯಿ ಆತನಿಗೆ ಎಷ್ಟು ಬುದ್ಧಿ ಹೇಳಿದರೂ ಅವನು ಕಿವಿ ಮೇಲೆ
ಹಾಕಿ ಕೊಳ್ಳುತ್ತಿರಲಿಲ್ಲ. ಊರಿನ ಪಂಚಾಯತಿನವರು ಟ್ಯಾಂಕ್ ನಲ್ಲಿ ನೀರು ತುಂಬಿಸಿಟ್ಟರು. ಆತ ಟ್ಯಾಪ್ ತಿರುಗಿಸಿ ನೀರು
ಪೋಲುಮಾಡುತ್ತಿದ್ದನು. ಊರಿನ ಜನರೆಲ್ಲರೂ ಸೋಮನ ಉಡಾಳ ಬುದ್ಧಿಗೆ ಬಸವಳಿದು ಹೋಗಿದ್ದರು.
ಒಮ್ಮೆ ಅಶೋಕ ನಗರದಲ್ಲಿ ತೀವ್ರ ಬರಗಾಲ ಬಂದಿತು. ಕೆರೆ ಬಾವಿಗಳೆಲ್ಲ ಬತ್ತಿಹೋದವು. ಗಿಡಮರಗಳೆಲ್ಲ ನೀರಿಲ್ಲದೆ
ಸೊರಗಿ ಹೋದವು. ಸೋಮನ ಮನೆಯಲ್ಲಿ ಕುಡಿಯಲು ನೀರಿರಲಿಲ್ಲ. ನೆರೆಯ ಹಳ್ಳಿಯಿಂದ ನೀರು ತರಬೇಕಾಯಿತು. ಸೋಮನ
ತಂದೆ, ತಾಯಿ ಆತನಿಗೆ ‘‘ನೋಡಿದೆಯಾ ಸೋಮ, ಊರಿನಲ್ಲಿ ನೀರಿನ ಬರಗಾಲ ಬಂದಿದೆ. ನೀರಿಲ್ಲದೆ ಜನರು ಪರದಾಡುತ್ತಿದ್ದಾರೆ.
ನೀನು ಆಗ ನೀರನ್ನು ಪೋಲು ಮಾಡುತ್ತಿದ್ದೆ’’ ಎಂದರು. ಆಗ ಆತನಿಗೆ ತನ್ನ ತಪ್ಪಿನ ಅರಿವಾಯಿತು. ‘‘ಅಪ್ಪ, ಇನ್ನು ನಾನು ನೀರು
ಪೋಲು ಮಾಡುವುದಿಲ್ಲ. ಮಿತವಾಗಿ ಬಳಸುತ್ತೇನೆ.’’ ಎಂದು ಹೇಳಿದನು.
1. 'ಉಡಾಳ' ಪದದ ಅರ್ಥ ನೀಡುವ ಪದ
ಅ ) ತುಂಟ ಆ ) ಕೋಪಿಷ್ಠ
ಇ ) ಬುದ್ಧಿವಂತ ಈ ) ಶ್ರೇಷ್ಠ
2. ಊರಿನ ಜನರು ಬಸವಳಿದು ಹೋಗಲು ಕಾರಣವೇನು?
ಅ ) ಬರಗಾಲ ಬಂದುದರಿಂದ ಆ ) ಸೋಮನ ಉಡಾಳ ಬುದ್ಧಿಯಿಂದ
ಇ ) ಕುಡಿಯಲು ನೀರಿಲ್ಲದಿದ್ದುದರಿಂದ ಈ ) ಕೆರೆಬಾವಿಗಳು ಬತ್ತಿ ಹೋದುದರಿಂದ

K 612 Page 1 of 4

Page 6

3. ಅಡಿಗೆರೆ ಎಳೆದ ಪದವನ್ನು ಉಪಯೋಗಿಸಿ ಸ್ವಂತ ವಾಕ್ಯ ರಚಿಸಿರಿ.
ನೀರನ್ನು ಮಿತವಾಗಿ ಬಳಸಬೇಕು.
4. ಸೋಮನಿಗೆ ಯಾವಾಗ ತನ್ನ ತಪ್ಪಿನ ಅರಿವಾಯಿತು?
5. ಈ ಕಥೆಯಲ್ಲಿ ಕಂಡು ಬರುವ ನೀತಿ ಯಾವುದು?

ಚಟುವಟಿಕೆ - 2 ಸಂಭಾಷಣೆ ಬರೆಯುವ
1) ಬಡಾವಣೆಯಲ್ಲಿ ನೀರು ಬರದೇ ಇರುವಾಗ ಜನರೆಲ್ಲರೂ ಕಂಗೆಟ್ಟರು. ಎಲ್ಲರ ಅಭಿಪ್ರಾಯದಂತೆ ಸೋಮು
ಮುನ್ಸಿಪಾಲಿಟಿ ಅಧಿಕಾರಿ ಬಳಿಗೆ ಹೋಗುವುದೆಂದು ತೀರ್ಮಾನಿಸಲಾಯಿತು. ಮುನ್ಸಿಪಾಲಿಟಿ ಅಧಿಕಾರಿ ಬಳಿಗೆ ಹೋಗಿ
ಸೋಮು ತಮ್ಮ ಸಮಸ್ಯೆಯನ್ನು ಹೇಳಿಕೊಂಡನು. ಪಾಠಭಾಗದಲ್ಲಿ ಬಂದಿರುವ ಈ ಘಟನೆಯ ಆಧಾರದಲ್ಲಿ ಸೋಮು
ಮತ್ತು ಅಧಿಕಾರಿಗಳ ಮಧ್ಯೆ ನಡೆದಿರುವ ಸಂಭಾಷಣೆ ಏನಾಗಿರಬಹುದು ಎಂಬುದನ್ನು ಊಹಿಸಿ ಬರೆಯಿರಿ.
2) ದ್ವಿರುಕ್ತಿ ಪದವನ್ನು ಗುರುತಿಸಿ ಬರೆಯಿರಿ.
ಅ ) ಬಟ್ಟೆ ಬರೆ ಆ ) ಸತಿಪತಿ
ಇ ) ಹಾದಿ ಬೀದಿ ಈ ) ಚೂರು ಚೂರು

ಚಟುವಟಿಕೆ - 3 ಕಿರು ಟಿಪ್ಪಣಿ ಬರೆಯುವ
1) 'ನಲ್ಲಿಯಲ್ಲಿ ನೀರು ಬಂತು' ಎಂಬ ಪಾಠಭಾಗದಲ್ಲಿನ ಲೇಖನವನ್ನು ಓದಿದಾಗ ನೀರು ಎಷ್ಟು ಅಮೂಲ್ಯವಾದುದು
ಎಂಬುದರ ಬಗ್ಗೆ ನಿಮಗೆ ತಿಳುವಳಿಕೆ ಮೂಡಿರಬಹುದಲ್ಲವೇ? ಇದರ ಹಿನ್ನಲೆಯಲ್ಲಿ 'ನೀರಿನ ಮಹತ್ವ'ದ ಬಗ್ಗೆ ಕಿರು
ಟಿಪ್ಪಣಿ ಬರೆಯಿರಿ.
2) ಈ ವಾಕ್ಯದಲ್ಲಿ ಅಡಿಗೆರೆ ಎಳೆದ ಪದದ ಅರ್ಥವೇನು?
ಅಧ್ಯಾಪಕರ ಹಿತ ನುಡಿಗಳನ್ನು ಕೇಳಿದ ರಮೇಶನು ತಲೆದೂಗಿದನು.
ಅ ) ಮೆಚ್ಚುಗೆ ಸೂಚಿಸು ಆ ) ನಿದ್ದೆ ಮಾಡು
ಇ ) ತಲೆಕೆಳಗೆ ಮಾಡು ಈ ) ತಲೆಯನ್ನು ತೂಕ ಮಾಡು

ಚಟುವಟಿಕೆ - 4 ಆಶಯ ಬರೆಯುವ
ತರಗತಿಯಲ್ಲಿ 'ಭಾಷಾ ಬಾಂಧವ್ಯ' ಎಂಬ ಪದ್ಯವನ್ನು ಹಾಡಿ ಆಸ್ವಾದಿಸಿದಿರಲ್ಲವೇ? ಅಂತೆಯೇ 'ಕನ್ನಡ ಪ್ರೇಮ' ಎಂಬ
ಕವಿತೆಯನ್ನು ಕೆಳಗೆ ಕೊಡಲಾಗಿದೆ.

ಕನ್ನಡ ಪ್ರೇಮ
ನಮ್ಮ ಭಾಷೆ ಕನ್ನಡ, ನಮಗೆ ಹೆಮ್ಮೆ ಕನ್ನಡ,
ನಮ್ಮ ತಾಯಿ ನುಡಿ, ನಮಗೆ ಸದಾ ಪ್ರಿಯ

K 612 Page 2 of 4

Page 7

ಇಲ್ಲಿನ ನೆಲದ ಕಣಕಣದಲೂ ಕನ್ನಡದ ಕಂಪಿದೆ,
ಇಲ್ಲಿನ ಜನರ ಮನಮನದಲೂ ಕನ್ನಡದ ಪ್ರೀತಿಯಿದೆ.
ನುಡಿಯಲ್ಲಿ ಸಿರಿಗನ್ನಡ, ನಡೆಯಲ್ಲಿ ಸಿರಿದೇಗುಲ,
ನಮ್ಮ ಸಂಸ್ಕೃತಿ, ನಮ್ಮ ಪರಂಪರೆಗೆ ಇದುವೇ ಮೂಲ.
ಕನ್ನಡ ನಾಡಿನಲಿ ಕರುನಾಡಿನ ಸಿರಿತನ,
ಕನ್ನಡ ಮನಸುಗಳಲ್ಲಿ ಸದಾ ತುಂಬಿದ ಆನಂದ.
ಕನ್ನಡದ ಕೀರ್ತಿ ಹರಡಲಿ ಎಲ್ಲೆಡೆಯೂ,
ಕನ್ನಡದ ಕಂಪ ಹಬ್ಬಲಿ ವಿಶ್ವದೆಡೆಯೂ.
ಜೈ ಕನ್ನಡ, ಜೈ ಕನ್ನಡ, ನಮ್ಮ ನುಡಿಗೆ ಜಯವಾಗಲಿ,
ಕನ್ನಡದ ಪ್ರೇಮ ಸದಾ ನಮ್ಮಲಿ ಅಜರಾಮರವಾಗಲಿ.
1) ಪದ್ಯವನ್ನು ಓದಿ ಆಶಯವನ್ನು ಬರೆಯಿರಿ.
2) ಈ ಮೇಲಿನ ಪದ್ಯ ಭಾಗದಲ್ಲಿ 'ಪ್ರೀತಿ' ಎಂಬ ಅರ್ಥವನ್ನು ಸೂಚಿಸುವ ಪದ ಯಾವುದು?
ಅ ) ಕಂಪು ಆ ) ಸಿರಿತನ
ಇ ) ಪ್ರೇಮ ಈ ) ಕೀರ್ತಿ

ಚಟುವಟಿಕೆ - 5 ಪ್ರಬಂಧ ಬರೆಯುವ ಅಥವಾ ಲೇಖನ ಬರೆಯುವ
A) ಭಾಷೆ ಭಾಷೆಗಳ ನಡುವೆ ದ್ವೇಷವಿರಬಾರದು, ಒಲುಮೆಯಿರಬೇಕು. ಭಾಷಿಕ ಗಡಿಯನ್ನು ಮೀರಿ ಬೆಳೆಯಬೇಕು
ಎಂಬುದರ ಬಗ್ಗೆ ಈಗಾಗಲೇ ತರಗತಿಯಲ್ಲಿ ತಿಳಿದಿರುವಿರಿ.ಇದರ ಆಧಾರದಲ್ಲಿ 'ಭಾಷೆಯ ಮಹತ್ವ' ಎಂಬ ವಿಷಯದ
ಕುರಿತು ಪ್ರಬಂಧ ತಯಾರಿಸಿರಿ.
ಅಥವಾ
B) ನಿಮ್ಮ ಜೀವನದಲ್ಲಿ ಹಲವಾರು ಹಾಸ್ಯ ಪ್ರಸಂಗಗಳು ನಡೆದಿರಬಹುದು. ಅಂತಹ ಘಟನೆಗಳನ್ನು ನೆನಪಿಸಿ ಹಾಸ್ಯ
ಲೇಖನವಾಗಿ ಬರೆಯಿರಿ.

ಚಟುವಟಿಕೆ - 6 ಗಾದೆ ವಿಸ್ತರಿಸಿ ಬರೆಯುವ ಅಥವಾ ಮನವಿ ಪತ್ರ ಬರೆಯುವ
ಎ
1) 'ಹೊತ್ತಿಗೊದಗುವ ಮಾತು ಗಾದೆ' ಎಂಬ ಪಾಠ ಭಾಗದಲ್ಲಿ ಹಲವಾರು ಗಾದೆ ಮಾತುಗಳ ಬಗ್ಗೆ ತಿಳಿದಿರುವಿರಿ.
ನಿಮಗೆ ತಿಳಿದಿರುವ ಒಂದು ಗಾದೆಯನ್ನು ವಿಸ್ತರಿಸಿ ಬರೆಯಿರಿ.
2) ಗುಂಪಿಗೆ ಸೇರದಿರುವುದು ಯಾವುದು?
ಅ ) ಮಾತು ಬೆಳ್ಳಿ ಮೌನ ಬಂಗಾರ
ಆ ) ಹಾಸಿಗೆ ಇದ್ದಷ್ಟೇ ಕಾಲು ಚಾಚು
ಇ ) ಮಾತು ಬಲ್ಲವನಿಗೆ ಜಗಳವಿಲ್ಲ ಊಟ ಬಲ್ಲವನಿಗೆ ರೋಗವಿಲ್ಲ
ಈ ) ಮಾತು ಮನೆ ಕೆಡಿಸಿತು ತೂತು ಒಲೆ ಕೆಡಿಸಿತು.

K 612 Page 3 of 4

Page 8

ಅಥವಾ ಬಿ
1) ನಿಮ್ಮ ಮನೆಯ ಸಮೀಪದ ಬೀದಿಗಳಲ್ಲಿ ರಾತ್ರಿಕಾಲದಲ್ಲಿ ಬೆಳಕು ಸಿಗುವಂತಾಗಲು ಬೀದಿ ದೀಪಗಳನ್ನು
ಸ್ಥಾಪಿಸಬೇಕೆಂದು ವಿನಂತಿಸುತ್ತಾ ಪಂಚಾಯತ್ ಅಧ್ಯಕ್ಷರಿಗೆ ಮನವಿ ಪತ್ರವನ್ನು ಬರೆಯಿರಿ.
2) ಈ ವಾಕ್ಯದಲ್ಲಿರುವ ವಿಶೇಷಣ ಪದವನ್ನು ಗುರುತಿಸಿರಿ.
ಸುಮಾಳು ಹೂದೋಟದಲ್ಲಿನ ಸುಂದರವಾದ ಹೂವನ್ನು ನೋಡಿ ಸಂತೋಷ ಪಟ್ಟಳು
ಅ ) ಹೂದೋಟ ಆ ) ಹೂ
ಇ ) ಸಂತೋಷ ಈ ) ಸುಂದರವಾದ

********************************

K 612 Page 4 of 4

Document Details

Board / OrgKerala Board
ExamClass 6
TypeSample Paper
Pages8
Updated24 Sep 2026

More for Kerala Class 6

📄Question Paper 📝Sample Paper