Page 1
Kerala Board
Sample
Papers
Page 2
SET A
Summative Assessment III 2025 26
(Model question paper)
KANNADA-PAPER I
ಸಮಯ:1 ಗಂಟೆ 30 ನಿಮಿಷ ಮಾದರಿ ಪ್ರಶ್ನೆ ಪತ್ರಿಕೆ
Cool of time: 15 Min ಕನ್ನಡ I ತರಗತಿ:X
ಅಂಕಗಳು:40
ಸೂಚನೆಗಳು:
ಪ್ರಶ್ನೆಗಳನ್ನು ಓದಿ ಅರ್ಥೈಸಿಕೊಳ್ಳಲು ನಿಮಗೆ 15 ನಿಮಿಷ ಕಾಲಾವಕಾಶ ನೀಡಲಾಗಿದೆ.
ಎಲ್ಲಾ ಪ್ರಶ್ನೆಗಳನ್ನು ಸಾವಧಾನವಾಗಿ ಓದಿರಿ.
a
al
ಸೂಚನೆಗಳನ್ನು ಓದಿ ಅರ್ಥಮಾಡಿಕೊಂಡು ಕೊಡಲಾದ ಪ್ರಶ್ನೆಗಳಿಗೆ ಉತ್ತರಿಸಿರಿ.
er
K
1 ರಿಂದ 4 ರ ವರೆಗಿನ ಎಲ್ಲಾ ಪ್ರಶ್ನೆಗಳಿಗೆ ಉತ್ತರಿಸಿರಿ. 4x1=4
T,
ER
1. ಕೆಳಗೆ ಕೊಟ್ಟ ಹೇಳಿಕೆಗಳಲ್ಲಿ ಸರಿಯಾದುದನ್ನು ಆರಿಸಿ ಬರೆಯಿರಿ.
1. ಸುರುಳಿ ಗಿಡಗಳನ್ನೂ ಪರ್ನ್ ಗಳನ್ನೂ ಕಡಿದು ಚರಂಡಿ ತೋಡಿದಾಗ ನೀರಿನ ಹರಿವು ಹೆಚ್ಚಾಯಿತು.
C
lS
2. ಸುರುಳಿ ಗಿಡಗಳನ್ನೂ ಫರ್ನ್ ಗಳನ್ನೂ ಕಡಿದು ಚರಂಡಿ ತೋಡಿದಾಗ ನೀರಿನ ಹರಿವಿನಲ್ಲಿ ಯಾವುದೇ
ವ್ಯತ್ಯಾಸವಾಗಲಿಲ್ಲ.
el
tC
3. ಸುರುಳಿ ಗಿಡಗಳನ್ನೂ ಫರ್ನ್ ಗಳನ್ನೂ ಕಡಿದು ಚರಂಡಿ ತೋಡಿದಾಗ ನೀರು ಇಂಗತೊಡಗಿತು.
4. ಸುರುಳಿ ಗಿಡಗಳನ್ನೂ ಫರ್ನ್ ಗಳನ್ನೂ ಕಡಿದು ಚರಂಡಿ ತೋಡಿದಾಗ ಕೆಸರು ಹರಿದುಬಂತು.
en
ಅ) ಹೇಳಿಕೆ 1
m
ಆ) ಹೇಳಿಕೆ 2
es
ಇ) ಹೇಳಿಕೆ 3
ss
ಈ) ಹೇಳಿಕೆ 4
A
2. ಈ ಕೆಳಗಿನ ಹೇಳಿಕೆಗಳಲ್ಲಿ ಸರಿಯಾದುದು ಯಾವುದು?
e
at
1.ಮಗು ಭಾಷೆಯನ್ನು ಅನುವಂಶಿಕವಾಗಿ ಕಲಿಯುತ್ತದೆ.
St
2.ಮಗು ಭಾಷೆಯನ್ನು ನೈಸರ್ಗಿಕವಾಗಿ ಕಲಿಯುತ್ತದೆ.
3.ಮಗು ಭಾಷೆಯನ್ನು ಅನುಕರಣೆಯಿಂದ ಕಲಿಯುತ್ತದೆ.
©
4.ಮಗು ಭಾಷೆಯನ್ನು ಆಲಿಸಿ ಕಲಿಯುತ್ತದೆ.
ಅ)ಹೇಳಿಕೆ 1 ಮತ್ತು 2 ಸರಿಯಾಗಿದೆ.
ಆ )ಹೇಳಿಕೆ 3 ಮತ್ತು 4 ಸರಿಯಾಗಿದೆ.
ಇ) ಹೇಳಿಕೆ 3 ಮತ್ತು 4 ಸರಿಯಾಗಿಲ್ಲ.
ಈ) ಹೇಳಿಕೆ 1 ಸರಿಯಾಗಿದೆ.
Page 3
3. "ನಾಗಭರಣ" ಪದವನ್ನು ಹೇಗೆ ವಿಗ್ರಹಿಸಿ ಬರೆಯಬಹುದು?
ಅ) ನಾಗನನ್ನು ಆಭರಣವಾಗಿ ಧರಿಸಿದವ.
ಆ) ನಾಗನ ಆಭರಣ.
ಇ) ಆಭರಣದಲ್ಲಿರುವ ನಾಗ.
ಈ) ಶಿವನ ನಾಗ.
4. ಈ ಕೆಳಗಿನವುಗಳಲ್ಲಿ ಸರಿಯಾಗಿ ಹೊಂದಿಕೆಯಾಗುವವುಗಳನ್ನು ಗುರುತಿಸಿ ಬರೆಯಿರಿ.
a
ಅ ಆ
al
er
1. ಪಿಡಿಯೆಂ ಪುರಿಗಣೆಯಂ i. ಕುಂತಿಯನಾಗಲ್
K
2. ಕಂಡಂ ಗಂಗಾಂಗನೆಯ ಕಾಣ್ಬವೊಲ್ ii.ಕಣ್ಬೆತ್ತವೊಲ್
T,
iii.ನರನೆಡೆಗೊಂಡೊಡಂ
ER
ಅ) 1 ಮತ್ತುii, 2 ಮತ್ತುi.
C
lS
ಆ) 1 ಮತ್ತು iii, 2 ಮತ್ತುi
el
ಇ) 1 ಮತ್ತುi, 2 ಮತ್ತು ii
tC
ಈ) 1 ಮತ್ತು i, 2 ಮತ್ತು iii.
en
m
5 ಮತ್ತು 6 ನೇ ಪ್ರಶ್ನೆಗಳಿಗೆ ಸೂಚನೆಯಂತೆ ಉತ್ತರಿಸಿರಿ. 2x2=4
es
5. "ಸಸ್ಯ ಶ್ಯಾಮಲೆ ಎಂದು ಕರೆಸಿಕೊಳ್ಳುವ ಈ ಭೂಮಿ ಇಂದು ಮರುಳುಗಾಡಾಗುತ್ತಿದೆ"
ss
"ಮಳೆ ಕೊಯ್ಲಿನ ಕೆಲಸವನ್ನು ಎಲ್ಲರೂ ಮಾಡಬೇಕಾಗಿದೆ"
A
"ಮುದುಕ ಶೆಟ್ಟಿಯೂ ಮೂವರು ಮಕ್ಕಳೂ' ನಾಟಕದಲ್ಲಿ ಬರುವ ಈ ವಾಕ್ಯಗಳ ಆಧಾರದಲ್ಲಿ ಈ
e
at
ನಾಟಕವು ನೀಡುವ ಎರಡು ಪ್ರಧಾನ ಸಂದೇಶಗಳನ್ನು ಬರೆಯಿರಿ.
St
6. ಅ) ಕೆಳಗೆ ನೀಡಲಾದ ವಾಕ್ಯದಲ್ಲಿ ಅಡಿಗೆರೆ ಎಳೆದಿರುವ ಪದದ ಪರ್ಯಾಯ ಪದವನ್ನು ಬಳಸಿ ಬೇರೊಂದು
©
ವಾಕ್ಯವನ್ನು ರಚಿಸಿರಿ.
ಕಾಡಿನ ಹಸುರ್ಗತ್ತಲೆಗೆ ಬೆಳಕು ನೀಡುವಂತೆ ಮಾರ್ತಾಂಡನ ಪ್ರವೇಶವಾಯಿತು.
ಅಥವಾ
ಆ) ಈ ಕೆಳಗಿನ ವಾಕ್ಯದ ವಿಶೇಷಾರ್ಥವನ್ನು ಬರೆಯಿರಿ.
"ತಂಡುಲ ಮಾತ್ರ ಉಳಿದಿದ್ದ ಅಗ್ನಿ ಕಣವು ವಾಯು ಸಹಾಯದಿಂದ ವನವೆಲ್ಲವಂ ದಹಿಸುವಂತೆ"
Page 4
7 ಮತ್ತು 8 ನೇ ಪ್ರಶ್ನೆಗಳಿಗೆ ಸೂಚನೆಯಂತೆ ಉತ್ತರಿಸಿರಿ. 2x3=6
7. ಕೆಳಗೆ ನೀಡಲಾದ ಯಕ್ಷಗಾನ ಪ್ರಸಂಗ ಪದ್ಯದ ಅರ್ಥಗಾರಿಕೆಯನ್ನು ಬರೆಯಿರಿ.
ಪಿತನ ವಾಕ್ಯವ ಮೀರಿ ಪಿಂತೆ ನಡೆದವರುಂಟೆl ಅತಿರೇಕವಿದು ಲೋಕಕತಿ ಚೋದ್ಯವಯ್ಯ ll
ಹದಿನಾಲ್ಕು ವತ್ಸರದ ತುದಿಯ ಮರುದಿನ ಬಂದುl ಒದಗುವೆನು ಪಟ್ಟಣಕ್ಕೆ ಇದು ಕಪಟವಲ್ಲ ll
a
8. ಅ) 'ಡೊಂಬರ ಚೆನ್ನೆ' ಪಾಠದಲ್ಲಿ ಬಂದಿರುವ ಕೆಳಗಿನ ಸಾಲುಗಳ ಸ್ವಾರಸ್ಯವನ್ನು ಬರೆಯಿರಿ.
al
ಗುಲ್ಲು ಮಾಡಲು, ಸೊಲ್ಲನಾಡರು
er
ಎಳ್ಳು ಬಿದ್ದರೆ ಬೊಬ್ಬೆಯು
K
ಅಲ್ಲಿ ಜನಗಳ ನುಗ್ಗು ನುಗ್ಗಿಗೆ
T,
ಇಲ್ಲ ಸಾಸಿವೆ ಹಾಕಲು
ER
ಅಥವಾ
C
ಆ) "ಅಘಂ ಹೋಗಿ ಬಾಳ್ದಪೆ" ಕಾವ್ಯ ಭಾಗದ ಕೆಲವು ಸಾಲುಗಳನ್ನು ಕೆಳಗೆ ನೀಡಲಾಗಿದೆ .ಅದರ ಸರಳ
lS
el
ಅನುವಾದವನ್ನು ಬರೆಯಿರಿ.
tC
ಕೊಡೆಯೆಂಬರಾತಪತ್ರವನುದರದೇಶಂಮಂ
en
ಪೊಡೆಯೆಂಬರೊಲಿದು ಮಂಥನವನೆಸಗೆಂಬುದಂ
m
ಕಡೆಯೆಂಬರಾರಡಿಯನಳಿಯೆಂಬರು
es
ss
9 ರಿಂದ 13 ರ ವರೆಗಿನ ಎಲ್ಲಾ ಪ್ರಶ್ನೆಗಳಿಗೆ ಉತ್ತರಿಸಿರಿ. 5x4=20
A
9. "ಚಿತ್ತಿಯ ಮಳೆಯ ಸಂಜೆ' ಕವನದ ಸಾಲುಗಳನ್ನು ಕೆಳಗೆ ಕೊಡಲಾಗಿದೆ. ಅದರ ಆಸ್ವಾದನ ಟಿಪ್ಪಣಿ
e
ಬರೆಯಿರಿ.
at
St
ತೋಪು ತೋಟದ ಗಾಳಿ
ನುಗ್ಗಿ ನುಸುಳಿ ಬಂದು
©
ಹುಲ್ಲುಗಾವಲಾ ಸವರಿ
ಬೈತಲಾ ಬಾಚ್ಯಾವ
10. ಕೆಳಗೆ ನೀಡಲಾದ ಬಸವಣ್ಣನವರ ವಚನವನ್ನು ಸರ್ವಜ್ಞನ ವಚನದೊಂದಿಗೆ ಹೋಲಿಸಿ ಟಿಪ್ಪಣಿ
ಬರೆಯಿರಿ.
Page 5
ನುಡಿದರೆ ಮುತ್ತಿನ ಹಾರದಂತಿರಬೇಕು
ನುಡಿದರೆ ಮಾಣಿಕ್ಯದ ದೀಪ್ತಿಯಂತಿರಬೇಕು
ನುಡಿದರೆ ಸ್ಫಟಿಕದ ಶಲಾಕೆಯಂತಿರಬೇಕು
ನುಡಿದರೆ ಲಿಂಗ ಮೆಚ್ಚಿ ಆಹುದಹುದೆನಬೇಕು
ನುಡಿಯೊಳಗಾಗಿ ನಡೆಯದಿದ್ದರೆ
ನಮ್ಮ ಕೂಡಲಸಂಗಮದೇವನೆಂತೊಲಿವನಯ್ಯ
a
- ಬಸವಣ್ಣ
al
er
ಮಾತಿನಿಂ ನಗೆ -ನುಡಿಯು
K
ಮಾತಿನಿಂ ಹಗೆ-ಕೊಲೆಯು
T,
ER
ಮಾತಿನಿಂ ಸರ್ವಸಂಪದವು ಲೋಕಕ್ಕೆ
ಮಾತೆ ಮಾಣಿಕವು ಸರ್ವಜ್ಞ
C
lS
- ಸರ್ವಜ್ಞ
11. "ಪಿಡಿಯೆಂ ಪುರಿಗಣೆಯಂ' ಕಾವ್ಯಭಾಗದ ಕೆಲವು ಸಾಲುಗಳನ್ನು ಕೆಳಗೆ ಕೊಡಲಾಗಿದೆ. ಇದರ
el
tC
ಆಧಾರದಲ್ಲಿ ಕರ್ಣನ ಪಾತ್ರ ಚಿತ್ರಣ ಮಾಡಿರಿ.
"ಜೋಳಕ್ಕೆ ತಪ್ಪಿಯುಮಿಂ ಬಾೞ್ವು ದೆ'
en
"ಮೀಂಗುಲಿಗನೆನಾಗಿಯುಮಣಮಾಂ ಗುಣಮನೆ ಬಿಸುಟೆನಿಲ್ಲ ನಿಮಗಂ ಮಗನಾದಂಗೆನಗೆ
m
ಬಿಸುಡಲಕ್ಕುಮೆ"
es
"ರಾಧೇಯನೊಳ್ಪಿಂಗಾಧೇಯಮಾಗಿರ್ದನ್"
ss
12. ಉತ್ತಯತಕ್ಕ ಹೋಗುವ ವೇಳೆಗೆ ರಾಣಿ ಅಲ್ಲಿ ಕಾದಿದ್ದಳು. ತಾನೇ ಮೊದಲಾಗಿ "ಕೈಮುಗಿದೆ ಅಜ್ಜ,
A
ಬನ್ನಿರಿ, ಕೂಡಿರಿ. ಅರಮನೆಗೆ ಬಂದವರು ತೊಟ್ಟು ಹಾಲು ಕುಡಿದು ಹೋಗಿರಿ' ಎಂದಳು.
e
at
ರಾಣಿಗೆ ವೃದ್ಧನ ಕುರಿತಾದ ಗೌರವ, ಕಾಳಜಿಯನ್ನು "ಪಡಿ' ಪಾಠದಲ್ಲಿ ಓದಿ ತಿಳಿದಿರುವಿರಿ. ಈ
St
ಮಾತಿನ ಹಿನ್ನೆಲೆಯಲ್ಲಿ ಇಂದಿನ ಸಮಾಜದಲ್ಲಿ ವೃದ್ಧರಿಗೆ ತೋರುವ ಗೌರವ,ಕಾಳಜಿ, ಉಪಚಾರ
©
ಮತ್ತು ಸ್ಥಾನಮಾನಗಳ ಕುರಿತು ಒಂದು ಟಿಪ್ಪಣಿ ಬರೆಯಿರಿ.
13. ಅ) "ಆಗು ನೀ ಅನಿಕೇತನ'ಪಾಠದಲ್ಲಿ ಗಾಡಿಹುಸೇನಿಗೆ ನೀಡುವುದಕ್ಕೆ ಸಿರಿಲ್ ಒಂದು ಲಕ್ಷದ ಚೆಕ್ಕನ್ನು
ಕುಪ್ಪಣ್ಣಯ್ಯನಿಗೆ ಕಳುಹಿಸಿದ ದಿನದ ದಿನಚರಿಯನ್ನು ಕುಪ್ಪಣ್ಣಯ್ಯನು ಹೇಗೆ ಬರೆದಿರಬಹುದು ಎಂದು
ಊಹಿಸಿ ಬರೆಯಿರಿ.
ಅಥವಾ
Page 6
ಆ) "ಲಮೇರಿಯಾ' ಪಾಠದಲ್ಲಿ ಗುಮಾಸ್ತನು ಮಲೇರಿಯಾವನ್ನು ಲಮೇರಿಯಾ ಎಂದು ತಪ್ಪಾಗಿ
ಬರೆದುದರಿಂದ ಆದ ಅನಾಹುತಗಳನ್ನು ವಿಶ್ಲೇಷಿಸಿ ಟಿಪ್ಪಣಿ ಬರೆಯಿರಿ.
ಈ ಕೆಳಗಿನ ಪ್ರಶ್ನೆಗೆ ಉತ್ತರಿಸಿರಿ. 1x6=6
14. ಅ) "ಮೀನು ಮಾರುವವನು" ಕಥೆಯನ್ನು ನಿಮ್ಮ ಅಭಿಪ್ರಾಯಗಳೊಂದಿಗೆ ಸಂಕ್ಷೇಪಿಸಿ ಬರೆಯಿರಿ.
ಅಥವಾ
ಆ) ಉದ್ಯೋಗದಲ್ಲಿ ಬದ್ಧತೆ ಮತ್ತು ಶ್ರದ್ದೆ ಇಲ್ಲದಿದ್ದರೆ ಹಲವಾರು ಅನಾಹುತಗಳು ಉಂಟಾಗುತ್ತವೆ
a
ಎಂದು ಲಮೇರಿಯಾ ಪಾಠದಲ್ಲಿ ಓದಿ ತಿಳಿದಿರುವಿರಿ ಅದರ ಆಧಾರದಲ್ಲಿ "ಉದ್ಯೋಗದಲ್ಲಿ ಬದ್ಧತೆ"
al
ಎಂಬ ವಿಷಯದ ಕುರಿತು ಪ್ರಬಂಧ ಬರೆಯಿರಿ.
er
K
T,
ER
C
lS
el
tC
en
m
es
ss
A
e
at
St
©
Page 7
SET A
Summative Assessment III 2025 26
(Model question paper)
KANNADA-PAPER I
Item/
Sco
Qn. Answer/Value Points Further Information
re
No.
1 1 ಹೇಳಿಕೆ 3
a
al
2 1 ಹೇಳಿಕೆ 3 ಮತ್ತು 4 ಸರಿಯಾಗಿದೆ.
er
3 1 ನಾಗನನ್ನು ಆಭರಣವಾಗಿ ಧರಿಸಿದವ
K
T,
4 1 1 ಮತ್ತು 3, 2 ಮತ್ತು 1
ER
ಪ್ರಕೃತಿ ಸಂರಕ್ಷಣೆಯ ಬಗ್ಗೆ ಎರಡು ಸಂದೇಶಗಳನ್ನು
ಬರೆದಿರಬೇಕು.
C
lS
5 2 ಉದಾಹರಣೆ :
. ಗಿಡ ಮರಗಳನ್ನು ಸಂರಕ್ಷಿಸಬೇಕು.
el
. ಮಳೆ ನೀರನ್ನು ಭೂಮಿಯಲ್ಲಿ ಇಂಗಿಸಬೇಕು.
tC
ಒಂದು ಪರ್ಯಾಯ ಪದವನ್ನು ಬರೆದಿರಬೇಕು.
en
ಉದಾಹರಣೆ :ಸೂರ್ಯ, ರವಿ,ಆದಿತ್ಯ.
ಪರ್ಯಾಯ ಪದದಿಂದ ವಾಕ್ಯ ರಚಿಸಿರಬೇಕು.
m
ಉದಾಹರಣೆ:
es
ಸೂರ್ಯನ ಆಗಮನದಿಂದ ಪ್ರಕೃತಿಯಲ್ಲಿರುವ ಜೀವ
ss
ಜಾಲಗಳಿಗೆ ಹೊಸ ಚೈತನ್ಯ ಮೂಡಿತು.
6(A)
A
ಕೊಟ್ಟಿರುವ ವಾಕ್ಯದ ವಿಶೇಷಾರ್ಥವನ್ನು
ಬರೆದಿರಬೇಕು.
e
Or 2
at
ಅಭಯದಾನ ಪಾಠದಿಂದ ಆರಿಸಲಾದ ಸಾಲು.
St
6(B) ಅಕ್ಕಿಯ ಕಾಳಿನಷ್ಟು ಮಾತ್ರ ಉಳಿದಿದ್ದ ಅಗ್ನಿಯ ಕಣವು
ವಾಯುನೊಂದಿಗೆ ಸೇರಿ ದಟ್ಟವಾದ ಕಾಡನ್ನು
©
ಸುಡುವಂತೆ ಏಕಾಂಗಿಯಾಗಿ ಉಳಿದಿದ್ದ
ಚಂದ್ರಗುಪ್ತನು ಚಾಣಕ್ಯನೊಂದಿಗೆ ಸೇರಿ
ಬಲಶಾಲಿಗಳಾದ ನವ ನಂದರನ್ನು ನಾಶ
ಮಾಡಬಲ್ಲನು.
ಯಕ್ಷಗಾನ ಪ್ರಸಂಗ ಪದ್ಯದ ಅರ್ಥಗಾರಿಕೆಯನ್ನು
7 3
ಬರೆದಿರಬೇಕು.
Page 8
ತಮ್ಮಾ ಭರತ, ನೀನೇನೋ ನನ್ನನ್ನು
ಅಯೋಧ್ಯೆಗೆ ಬಂದು ರಾಜ್ಯವಾಳಲು ಹೇಳುತ್ತಿದ್ದಿ.
ಆದರೆ ಅದು ಸರಿಯಲ್ಲ. ನಾನು ತಂದೆಗೆ ಕೊಟ್ಟ
ಮಾತಿನಂತೆ ಹದಿನಾಲ್ಕು ವರುಷ ಅರಣ್ಯ ವಾಸ
ಮಾಡಲೇಬೇಕು. ತಂದೆಗೆ ಕೊಟ್ಟ ಮಾತನ್ನು ಮೀರಿ
ನಡೆದವರುಂಟೆ? ಅದು ಸರಿಯಲ್ಲ. ಲೋಕದ
ಜನರಿಗೆ ಇದು ಆಶ್ಚರ್ಯದಾಯಕವಾಗಿರಬಹುದು.
ಸೂರ್ಯವಂಶದ ದೊರೆಯಾದ ದಶರಥನ ಮಗ
a
al
ಶ್ರೀರಾಮಚಂದ್ರ ಹೀಗೆ ಮಾಡಿದ್ದಾನೆ ಎಂದು ಲೋಕ
er
ಪ್ರಶ್ನಿಸಬಹುದು. ಆದ ಕಾರಣ ಹದಿನಾಲ್ಕು ವರುಷ
K
ಕಳೆದ ಮರುದಿನವೇ ನಾನು ಅಯೋಧ್ಯೆಗೆ ಬರುತ್ತೇನೆ
.ಇದು ಸುಳ್ಳಲ್ಲ.
T,
ಪದ್ಯದ ಸಾಲುಗಳಲ್ಲಿರುವ ಸ್ವಾರಸ್ಯಕರ ಅಂಶಗಳನ್ನು
ER
ಬರೆದಿರಬೇಕು
C
"ಡೊಂಬರ ಚೆನ್ನೆ" ಕಥನ ಕವನದಿಂದ ಆರಿಸಿದ
lS
ಸಾಲುಗಳಿವು.
ದೊಂಬರಾಟವು ಎಷ್ಟು ಅದ್ಭುತವಾಗಿತ್ತು ಎಂದರೆ
el
ಅಲ್ಲಿ ಸೇರಿದ ಜನರು ಯಾವುದೇ ಬೊಬ್ಬೆ
tC
ಹಾಕುತ್ತಿರಲಿಲ್ಲ .ಅವರ ಬಾಯಿಂದ ಸ್ವಲ್ಪವೂ ಸ್ವರ
en
ಹೊರಡುತ್ತಿರಲಿಲ್ಲ. ಮೌನವಾಗಿ ಆಶ್ಚರ್ಯದಿಂದ
8(A) ಡೊಂಬರಾಟವನ್ನು ಅವರು ವೀಕ್ಷಿಸುತ್ತಿದ್ದರು
m
.ಅವರು ಎಷ್ಟು ಮೌನವಾಗಿದ್ದರು ಎಂದರೆ ಎಳ್ಳು
es
ಬಿದ್ದರೂ ಅದರ ಸ್ವರ ಬೊಬ್ಬೆಯಂತೆ
ss
OR ಕೇಳಿಸುವಂತಿತ್ತು .ಅಲ್ಲಿ ಸೇರಿದ ಜನದಟ್ಟಣೆ ಎಷ್ಟಿತ್ತು
3
A
ಎಂದರೆ ಸಾಸಿವೆ ಕಾಳು ಹಾಕಲೂ ಎಡೆಯಲ್ಲಿ
e
ಜಾಗವಿರಲಿಲ್ಲ ಎಂದು ಕವಿ ಪಂಜೆ
at
8(B) ಮಂಗೇಶರಾಯರು ಸ್ವಾರಸ್ಯಕರವಾಗಿ ಹೇಳಿದ್ದಾರೆ.
St
ಇಲ್ಲಿ ಉತ್ಪ್ರೇಕ್ಷೆಯನ್ನು ನಾವು ಕಾಣಬಹುದು.
ಪದ್ಯದ ಸರಳ ಅನುವಾದವನ್ನು ಬರೆಯುವುದು
©
ಧರ್ಮರಾಜನ ಆಳ್ವಿಕೆಯಲ್ಲಿ ಛತ್ರಿಯನ್ನು ಮಾತ್ರವೇ
"ಕೊಡೆ"ಯೆನ್ನುತಿದ್ದರು.ಹೊಟ್ಟೆಯನ್ನು ಮಾತ್ರವೇ
"ಪೊಡೆ"ಯೆನ್ನುತ್ತಿದ್ದರು.ದುಂಬಿಯನ್ನು ಮಾತ್ರವೇ
"ಅಳಿ"ಯೆನ್ನುತ್ತಿದ್ದರು.ಕೊಡೆ ,ಪೊಡೆ.ಅಳಿ ಈ
ಪದಗಳು ನಕಾರಾತ್ಮಕ ಅರ್ಥಗಳಲ್ಲಿ
ಬಳಕೆಯಾಗುತ್ತಿರಲಿಲ್ಲ.
Page 9
2 ಪದ್ಯದ ಆಶಯವನ್ನು ಬರೆದಿರಬೇಕು.
ಆಸ್ವಾದನೆಯ ಅಂಶಗಳನ್ನು ಗುರುತಿಸಿರಬೇಕು.
ಮರಗಳಿಂದ ತುಂಬಿದ ತೋಟದ ಎಡೆಯಿಂದ
ರಭಸವಾಗಿ ಬೀಸಿ ಬರುವ ತಂಗಾಳಿ ಹುಲ್ಲುಗಾವಲಿನ
ಮೇಲೆ ಬೀಸಿದಾಗ ಹುಲ್ಲು ಇಬ್ಬದಿಗೂ ಸರಿದು
ನಡುವೆ ದಾರಿ ಮಾಡಿಕೊಡುತ್ತದೆ. ಇದು ತಲೆ
9 ಕೂದಲನ್ನು ಇಬ್ಬದಿಗೂ ಸರಿಸಿದಾಗ ನಡುವೆ ಕಾಣುವ
2
a
ಬೈತಲೆಯಂತೆ ಕವಿಗೆ ಗೋಚರಿಸುತ್ತದೆ. ಇಲ್ಲಿ ಕವಿ ದ
al
ರಾ ಬೇಂದ್ರೆಯವರ ಕಲ್ಪನೆ ಅದ್ಭುತವಾಗಿ ನಮಗೆ
er
ಕಾಣಿಸುತ್ತದೆ. ನುಗ್ಗಿ ನುಸುಳಿ ಬರು, ಬೈತಲೆ ಬಾಚು
K
ಎನ್ನುವ ಪದ ಪ್ರಯೋಗಗಳು ಪದ್ಯಕ್ಕೆ ಹೊಸ
T,
ಮೆರುಗನ್ನು ತಂದಿದೆ.
ER
ಲೇಖನ ಸ್ವರೂಪ.
ಬಸವಣ್ಣನ ವಚನವನ್ನು ಸರ್ವಜ್ಞ ವಚನದೊಂದಿಗೆ
2 ಹೋಲಿಸಿ ಬರೆದಿರಬೇಕು. C
lS
10 .ಪದ್ಯಗಳ ಪೂರ್ಣ ಆಶಯವನ್ನು ಗ್ರಹಿಸಿರಬೇಕು
el
ಸಾಮ್ಯ ವ್ಯತ್ಯಾಸಗಳನ್ನು ಗುರುತಿಸಿರಬೇಕು
tC
2
ಪಂಪನ ಪಿಡಿಯೆಂ ಪುರಿಗಣೆಯಂ ಕಾವ್ಯ ಭಾಗದಲ್ಲಿ
en
ಬರುವ ಕರ್ಣನ ಗುಣ ಸ್ವಭಾವ -ಕುಂತಿಯಲ್ಲಿ
m
11 2 ಅವನು ತೋರಿಸುವ ಪ್ರೀತಿ,
es
ಗೌರವ.......
ss
ದುರ್ಯೋಧನನಲ್ಲಿ ಅವನಿಗಿರುವ ಸ್ವಾಮಿನಿಷ್ಠೆ....
ಕರ್ಣನ ತ್ಯಾಗ..............
A
ಕಾವ್ಯ ಭಾಗದಲ್ಲಿ ಕರ್ಣನ ಪಾತ್ರಕ್ಕಿರುವ
e
1 ಪ್ರಾಧಾನ್ಯತೆ...
at
St
1 ಭಾಷಾ ಶೈಲಿ....
©
ಮಾಸ್ತಿ ವೆಂಕಟೇಶ ಅಯ್ಯಂಗಾರರ "ಪಡಿ" ಪಾಠದಲ್ಲಿ
1 ಅರಮನೆಗೆ ಬಂದ ಉತ್ತಯ್ಯತಕ್ಕನನ್ನು ರಾಣಿ
ಉಪಚರಿಸಿ ದ ರೀತಿ....
12
ಇಂದಿನ ಸಮಾಜದಲ್ಲಿ ವೃದ್ಧರ ಬಗ್ಗೆ ಇರುವ
1 ಮನೋಭಾವ....
1 ವೃದ್ಧರ ಸ್ಥಿತಿಗತಿ ,ಸ್ಥಾನಮಾನ ..
Page 10
1 ಭಾಷ ಶೈಲಿ......
ಭಾಷಾತಪ್ಪು, ಶಿಕ್ಷಣದ ಕೊರತೆಯಿಂದ ಉಂಟಾಗುವ
1 ಅವಾಂತರಗಳು- ತೊಂದರೆ- ಇತ್ಯಾದಿಗಳ ವಿವರಣೆ.
ದಿನಚರಿಯ ಶೈಲಿ.....
ಗಾಡಿ ಹುಸೇನಿಗೆ ನೀಡುವುದಕ್ಕೆ ಸಿರಿಲ್ ಒಂದು
3 ಲಕ್ಷದ ಚೆಕ್ಕನ್ನು ಕುಪ್ಪಣ್ಣಯ್ಯನಿಗೆ ಕಳುಹಿಸಿದ ದಿನ
13
ಅವನ ಮನಸ್ಸಿನಲ್ಲಿ ಬಂದ ಆಲೋಚನೆಗಳು.....
a
ಗುಮಾಸ್ತನು ಮಲೇರಿಯವನ್ನು ಲಮೇರಿಯಾ ಎಂದು
al
ಬರೆದ ನಂತರ ಆದ ಅವಾಂತರಗಳನ್ನು ಸಂಕ್ಷಿಪ್ತವಾಗಿ
er
3
ಬರೆದಿರಬೇಕು....
K
ಭಾಷ ಶೈಲಿ......
T,
1
ER
ಮೀನು ಮಾರುವವನು ಕಥೆಯನ್ನು ಸಂಕ್ಷೇಪಿಸಿ
3 ಬರೆಯುವುದು....
C
ರಜಾಕನು ಮೋಟಾರು ಕಾರು ಖರೀದಿಸಿದ್ದು...
lS
. ಮೋಟರು ಕಾರಿಗೆ ಆಕ್ಸಿಡೆಂಟ್ ಆದದ್ದು.....
el
14(A) . ರಜಾಕನು ಧೃತಿಗೆಡದೆ ಪುನ: ಮೀನು ಮಾರಾಟಕ್ಕೆ
tC
2 ಇಳಿದದ್ದು .
ಈ ಎಲ್ಲ ಅಂಶಗಳು ಒಳಗೊಳ್ಳಬೇಕು.
en
. ಸ್ವಂತ ಅಭಿಪ್ರಾಯವನ್ನು ಪ್ರಕಟಿಸಿರಬೇಕು.
m
1 ಉತ್ತಮ ಭಾಷ ಶೈಲಿ
es
ಪ್ರಬಂಧದ ಚೌಕಟ್ಟು. ...
ss
1
ಲಮೆರಿಯ ಪಾಠದಲ್ಲಿ ಗುಮಾಸ್ತನ ತಪ್ಪಿನಿಂದಾಗಿ ಆದ
A
2 ಅನಾಹುತಗಳನ್ನು ಗುರುತಿಸಿರಬೇಕು.
e
at
ಪ್ರಸ್ತುತ ಸಮಾಜದಲ್ಲಿ ಉದ್ಯೋಗದಲ್ಲಿ ಭದ್ಧತೆ
14(B)
St
2 ಇಲ್ಲದಿರುವುದರಿಂದ ಆಗುತ್ತಿರುವ ಪ್ರಮಾದಗಳನ್ನು
ಉಲ್ಲೇಖಿಸಿರಬೇಕು.
©
ಸ್ವಂತ ಅಭಿಪ್ರಾಯದೊಂದಿಗೆ ಪರಿಹಾರಗಳನ್ನು
1 ಸೂಚಿಸಿರಬೇಕು.
Page 11
SET A
Summative Assessment - III 2025 - 26
(Model question paper)
KANNADA-PAPER II
ಸಮಯ:1 ಗಂಟೆ 30 ನಿಮಿಷ ಮಾದರಿ ಪ್ರಶ್ನೆ ಪತ್ರಿಕೆ
Cool of time: 15 Min ಕನ್ನಡ II ತರಗತಿ:X
ಅಂಕಗಳು:40
ಸೂಚನೆಗಳು:
ಪ್ರಶ್ನೆಗಳನ್ನು ಓದಿ ಅರ್ಥೈಸಿಕೊಳ್ಳಲು ನಿಮಗೆ 15 ನಿಮಿಷ ಕಾಲಾವಕಾಶ ನೀಡಲಾಗಿದೆ.
ಎಲ್ಲಾ ಪ್ರಶ್ನೆಗಳನ್ನು ಸಾವಧಾನವಾಗಿ ಓದಿರಿ.
a
al
ಸೂಚನೆಗಳನ್ನು ಓದಿ ಅರ್ಥಮಾಡಿಕೊಂಡು ಕೊಡಲಾದ ಪ್ರಶ್ನೆಗಳಿಗೆ ಉತ್ತರಿಸಿರಿ.
er
K
1 ರಿಂದ 4 ವರೆಗಿನ ಎಲ್ಲಾ ಪ್ರಶ್ನೆಗಳಿಗೆ ಉತ್ತರಿಸಿರಿ. 4x1=4
T,
ER
1. ಸರಿಯಾದ ಹೊಂದಿಕೆಯನ್ನು ಆರಿಸಿ ಬರೆಯಿರಿ.
A B
C
lS
i. ಸನ್ನೆಯಲಿ ಬಿಡು ನಿನ್ನ ವಾಹನಗಳ i. ಆರೋಗ್ಯ ಸುರಕ್ಷೆ
ii. ಇದು ನಗರ; ಸಾವಿರ ದಾರಿ ಸಾವಿರ ಬೆಳಕು ii. ರಸ್ತೆ ಸುರಕ್ಷೆ
el
tC
ಅ. i ಮತ್ತು ii ಸರಿಯಾಗಿದೆ.
en
ಆ. ii ಮತ್ತು i ಸರಿಯಾಗಿದೆ.
m
ಇ. i ಮತ್ತು i ಸರಿಯಾಗಿದೆ.
es
ಈ. ಎಲ್ಲವೂ ಸರಿಯಾಗಿದೆ.
ss
A
2. ಈ ಕೆಳಗಿನವುಗಳಲ್ಲಿ ಸರಿಯಾದ ಭಾಷಾರೂಪ ಯಾವುದು ?
e
ಅ. ಸ್ವಾದೀನ
at
ಆ. ಸ್ವಾಧೀನ
St
ಇ. ಸ್ವಧೀನ
©
ಈ. ಸ್ವಧಿನ
3. ಕೆಳಗೆ ನೀಡಲಾದ ಸಾಲಿನಲ್ಲಿ ಅಡಿಗೆರೆ ಎಳೆದ ಪದದ ವಿಶೇಷಾರ್ಥವನ್ನು ಕೊಟ್ಟಿರುವ ಹೇಳಿಕೆಗಳಿಂದ
ಆರಿಸಿ ಬರೆಯಿರಿ.
ಕಾಲ ಉರುಳಿದಂತೆ ಅಜ್ಜಿಯ ಬಾಳಬಳ್ಳಿಯು ಹಬ್ಬಿತು.
i) ಅಜ್ಜಿಯ ಸಂಸಾರವು ಬೆಳೆಯಿತು
ii) ಅಜ್ಜಿಯ ಜೀವನ ಬಳ್ಳಿಯು ಬೆಳೆಯಿತು
Page 12
iii) ಅಜ್ಜಿಯ ಊರು ಬೆಳೆಯಿತು
iv) ಕಾಡು ಬೆಳೆಯಿತು
ಅ. ಹೇಳಿಕೆ i ಮತ್ತು ii ಸರಿಯಾಗಿದೆ
ಆ. ಹೇಳಿಕೆ ii ಮತ್ತು iii ಸರಿಯಾಗಿದೆ
ಇ. ಹೇಳಿಕೆ iii ಮತ್ತು iv ಸರಿಯಾಗಿದೆ
ಈ. ಹೇಳಿಕೆ ii ಮತ್ತು iv ಸರಿಯಾಗಿದೆ.
a
4. ಪ್ರಳಯ ಕೇರಳ ಕವನದಲ್ಲಿ ಬಂದಿರುವ ಈ ಕೆಳಗಿನ ಸಾಲುಗಳು ಯಾವ ಭಾವವನ್ನು
al
er
ಸೂಚಿಸುತ್ತದೆ?
K
ಜಲಧಿಯಾಯ್ತು ಸುತ್ತ ಪರಿಸರ
T,
ER
ಸುಪ್ತವಾಯ್ತು ಜನರ ಜೀವನ
C
ಅ. ಸಂಕಟ
lS
ಆ. ಕರುಣೆ
el
tC
ಇ. ಸಂತೋಷ
en
ಈ. ವಿಷಾದ
m
5 ಮತ್ತು 6 ನೇ ಪ್ರಶ್ನೆಗಳಿಗೆ ಉತ್ತರಿಸಿರಿ. 2x2=4
es
ss
5. ಕೆಳಗೆ ಕೊಡಲಾದ ವಾಕ್ಯಗಳನ್ನು ಶಿಷ್ಟ ರೂಪಕ್ಕೆ ಪರಿವರ್ತಿಸಿ ಬರೆಯಿರಿ.
A
ಬಿದ್ರು ಹಿಂಡ್ಲ ಬುಡ್ದಲ್ಲಿ ಸಟಸಟಾಂತ ಶಬ್ದ ಆದಂಗೆ ಕೇಳಿಸ್ತು.ಏನೂಂತ ಹೆದ್ರಿಕೇಂದ ಪುಟ್ಟ ಕಣ್ಣನ್ನು
e
ದೊಡ್ಡಕ್ಕೆ ಅರಳಿಸಿ ನೋಡ್ದಾಗ ಒಂದು ದೊಡ್ಡ ಹೆಬ್ಬುಲಿ ಕಾಣಿಸ್ತು.
at
6. ಅ) ತಾಯಿ, ಭೂಮಿಗಿಂತ ಹೆಚ್ಚು ತೂಕದ ವಸ್ತು. ತಂದೆ ಆಕಾಶಕ್ಕಿಂತ ಎತ್ತರ, ಅನಂತ. 'ಗೂಡು ಬಿಟ್ಟು ಹಾರಿದ
St
ಹಕ್ಕಿ' ಪಾಠದಲ್ಲಿ ಬರುವ ಈ ಸಾಲಿನ ವಿಶೇಷಾರ್ಥವೇನು ?
©
ಅಥವಾ
ಆ) "ಅಜ್ಜಿಯ ಸಹವಾಸ, ಪ್ರೀತಿ, ಬೈದ ಮಾತು ಎಲ್ಲ ದೀಪದಿಂದ ದೀಪ ಹಚ್ಚಿದಂತೆ ನೆನಪು. ಅವಳು ಬೈಯ್ದ
ನುಡಿ ಬುದ್ಧಿವಾದವೆನಿಸಿತು”. ‘ಗೂಡು ಬಿಟ್ಟು ಹಾರಿದ ಹಕ್ಕಿ' ಪಾಠದಲ್ಲಿ ಬಂದ ಈ ಮಾತಿನ ಮಾತಿನ
ಕುರಿತು ನಿಮ್ಮ ಅಭಿಪ್ರಾಯವನ್ನು ಬರೆಯಿರಿ.
7 ಮತ್ತು 8 ನೇ ಪ್ರಶ್ನೆಗಳಿಗೆ ಉತ್ತರಿಸಿರಿ. 2x3=6
Page 13
7. 'ಕಾಯುವ ಕರಗಳು' ಪಾಠದ ಹಿನ್ನೆಲೆಯಲ್ಲಿ ಪ್ರಾಕೃತಿಕ ದುರಂತಗಳ ಕುರಿತು ಜಾಗೃತಿ ಮೂಡಿಸುವ
ಭಿತ್ತಿಪತ್ರವನ್ನು ರಚಿಸಿರಿ.
8. 'ಬೇರುಗಳು ಅಮ್ಮನ ಹಾಗೆ' ಕವನದ ಈ ಕೆಳಗಿನ ಸಾಲುಗಳ ಸ್ವಾರಸ್ಯವನ್ನು ಬರೆಯಿರಿ.
ಅ) ತಲೆಯೆತ್ತಿ ಮೆರೆದಾಡುವ ಮಹಾಮರಕೆ
ತನಗೆ ಉಸಿರಾದ ಬೇರುಗಳು ಅರ್ಥವಾಗುವುದಿಲ್ಲ
ಅಥವಾ
a
al
ಆ) ಯಾರೂ ಬೇರುಗಳ ಬೆನ್ನು ತಟ್ಟುವುದಿಲ್ಲ
er
ಯಾವುದಕೂ ಬೇರುಗಳು ಬೇಸರಿಸುವುದಿಲ್ಲ
K
T,
ER
9 ರಿಂದ 13 ವರೆಗಿನ ಎಲ್ಲಾ ಪ್ರಶ್ನೆಗಳಿಗೆ ಉತ್ತರಿಸಿರಿ. 5x4=20
C
9. "ಪುತ್ರಶೋಕ ನಿರಂತರಂ' - "ಗೂಡುಬಿಟ್ಟು ಹಾರಿದ ಹಕ್ಕಿ' ಪಾಠದಲ್ಲಿ ಬರುವ ಈ ಮಾತಿನ
lS
ಆಧಾರದಲ್ಲಿ ಅಜ್ಜಿಯ ಮಗನ ಅಗಲಿಕೆಯ ನೋವನ್ನು ನಿಮ್ಮ ಮಾತುಗಳಲ್ಲಿ ಬರೆಯಿರಿ.
el
tC
10. ಸೈಬರ್ ಬೆದರಿಕೆಯು ಇಂದು ಮಕ್ಕಳು ಎದುರಿಸುತ್ತಿರುವ ಅತಿ ಗಂಭೀರವಾದ ಸಮಸ್ಯೆಯಾಗಿದೆ. ಇದರಿಂದ
ಮಕ್ಕಳು ಮಾನಸಿಕವಾಗಿ ಕುಗ್ಗಿಹೋಗುತ್ತಾರೆ. ಈ ಹಿನ್ನೆಲೆಯಲ್ಲಿ 'ಸಾಮಾಜಿಕ ಜಾಲತಾಣದ
en
ದುಷ್ಪರಿಣಾಮಗಳು' ಎಂಬ ವಿಷಯದ ಕುರಿತು ಕಿರುಲೇಖನ ಬರೆಯಿರಿ.
m
11. ಈ ಕೆಳಗಿನ ಗದ್ಯಭಾಗವನ್ನು ಆತ್ಮಕಥೆಯಾಗಿ ಪರಿವರ್ತಿಸಿ ಬರೆಯಿರಿ.
es
1920 ರಲ್ಲಿ ಅಂಬೇಡ್ಕರರು ಇನ್ನೂ ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ಲಂಡನಿಗೆ ಹೋದರು. ಲಂಡನಿನ ಪ್ರಾಚೀನ
ss
ವಸ್ತುಸಂಗ್ರಹಾಲಯ ಬೆಳಿಗ್ಗೆ ಎಂಟಕ್ಕೆ ತೆರೆಯುವ ಹೊತ್ತಿಗೆ ಅಲ್ಲಿರುತ್ತಿದ್ದರಂತೆ. ಐದು ಗಂಟೆಯವರೆಗೆ
A
ಓದುತ್ತಿದ್ದರಂತೆ. ಲಂಡನಿನಲ್ಲಿ ಅಸ್ನೋದ್ಕರ್ ಎಂಬ ವಿದ್ಯಾರ್ಥಿಯ ಪರಿಚಯ ವಾಯಿತು. ಅವನು ಬಹು
e
at
ಶ್ರೀಮಂತ ಮನೆಯವನು, ಓದು ಬೇಕಿಲ್ಲ. ಅವನಿಗೆ ಅಂಬೇಡ್ಕರರು ಹೇಳಿದರು: “ನಿನ್ನ ಮನೆಯವರು ಆಸ್ತಿ
St
ಮಾಡಿಟ್ಟಿರಬಹುದು. ಆದರೆ ಮನುಷ್ಯನಾಗಿ ಹುಟ್ಟಿ ನೀನೇನು ಸಾಧಿಸುತ್ತಿ, ಯೋಚಿಸು. ಬೇಕೆಂದಾಗ
ಜ್ಞಾನೇಶ್ವರಿ ಬರುವುದಿಲ್ಲ. ಅವಳು ಬಂದಾಗ ನಾವು ಅವಳ ಅನುಗ್ರಹ ಪಡೆಯಬೇಕು. 1922 ರಲ್ಲಿ
©
ಅಂಬೇಡ್ಕರರು 'ಬ್ಯಾರಿಸ್ಟರ್' ಎಂಬ ಪದವಿ ಪಡೆದು, ಮರುವರ್ಷ ಭಾರತಕ್ಕೆ ಮರಳಿ ಬಂದರು.
12. ಅನವರತ ದುಡಿಯುವ
ಅಸಂಖ್ಯ ಬೇರುಗಳಿಗೆ
ಆಕಾಶಕ್ಕೇರಿದ ಮರದ ಮೋರೆ
ಕಾಣಿಸುವುದಿಲ್ಲವಾದರೂ
Page 14
ಅದರ ಚಡಪಡಿಕೆ
ಹಸಿವು ನೀರಡಿಕೆ ಸರಿಯಾಗಿ ಅರ್ಥವಾಗುತ್ತದೆ.- 'ಬೇರುಗಳು ಅಮ್ಮನ ಹಾಗೆ' ಕವನದ ಈ ಸಾಲುಗಳಲ್ಲಿ
ಬೇರುಗಳ ನಿಸ್ವಾರ್ಥ ಮನೋಭಾವ ಅರಿವಾಗುತ್ತದೆ. ಅಂತೆಯೇ ಒಬ್ಬಳು ತಾಯಿಯು ತನ್ನ ಸಂಸಾರದ
ಏಳಿಗೆಗಾಗಿ ಹೇಗೆ ಅನವರತ ದುಡಿಯುತ್ತಾಳೆ ಎಂಬುದನ್ನು ನಿಮ್ಮ ಅನುಭವಗಳೊಂದಿಗೆ ಬರೆಯಿರಿ.
13. ಅ) "ನಾನು ಅಯ್ಯುನನ್ನು ನುಂಗಿ ನೀರು ಕುಡಿದೇ ಬಿಡುತ್ತೇನೆ......"
'ಮನೆ ಸುಟ್ಟ ಈಚೆಗೆ ಗುಳ್ಳನಿಗೆ ನಿದ್ರೆ ಚೆನ್ನಾಗಿ ಬರುವುದೇ ಕಡಿಮೆಯಾಗಿದ್ದಿತು.....
...........ಅಯ್ಯುವಿನ ಮನೆಯು ಅದರಲ್ಲಿದ್ದವರೊಂದಿಗೆ ಕೊಚ್ಚಿಕೊಂಡು ಹೋಗಿರುವುದು ಖಂಡಿತವೆಂದು
a
al
ಅವನಿಗೆ ನಂಬಿಕೆಯಾಯಿತು. ಗುಳ್ಳನು ಕೂಡಲೇ ಮಲಗಿದ್ದಲ್ಲಿಂದ ಎದ್ದನು.’
er
- ಮೇಲಿನ ಮಾತುಗಳ ಹಿನ್ನೆಲೆಯಲ್ಲಿ ಗುಳ್ಳನ ಪಾತ್ರ ಚಿತ್ರಣವನ್ನು ಮಾಡಿರಿ.
K
ಅಥವಾ
T,
ಆ) ಗೊರೂರು ರಾಮಸ್ವಾಮಿ ಅಯ್ಯಂಗಾರರ 'ಕಟ್ಟೆ ಒಡೆದಾಗ' ಕತೆಯನ್ನು ಓದಿದ್ದೀರಲ್ಲವೇ, ಕತೆಯ ಕೊನೆಯಲ್ಲಿ
ER
ಗುಳ್ಳನು ಅಯ್ಯುವಿನ ಮಡದಿ, ಮಕ್ಕಳನ್ನು ಸಂರಕ್ಷಿಸುತ್ತಾನಲ್ಲವೇ, ಬಳಿಕ ಗುಳ್ಳ ಹಾಗೂ ಅಯ್ಯುವಿನ
C
ನಡುವೆ ಯಾವ ರೀತಿಯಲ್ಲಿ ಮಾತುಕತೆ ನಡೆದಿರಬಹುದು ? ಊಹಿಸಿ ಸಂಭಾಷಣೆ ಬರೆಯಿರಿ.
lS
el
ಈ ಕೆಳಗಿನ ಪ್ರಶ್ನೆಗೆ ಉತ್ತರಿಸಿರಿ. 1x6=6
tC
14. ಅ) "ಅಜ್ಜಿಯ ಸಹವಾಸ,ಪ್ರೀತಿ, ಬೈದ ಮಾತು ಎಲ್ಲ ದೀಪದಿಂದ ದೀಪ ಹಚ್ಚಿದಂತೆ ನೆನಪು. ಅವಳು ಬಯ್ದ
en
ನುಡಿ ಬುದ್ಧಿವಾದವೆನಿಸಿತು...”
m
'ಗೂಡು ಬಿಟ್ಟು ಹಾರಿದ ಹಕ್ಕಿ' ಪಾಠದಲ್ಲಿ ಬಂದಿರುವ ಈ ಮಾತಿನ ಹಿನ್ನೆಲೆಯಲ್ಲಿ 'ಇಂದಿನ ಕುಟುಂಬ,
es
ಸಮಾಜದಲ್ಲಿ ವೃದ್ಧರ ಸ್ಥಾನಮಾನ ಮತ್ತು ಮಹತ್ವ'ದ ಕುರಿತು ಪ್ರಬಂಧ ಬರೆಯಿರಿ.
ss
ಅಥವಾ
A
ಆ) 'ವೆಚ್ಚಕ್ಕೆ ಹೊನ್ನಾಗಿ ಇಚ್ಛೆಯನರಿತ ಸತಿ ಇರಲು ಸ್ವರ್ಗಕ್ಕೆ ಕಿಚ್ಚು ಹಚ್ಚೆಂದ' ಎಂಬ ಸರ್ವಜ್ಞನ ಮಾತಿನಂತೆ
e
ಮಹಿಳೆಯರು ಮನೆಯನ್ನು ಉದ್ದರಿಸುವುದರ ಜೊತೆಗೆ ಸಮಾಜದ ಉದ್ಧಾರದಲ್ಲಿಯೂ ಮಹತ್ವದ
at
ಪಾತ್ರವನ್ನು ವಹಿಸುತ್ತಾರೆ. ಎಂಬುದನ್ನು 'ಮಹಿಳೆ ಮತ್ತು ಸಮಾಜ' ಎಂಬ ಪಾಠದಿಂದ ತಿಳಿದಿರುವಿರಿ.
St
‘ಮಹಿಳೆ ಮತ್ತು ಸಮಾಜಸೇವೆ' ಪಾಠದ ಆಧಾರದಲ್ಲಿ ಕುಟುಂಬ ನಿರ್ವಹಣೆಯಲ್ಲಿ ಮಹಿಳೆಯ
©
ಮಹತ್ವವನ್ನು ವಿವರಿಸಿ ಗೆಳೆಯ/ಗೆಳತಿಗೆ ಪತ್ರವನ್ನು ಬರೆಯಿರಿ.
Page 15
SET A
Summative Assessment -III 2025 - 26
(Model question paper)
KANNADA-PAPER II
Item/
Sco
Qn. Answer/Value Points Further Information
re
a
No.
al
i ಮತ್ತು ii ಸರಿಯಾಗಿದೆ.
er
1 1
K
2 1 ಸ್ವಾಧೀನ
T,
ಹೇಳಿಕೆ i ಮತ್ತು ii ಸರಿಯಾಗಿದೆ
ER
3 1
C
4 1 ಸಂಕಟ
lS
ಬಿದಿರ ಹಿಂಡಿಲಿನ ಬುಡದಲ್ಲಿ ಸಟಸಟ ಅಂತ ಶಬ್ದ
el
ಆದ ಹಾಗೆ ಕೇಳಿಸಿತು. ಏನು ಅಂತ ಹೆದರಿಕೊಂಡು
tC
5 2 ಪುಟ್ಟ ಕಣ್ಣನ್ನು ದೊಡ್ಡಕ್ಕೆ ಅರಳಿಸಿ ನೋಡಿದಾಗ
ಒಂದು ದೊಡ್ಡ ಹೆಬ್ಬುಲಿ ಕಾಣಿಸಿತು.
en
ತಾಯಿಯೆಂದರೆ ಭೂಮಿಗಿಂತಲೂ ಮಿಗಿಲಾದವಳು.
6(A)
m
ತಂದೆಯೆಂದರೆ ಅಪಾರ ಸಾಮರ್ಥ್ಯವುಳ್ಳವರು. ಇಲ್ಲಿ
es
Or 2 ತಂದೆ ತಾಯಿಯರ ಹಿರಿಮೆಯನ್ನು ಸೂಚಿಸಲಾಗಿದೆ.
ss
6(B) ವಿದ್ಯಾರ್ಥಿಯ ಅಭಿಪ್ರಾಯ
A
1 ಭಿತ್ತಿಪತ್ರದ ಸ್ವರೂಪ,
e
at
7
2 ವಿಷಯದ ಪ್ರಸ್ತುತಿ
St
8(A) ಉಸಿರಿಗೆ ಉಸಿರಾಗಿ ಮರಕೆ ಆಶ್ರಯವಾಗಿದ್ದ
©
3
ಬೇರುಗಳ ತ್ಯಾಗ ಅರ್ಥ ಮಾಡಿಕೊಳ್ಳಲು
Or
ಸಾಧ್ಯವಾಗುವುದಿಲ್ಲ. ಅದೇರೀತಿ ಅಮ್ಮನ ಪ್ರೀತಿ.
8(B) ಭಾಷಾ ಶೈಲಿ
ಮರಕೆ ಆಶ್ರಯವಾಗಿದ್ದ ಬೇರುಗಳ ತ್ಯಾಗವನ್ನು
ಯಾರೂ ಶ್ಲಾಘಿಸುವುದಿಲ್ಲ. ಹಾಗೆಯೇ ಅಮ್ಮನ
ತ್ಯಾಗವನ್ನೂ ಗುರುತಿಸುವವರು ವಿರಳ.
Page 16
ಭಾಷಾ ಶೈಲಿ
ಕುಟುಂಬಕ್ಕೆ ಆಧಾರವಾಗಿದ್ದ ಅಜ್ಜಿಯ ಮಗ- ಅಜ್ಜಿಯ
9 2 ಮಗನ ಅಗಲಿಕೆಯ ನೋವು ಇತ್ಯಾದಿಗಳ ಪ್ರಸ್ತುತಿ
2 ಭಾಷಾ ಶೈಲಿ
ಮನೆಯಲ್ಲಿರುವ ಹಿರಿಯರ ಮಾರ್ಗದರ್ಶನ -
ಮಾನವತೆ - ಪ್ರೀತಿ - ಕಿರಿಯರ ಬಗೆಗಿರುವ ಕಾಳಜಿ -
ಸಂಸ್ಕೃತಿಯ ಆಚರಣೆ - ಇತ್ಯಾರಿ ಜಾಲತಾಣಗಳಲ್ಲಿನ
a
2 ವೈವಿಧ್ಯಗಳು- ಉಪಯೋಗ,
al
10 ದುರುಪಯೋಗಗಳನ್ನೊಳಗೊಂಡ ಕಿರುಲೇಖನ-
er
ವಿಷಯದ ಸಮಗ್ರತೆ
K
ಭಾಷಾ ಶೈಲಿ
T,
2
ER
ನೀಡಲಾದ ಜೀವನ ಚರಿತ್ರೆಯನ್ನು ಆತ್ಮಕಥೆಯಾಗಿ
11 2 ಪರಿವರ್ತಿಸಿ ಬರೆಯುವುದು
ಭಾಷಾ ಶೈಲಿ C
lS
2
ಕುಟುಂಬದ ಏಳಿಗೆಗಾಗಿ ಅಮ್ಮನು ಸಲ್ಲಿಸುವ
el
ನಿಸ್ವಾರ್ಥ ಸೇವೆಯ ಕುರಿತಾಗಿ ತಮ್ಮ
tC
12 3
ಅನುಭವಗಳೊಂದಿಗೆ ಬರೆಯುವುದು.
en
1 ಭಾಷಾ ಶೈಲಿ
m
ಕಟ್ಟೆ ಒಡೆದಾಗ ಕಥೆಯ ಆಧಾರದಲ್ಲಿ ಗುಳ್ಳನ ಪಾತ್ರ
es
1.5 ಚಿತ್ರಣವನ್ನು ಮಾಡುವುದು.
ss
1.5 ಪಾತ್ರ ಪ್ರಸ್ತುತಿ, ವಿಷಯದ ಸಮಗ್ರತೆ.
13 (A)
A
1 ಭಾಷಾ ಶೈಲಿ,
e
at
St
1 ಗುಳ್ಳ ಮತ್ತು ಅಯ್ಯುವಿನ ನಡುವಿನ ಸಂಭಾಷಣೆ-
©
1 ಕನಿಷ್ಟ ೮ ಸಂಭಾಷಣೆಗಳಿರಬೇಕು.
13(B)
1 ಉತ್ತಮ ಭಾಷಾ ಶೈಲಿ,
1 ಆಶಯ ಸ್ಪಷ್ಟತೆ
Page 17
ಪ್ರಬಂಧದ ಆರಂಭ
4 ವಿಷಯದ ವಿಸ್ತಾರ
14(A) ಉಪಸಂಹಾರ
ಉತ್ತಮ ಭಾಷಾ ಶೈಲಿ, ಆಶಯಸ್ಪಷ್ಟತೆ ಯನ್ನೊಳ
2 ಗೊಂಡ ಪ್ರಬಂಧ.
ಕುಟುಂಬದಲ್ಲಿ ಮತ್ತು ಸಮಾಜದಲ್ಲಿ ಹಿರಿಯರ
ಸ್ಥಾನಮಾನ, ಅವರ ಅನುಭವ ಸಂಪತ್ತು, ಅವರಿಗೆ
ನೀಡಬೇಕಾದ ಗೌರವ, ಕಾಳಜಿ ಇತ್ಯಾದಿ
a
4
al
ವಿಚಾರಗಳನ್ನು ಒಳಗೊಂಡ ಪ್ರಬಂಧ
er
14(B)
K
2 ಭಾಷಾ ಶೈಲಿ, ಆಶಯ ಸ್ಪಷ್ಟತೆ
T,
ER
C
lS
el
tC
en
m
es
ss
A
e
at
St
©
Page 18
AglaSem Earn While You Learn Program!
Share your recent question papers with us and get paid!
अपने हाल के न प हम भेज और कमाएँ!
To participate, email us with the following details:
भाग लेने के लए हम न न ववरण के साथ ईमेल कर:
- Your Name
- Your Class
- Your Board
- Details of the Question Papers you have
आपके पास उपल ध न प का ववरण
Our team will reach out to you with the next steps.
हमार ट म आगे क या के लए आपसे संपक करे गी।
Email: support@
Page 19
Study Materials
Notes
Model Papers Class 6 Notes
Sample Papers Class 7 Notes
Half Yearly Sample Papers Class 8 Notes
Class 9 Notes
Important Resources
Class 10 Notes
Periodic Table
Class 11 Notes
Writing Skills / Formats
Maps of India / World Class 12 Notes
Books and Solutions
NCERT Books
NCERT Book Solutions
HC Verma Chapter Wise Solutions
RD Sharma Solutions
CGBSE Solutions